ಭಾರತದಲ್ಲಿ Realme GT 7 Series ಬಿಡುಗಡೆಯಾಗಿದೆ! ಬೆಲೆ, ಫೀಚರ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ!

Updated on 27-May-2025
HIGHLIGHTS

ಭಾರತದಲ್ಲಿ ರಿಯಲ್‌ಮಿ (Realme) ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ.

ರಿಯಲ್‌ಮಿ ಬ್ರಾಂಡ್ Realme GT 7 ಮತ್ತು Realme GT 7T ಎಂಬ ಎರಡು ಮಾದರಿಗಳನ್ನು ಪರಿಚಯಿಸಿದೆ.

Realme GT 7 Series ಸ್ಮಾರ್ಟ್ಫೋನ್ಗಳಲ್ಲಿ 7000mAh ಬ್ಯಾಟರಿಯೊಂದಿಗೆ ಅನೇಕ ಫೀಚರ್ಗಳೊಂದಿಗೆ ಬಿಡುಗಡೆಯಾಗಿದೆ.

ಭಾರತದಲ್ಲಿ ರಿಯಲ್‌ಮಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಕಂಪನಿ ಇದರಲ್ಲಿ Realme GT 7 ಮತ್ತು Realme GT 7T ಎಂಬ ಎರಡು ಮಾದರಿಗಳನ್ನು ಪರಿಚಯಿಸಿದೆ. Realme ಈ ಸ್ಮಾರ್ಟ್‌ಫೋನ್‌ಗಳನ್ನು ಪವರ್ಫುಲ್ ಫೀಚರ್ಗಳೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ಗಳೊಂದಿಗೆ ಬರುತ್ತವೆ. ಅಲ್ಲದೆ ಕಂಪನಿ ಈ ಮಾದರಿಗಳಲ್ಲಿ ಬರೋಬ್ಬರಿ 7000 mAh ಬ್ಯಾಟರಿಯೊಂದಿಗೆ ಕೊಂಚ ಹೆಚ್ಚಿನ ಬೆಲೆಗೆ ಬಿಡುಗಡೆಯಾಗಿದೆ. ಹಾಗಾದ್ರೆ ಈ Realme GT 7 Series ಸ್ಮಾರ್ಟ್‌ಫೋನ್‌ಗಳ ಆಫರ್ ಬೆಲೆ ಮತ್ತು ಸಂಪೂರ್ಣ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.

Realme GT 7 Series ಸ್ಮಾರ್ಟ್‌ಫೋನ್‌ಗಳ ಆಫರ್ ಬೆಲೆ ಎಷ್ಟು?

ರಿಯಲ್‌ಮಿ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ನೋಡುವುದಾದರೆ ಮೊದಲಿಗೆ Realme GT 7T ಸ್ಮಾರ್ಟ್ಫೋನ್ ಒಟ್ಟು ನಾಲ್ಕು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು ಇದರ ಆರಂಭಿಕ 8GB + 256GB ಮಾದರಿಯ ಬೆಲೆ 34,999 ರೂಗಳಾಗಿವೆ. ಇದರ ಮತ್ತೊಂದು 12GB + 256GB ಸ್ಟೋರೇಜ್ 37,999 ರೂಗಳಾಗಿವೆ. ಮತ್ತು ಕೊನೆಯದಾಗಿ ಇದರ 12GB + 512GB RAM ಸ್ಟೋರೇಜ್ 41,999 ರೂಗಳಾಗಿವೆ.

ಇದರ ಕ್ರಮವಾಗಿ Realme GT 7 ಸ್ಮಾರ್ಟ್ಫೋನ್ ಒಟ್ಟು ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು ಇದರ ಆರಂಭಿಕ 8GB + 256GB ಸ್ಟೋರೇಜ್ 39,999 ರೂಗಳಾಗಿವೆ. ಮತ್ತೊಂದು ಇದರ 12GB RAM + 256GB ಸ್ಟೋರೇಜ್ 42,999 ರೂಗಳಾಗಿವೆ. ಕೊನೆಯದಾಗಿ ಇದರ 12GB RAM + 512GB ಸ್ಟೋರೇಜ್ 46,999 ರೂಗಳಾಗಿವೆ. ಅಲ್ಲದೆ ಹೆಚ್ಚುವರಿಯಾಗಿ 2000 ರೂಗಳ ಬ್ಯಾಂಕ್ ಆಫರ್ ಸಹ ಪಡೆಯಬಹುದು. ಈ ಎರಡು ಸ್ಮಾರ್ಟ್ಫೋನ್ಗಳು ಪ್ರತ್ಯೇಕವಾಗಿ ಅಮೆಜಾನ್ ಮೂಲಕ 30ನೇ ಮೇ 2025 ರಂದು ಮೊದಲ ಮಾರಾಟಕ್ಕೆ ಬರಲಿದೆ.

Realme GT 7 ಫೋನ್‌ ಫೀಚರ್ ಮತ್ತು ವಿಶೇಷತೆಗಳೇನು?

Realme GT 7 ಸ್ಮಾರ್ಟ್ಫೋನ್ 6.78 ಇಂಚಿನ 1.5K AMOLED ಡಿಸ್ಪ್ಲೇಯ (1264 x 2780 ಪಿಕ್ಸೆಲ್‌ಗಳು) 6000 ನಿಟ್ಸ್ ಪೀಕ್ ಬ್ರೈಟ್‌ನೆಸ್ 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಹೊಂದಿದೆ. Realme GT 7 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಯೂನಿಟ್ ಹೊಂದಿದೆ. ಇದರಲ್ಲಿ OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ Sony IMX906 ಬರೋಬ್ಬರಿ 1.56 ಇಂಚಿನ ಕ್ಯಾಮೆರಾ 50MP ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ OV08D10 ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿಗಳಿಗಾಗಿ ಫೋನ್ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Realme GT 7 ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಜೊತೆಗೆ MediaTek Dimensity 9400e ಪ್ರೊಸೆಸರ್‌ನೊಂದಿಗೆ ಬರುತ್ತದೆ. Realme GT 7 ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, ಡ್ಯುಯಲ್-ಬ್ಯಾಂಡ್ GPS, NFC ಮತ್ತು Wi-Fi 7 ಸೇರಿವೆ. ಇದು ಡಸ್ಟ್ ಮತ್ತು ವಾಟರ್ ಪ್ರತಿರೋಧಕ್ಕಾಗಿ IP69 ರೇಟಿಂಗ್ ಅನ್ನು ಹೊಂದಿದೆ. Realme GT 7 ಸ್ಮಾರ್ಟ್ಫೋನ್ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7000mAh ಬ್ಯಾಟರಿಯನ್ನು ಹೊಂದಿದೆ.

Realme GT 7T ಫೋನ್‌ ಫೀಚರ್ ಮತ್ತು ವಿಶೇಷತೆಗಳೇನು?

Realme GT 7T ಸ್ಮಾರ್ಟ್ಫೋನ್ 6.80 ಇಂಚಿನ 1.5K AMOLED ಡಿಸ್ಪ್ಲೇಯ (1280 x 2800 ಪಿಕ್ಸೆಲ್‌ಗಳು) 6000 ನಿಟ್ಸ್ ಪೀಕ್ ಬ್ರೈಟ್‌ನೆಸ್ 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಹೊಂದಿದೆ.

ಇದನ್ನೂ ಓದಿ: NXTPAPER ಡಿಸ್ಪ್ಲೇ ಮತ್ತು 108MP ಕ್ಯಾಮೆರಾದ Alcatel V3 Series ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

Realme GT 7 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಯೂನಿಟ್ ಹೊಂದಿದ್ದು ಇದರಲ್ಲಿ OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ Sony IMX896 ಬರೋಬ್ಬರಿ 1.56 ಇಂಚಿನ ಕ್ಯಾಮೆರಾ 50MP ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ OV08D10 ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿಗಳಿಗಾಗಿ ಫೋನ್ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Realme GT 7T ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಜೊತೆಗೆ MediaTek Dimensity 8400 ಪ್ರೊಸೆಸರ್‌ನೊಂದಿಗೆ ಬರುತ್ತದೆ. Realme GT 7T ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, ಡ್ಯುಯಲ್-ಬ್ಯಾಂಡ್ GPS, NFC ಮತ್ತು Wi-Fi 7 ಸೇರಿವೆ. ಇದು ಡಸ್ಟ್ ಮತ್ತು ವಾಟರ್ ಪ್ರತಿರೋಧಕ್ಕಾಗಿ IP69 ರೇಟಿಂಗ್ ಅನ್ನು ಹೊಂದಿದೆ. Realme GT 7T ಸ್ಮಾರ್ಟ್ಫೋನ್ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :