Realme ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ! ಹೊಸ ಬೆಲೆ ಹೀಗಿವೆ

HIGHLIGHTS

ರಿಯಲ್‌ಮಿ 16 ಪ್ರೊ ಹಾಗೂ ರಿಯಲ್‌ಮಿ 16T ಮೊಬೈಲ್‌ಗಳ ದರದಲ್ಲಿ ಏರಿಕೆ

ರಿಯಲ್‌ಮಿ 16 ಪ್ರೊ ಪ್ಲಸ್‌ ಹಾಗೂ ರಿಯಲ್‌ಮಿ C83 5G ಫೋನ್‌ ಬೆಲೆಗಳಲ್ಲಿ ಹೆಚ್ಚಳ

ರಿಯಲ್‌ಮಿ 16 ಪ್ರೊ ಮೊಬೈಲ್‌ ಟಾಪ್‌ ಎಂಡ್‌ ಮಾಡೆಲ್‌ ಬೆಲೆಯಲ್ಲಿ 4,000 ರೂ.ಗಳ ಏರಿಕೆ

Realme ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ! ಹೊಸ ಬೆಲೆ ಹೀಗಿವೆ

ಜನಪ್ರಿಯ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾಗಿರುವ ರಿಯಲ್‌ಮಿ ಕಂಪನಿಯ ಕೆಲವು ಮೊಬೈಲ್‌ಗಳು ದೇಶೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ಆದರೆ ಇದೀಗ ರಿಯಲ್‌ಮಿ ಸಂಸ್ಥೆಯ Realme 16 Pro+, ರಿಯಲ್‌ಮಿ 16 ಪ್ರೊ, ರಿಯಲ್‌ಮಿ 16T, ರಿಯಲ್‌ಮಿ C83 5G ಮತ್ತು ರಿಯಲ್‌ಮಿ C100x 4G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಏರಿಕೆ ಆಗಿದ್ದು ಖರೀದಿದಾರರು ಅಚ್ಚರಿಯಿಂದ ನೋಡುವಂತಾಗಿದೆ. ರಿಯಲ್‌ಮಿ ಮೊಬೈಲ್‌ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಹೊಸ ಮೊಬೈಲ್‌ ಖರೀದಿಸುವ ಗ್ರಾಹಕರು ಎರಡು ಬಾರಿ ಯೋಚಿಸುವಂತಾಗಿದೆ. ಕಂಪನಿಯು ಮೊಬೈಲ್‌ಗಳ ಮಾಡೆಲ್‌ ಆದರಿಸಿ 1,000 ರೂ.ಗಳಿಂದ 4,000 ರೂ.ಗಳ ಏರಿಕೆ ಮಾಡಲಾಗಿದೆ. ಹಾಗಾದರೆ ರಿಯಲ್‌ಮಿ ಕಂಪನಿಯ ಬೆಲೆ ಏರಿಕೆ ಕಂಡ ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Motorola Edge 70 Fusion ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ! 7,000mAh ಬ್ಯಾಟರಿ

Realme ಸಂಸ್ಥೆಯ ಈ ಮೊಬೈಲ್‌ಗಳ ಬೆಲೆ ಏರಿಕೆ

ಭಾರತದಲ್ಲಿ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 16 ಸರಣಿಯ ಕೆಲವು ಮೊಬೈಲ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ ಆಗಿದೆ. ಆ ಪೈಕಿ ಕಂಪನಿಯ ರಿಯಲ್‌ಮಿ 16 Pro+ ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 49,999 ರೂ.ಗಳು ಆಗಿದ್ದರೆ, ಹೊಸ ಬೆಲೆ 53,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 52,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 55,999 ರೂ.ಗಳು ಆಗಿದೆ. ಇನ್ನು 12GB + 256GB ವೇರಿಯಂಟ್‌ ಹೊಸ ಬೆಲೆ 58,999 ರೂ.ಗಳು ಆಗಿದೆ.

Realme 16 Pro

ರಿಯಲ್‌ಮಿ 16 Pro ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 40,999 ರೂ.ಗಳು ಆಗಿದ್ದರೆ, ಹೊಸ ಬೆಲೆ 44,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 43,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 46,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 46,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 49,999 ರೂ.ಗಳು ಆಗಿದೆ.

ರಿಯಲ್‌ಮಿ 16 5G ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆ 36,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 38,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 39,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 41,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 42,999 ರೂ.ಗಳು ಆಗಿದೆ.

ರಿಯಲ್‌ಮಿ 16T ಮೊಬೈಲ್‌ನ 6GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 31,999 ರೂ.ಗಳು ಆಗಿದ್ದರೆ, ಹೊಸ ಬೆಲೆ 32,999 ರೂ.ಗಳು ಆಗಿದೆ. ಹಾಗೆಯೇ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 34,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 35,999 ರೂ.ಗಳು ಆಗಿದೆ. ಅದೇ ರೀತಿ 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 36,999 ರೂ.ಗಳು ಆಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile