realme 14T 5G Launch today Price in India Features and Specifications
Realme 14T 5G is launching in India: ಭಾರತದಲ್ಲಿ ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ರಿಯಲ್‌ಮಿ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದನ್ನು Realme 14T 5G ಎಂದು ಹೆಸರಿಸಿದ್ದು ಬೀಡುಗಡೆಗೂ ಮುಂಚೆಯೇ ಅನೇಕ ಫೀಚರ್ಗಳನ್ನು ಬಹಿರಂಗಪಡಿಸಿದೆ. ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಮೈಕ್ರೋಸೈಟ್ ಪೇಜ್ ಸಹ ಲೈವ್ ಮಾಡಿರುವ ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಬಿಡುಗಡೆಯ ನಂತರ ನೇರವಾಗಿ ಮತ್ತು ಪ್ರತ್ಯೇಕವಾಗಿ ಮಾರಾಟವಾಗಲಿರುವ ಬಗ್ಗೆ ಖಚಿತಪಡಿಸುತ್ತದೆ. Realme 14T 5G ಸ್ಮಾರ್ಟ್ಫೋನ್ ವಿಶೇಷಗಳೆಂದರೆ ಇಂಟ್ರೆಸ್ಟಿಂಗ್ Ai ಫೀಚರ್ಗಳ ಲೋಡೆಡ್ ಫೋನ್ 6000mAh ಬ್ಯಾಟರಿಯೊಂದಿಗೆ IP69 ಪ್ರೊಟೆಕ್ಷನ್ ರೇಟಿಂಗ್ ಹೊಂದಿದೆ.
Realme 14T 5G ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಕಂಪನಿ ಈಗಾಗಲೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇದರ ಡೇಟ್ ಮತ್ತು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗುವುದರ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡಿದೆ. ಅಲ್ಲದೆ ಸ್ಮಾರ್ಟ್ಫೋನ್ ಪ್ರಮುಖವಾಗಿ ಗೇಮಿಂಗ್ ವಲಯಕ್ಕೆ ಸೀಮಿತವಾಗಿದ್ದು ಅತ್ಯುತ್ತಮ ಪರ್ಫಾರ್ಮೆನ್ಸ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವುದಾಗಿ ಡಿಸೆಂಟ್ ವ್ಯಾಲ್ಯೂ ಫಾರ್ ಮನಿಯಾಗುವ ನಿರೀಕ್ಷೆಗಳಿವೆ.
ಈ ಮುಂಬರಲಿರುವ Realme 14T 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಒಟ್ಟು ಎರಡು ಮಾದರಿಯಲ್ಲಿ ಬರುವ ನಿರೀಕ್ಷೆ ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಸುಮಾರು 17,999 ರೂಗಳಿಗೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಸುಮಾರು 19,999 ರೂಗಳಿಗೆ ನಿರೀಕ್ಷಿಸಲಾಗಿದೆ.
ಈ ಮುಂಬರಲಿರುವ Realme 14T 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರ ಮತ್ತು 2100nits ಗರಿಷ್ಠ ಹೊಳಪಿನೊಂದಿಗೆ AMOLED FHD+ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ ವೆಟ್ ಟಚ್ ಮೋಡ್ ಅನ್ನು ಸಹ ಹೊಂದಿದೆ. ಈ ಸ್ಮಾರ್ಟ್ಫೋನ್ Dimensity 6300 ಚಿಪ್‌ಸೆಟ್‌ನಲ್ಲಿ ಆಂಡ್ರಾಯ್ಡ್ 15 ಮೂಲಕ Realme UI 6.0 ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ.
6000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಹೊಂದಿರುವುದಾಗಿ ಬರಲಿದೆ? ಸ್ಮಾರ್ಟ್ಫೋನ್ 50MP OIS Main OmniVision OV50D ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 6MP Selfie Sony IMX480 ಸೇಲ್ಫಿ ಕ್ಯಾಮೆರಾದೊಂದಿಗೆ ಸೇರಿದಂತೆ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. Realme 14T 5G ಪ್ರೀಮಿಯಂ ಮತ್ತು ಬಾಳಿಕೆ ಬರುವ ವಿನ್ಯಾಸವನ್ನು ಹೊಂದಿರುತ್ತದೆ. ಹೆಚ್ಚು ಖರ್ಚು ಮಾಡದೆ ತಮ್ಮ ಫೋನ್‌ನಿಂದ ಹೆಚ್ಚಿನದನ್ನು ನಿರೀಕ್ಷಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಹಿಂಭಾಗದಲ್ಲಿ 50MP AI ಸೆನ್ಸರ್ ಸೆಟಪ್ ಅನ್ನು ಹೊಂದಿರುತ್ತದೆ. ಉಳಿದ ವಿಶೇಷಣಗಳನ್ನು ಬಿಡುಗಡೆ ದಿನದಂದು ಘೋಷಿಸಲಾಗುತ್ತದೆ.