POCO X7 Pro 5G ಸ್ಮಾರ್ಟ್ಫೋನ್ Dimensity 8400 Ultra ಪ್ರೊಸೆಸರ್ನೊಂದಿಗೆ ಬಿಡುಗಡೆ ಡೇಟ್ ಫಿಕ್ಸ್!
ಪೊಕೊ (POCO) ತನ್ನ ಮುಂಬರಲಿರುವ POCO X7 Series ಹೊಸ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ.
POCO X7 Series ಬಿಡುಗಡೆಯನ್ನು 9ನೇ ಜನವರಿ 2025 ರಂದು ಸಂಜೆ 5:30 ಗಂಟೆಗೆ ನಿಗದಿಪಡಿಸಲಾಗಿದೆ.
POCO X7 5G ಮತ್ತು POCO X7 Pro 5G ಎರಡು 5G ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
POCO X7 Pro 5G India Luanch: ಸ್ಮಾರ್ಟ್‌ಫೋನ್ ಬ್ರ್ಯಾಂಡ್ POCO ತನ್ನ ಮುಂಬರುವ POCO X7 5G Series ಅನ್ನು ಮುಂದಿನ ತಿಂಗಳು ಅಂದ್ರೆ 9ನೇ ಜನವರಿ 2025 ರಂದು ಭಾರತದಲ್ಲಿ ಹೊಸ ವರ್ಷದ ದಿನದಂದು ಸಂಜೆ 5:30 ಗಂಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯು ಈ ಸರಣಿಯಲ್ಲಿ ಎರಡು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಅವುಗಳೆಂದರೆ POCO X7 5G ಮತ್ತು POCO X7 Pro 5G ಕೇವಲ ಎರಡು ರೂಪಾಂತರಗಳಲ್ಲಿ. ಕಂಪನಿಯು ಈಗಾಗಲೇ ತನ್ನ ಟ್ವಿಟರ್ ಖಾತೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡಿದೆ.
Surveyಭಾರತದಲ್ಲಿ POCO X7 Pro 5G ನಿರೀಕ್ಷಿತ ಬೆಲೆ
ಕೆಲವು ನಿರೀಕ್ಷಿತ ಫೀಚರ್ಗಳ ಬಗ್ಗೆ ಮಾತನಾಡುವುದಾದರೆ ಅದರಲ್ಲೂ ಮುಖ್ಯವಾಗಿ ಈ POCO X7 Pro 5G ಸುಮಾರು ₹30,000 ರೂಗಳೊಳಗೆ ಬಿಡುಗಡೆಗೊಳಿಸುವುದಾಗಿ ಪೋಸ್ಟ್ ಮಾಡಿದೆ. ಈ ಮುಂಬರಲಿರುವ POCO X7 Pro 5G ಸ್ಮಾರ್ಟ್ಫೋನ್ 8GB ಮತ್ತು 12GB LPDDR4X RAM ಕ್ರಮವಾಗಿ 256GB ಮತ್ತು 512GB ಸ್ಟೋರೇಜ್ನೊಂದಿಗೆ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುವ ನಿರೀಕ್ಷೆಯಿದೆ.
Pronto a vivere un'esperienza rivoluzionaria? POCO X7 Pro: punteggio AnTuTu da 1.704.330*!
— POCO Italia (@poco_italia) December 31, 2024
Unisciti a noi il 9 gennaio alle 13:00 per assistere al debutto mondiale del flagship Dimensity 8400-Ultra🔥#POCOX7Pro #POCOX7Series
*Dati basati su AnTuTu v10 da POCO Internal Labs. pic.twitter.com/76ZXeCXf7V
ಅಲ್ಲದೆ ಈ ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಈಗಾಗಲೇ ಮಾಹಿತಿ ನೀಡುವುದನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಸುಮಾರು 27,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಸುಮಾರು 29,999 ರೂಗಳಿಗೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬರುವುದಾಗಿ ನಿರೀಕ್ಷಿಸಲಾಗಿದೆ.
Also Read: POCO X7 Series ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?
POCO X7 Pro 5G ನಿರೀಕ್ಷಿತ ಫೀಚರ್ಗಳೇನು?
POCO X7 Pro ಸ್ಮಾರ್ಟ್ಫೋನ್ 6.67 ಇಂಚಿನ 1.5K OLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 3200 ನಿಟ್ಸ್ ವರೆಗೆ ಬ್ರೈಟ್ನೆಸ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ ನಿರೀಕ್ಷಿಸಬಹುದು. ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 50MP ಪ್ರೈಮರಿ ಸೆನ್ಸರ್ ಜೊತೆಗೆ ಮತ್ತೊಂದು 8MP ಅಲ್ಟ್ರಾ-ವೈಡ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಹೋಲುತ್ತದೆ. ಅಲ್ಲದೆ ಇದರ ಮುಂಭಾಗದಲ್ಲಿ 20MP ಸೆಲ್ಫಿ ಶೂಟರ್ ಅನ್ನು ಸಹ ನಿರೀಕ್ಷಿಸಲಾಗಿದೆ.
POCO X7 Pro 5G ಸ್ಮಾರ್ಟ್ಫೋನ್ 4nm ಪ್ರಕ್ರಿಯೆಯ ಆಧಾರದ ಮೇಲೆ MediaTek ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ ಮತ್ತು ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳಿಗಾಗಿ Mali G720 MC6 GPU ನೊಂದಿಗೆ ಜೋಡಿಸಲಾಗಿದೆ. POCO X7 Pro 5G ಸ್ಮಾರ್ಟ್ಫೋನ್ 90W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಫೋನ್ 6,000mAh ಬ್ಯಾಟರಿಯೊಂದಿಗೆ ಬರಬೇಕು. ಎರಡೂ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ Xiaomi ಇತ್ತೀಚಿನ HyperOS 2.0 ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile