8,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ POCO M8 Power ಮೊಬೈಲ್‌ ಬಿಡುಗಡೆ! ಬೆಲೆ ನೋಡಿ

HIGHLIGHTS

ಪೊಕೊ M8 ಪವರ್‌ ಫೋನ್ ಡ್ಯುಯಲ್‌ ಕ್ಯಾಮೆರಾ ಒಳಗೊಂಡಿದೆ

ಪೊಕೊ M8 ಪವರ್‌ ಮೊಬೈಲ್‌ 8,000mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ

ಪೊಕೊ M8 ಪವರ್‌ ಫೋನ್‌ ಆರೆಂಜ್, ಗ್ರೀನ್‌ ಮತ್ತು ಬ್ಲ್ಯಾಕ್‌ ಕಲರ್‌ ಆಯ್ಕೆ ಹೊಂದಿದೆ

ಪ್ರಮುಖ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾದ ಪೊಕೊ ಮೊಬೈಲ್‌ ಕಂಪನಿಯು ಹೊಸದಾಗಿ POCO M8 Power ಸ್ಮಾರ್ಟ್‌ಫೋನ್‌ ಅನ್ನು ಇಂದು (ಆಗಷ್ಟ್‌ 4 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೀಡ್‌ರೇಂಜ್‌ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ. ಅಲ್ಲದೇ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇದರೊಂದಿಗೆ ಈ ಫೋನ್‌ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿದೆ. ಇನ್ನು ಈ ಫೋನ್‌ ಆರೆಂಜ್, ಗ್ರೀನ್‌ ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹಾಗಾದರೇ ಪೊಕೊ M8 ಪವರ್‌ ಮೊಬೈಲ್‌ ಬೆಲೆ, ಸೇಲ್‌ ಡೇಟ್ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ChatGPT ಮಾತ್ರವಲ್ಲ! ವಿದ್ಯಾರ್ಥಿಗಳಿಗೆ ಉಪಯುಕ್ತ AI ಟೂಲ್‌ಗಳು ಇಲ್ಲಿವೆ ನೋಡಿ

POCO M8 Power ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಪೊಕೊ ಕಂಪನಿಯ ಹೊಸ ಪೊಕೊ M8 ಪವರ್‌ ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ಈ ನೂತನ ಫೋನಿನ 6GB RAM + 128GB ವೇರಿಯಂಟ್‌ ಬೆಲೆಯು 24,999 ರೂ.ಗಳು ಆಗಿದೆ. ಹಾಗೆಯೇ 8GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 27,999 ರೂ.ಗಳು ಆಗಿದೆ. ಇನ್ನು ಈ ಫೋನ್‌ ಆಗಸ್ಟ್ 7 ರಂದು ಫ್ಲಿಪ್‌ಕಾರ್ಟ್‌ ಫ್ರಿಡಂ ಸೇಲ್‌ ಮೂಲಕ ಭಾರತದಲ್ಲಿ ಸೇಲ್‌ಗೆ ಬರಲಿದೆ. ಅಂದಹಾಗೆ ಈ ಮೊಬೈಲ್‌ ಆರೆಂಜ್, ಗ್ರೀನ್‌ ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಪೊಕೊ M8 ಪವರ್‌ ಫೋನಿನ ಫೀಚರ್ಸ್‌ ಹೀಗಿವೆ

ಪೊಕೊ M8 ಪವರ್‌ ಫೋನ್‌ 6.83 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿವೆ. ಇದರ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 1,800 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಫೋರ್ಟ್‌ ಪಡೆದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲಾಗಿದೆ ಮತ್ತು ವೆಟ್ ಟಚ್ 2.0 ಬೆಂಬಲಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 4 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 6GB RAM + 128GB ಹಾಗೂ 8GB + 128GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಹಾಗೆಯೇ ಪೊಕೊ M8 ಪವರ್‌ ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ 8,000mAh ಸಿಲಿಕಾನ್‌ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದೆ. ಇದು ಹೈಪರ್‌OS 3 ಬೆಂಬಲದೊಂದಿಗೆ ಆಂಡ್ರಾಯ್ಡ್‌ 16 ಓಎಸ್‌ ಸಪೋರ್ಟ್‌ ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :