ಪೊಕೊ ಮೊಬೈಲ್ ಕಂಪನಿಯು ಹೊಸದಾಗಿ Poco M8 Power 5G ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಪೊಕೊ ಸಂಸ್ಥೆಯು ತನ್ನ ನೂತನ ಪೊಕೊ M8 ಪವರ್ 5G ಮೊಬೈಲ್ ಅನ್ನು ಅದೇ ಆಗಷ್ಟ್ 4 ರಂದು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ಪೊಕೊ M8 ಪವರ್ ಮೊಬೈಲ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 4 Gen 4 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಆರೆಂಜ್ ಕಲರ್ ಅನ್ನು ಒಳಗೊಂಡಂತೆ ಕಾಣುವ ಈ ಫೋನ್ AMOLED ಡಿಸ್‌ಪ್ಲೇ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ಪೊಕೊ M8 ಪವರ್ 5G ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
Also Read : 50MP ಕ್ಯಾಮೆರಾ ಇರುವ Oppo F33 5G ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ಇಳಿಕೆ!
ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಪೊಕೊ M8 ಪವರ್ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಫೋನ್ ಇದೇ ಆಗಷ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಇದು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಇಡುವ ನಿರೀಕ್ಷೆಗಳು. ಇದು ಆರೇಂಜ್ ಕಲರ್ ಆಯ್ಕೆಯಲ್ಲಿ ಬರಲಿದೆ.
ಮುಂಬರುವ ಹೊಸ ಪೊಕೊ M8 ಪವರ್ ಮೊಬೈಲ್ AMOLED ಪ್ಯಾನಲ್ ಹೊಂದಿರಲಿದೆ. ಹಾಗೆಯೇ ಈ ಫೋನ್ 7 ಇಂಚಿನ AMOLED ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದ್ದು, ಅಲ್ಲದೇ 1,800 nits ಬ್ರೈಟ್ನೆಸ್ ಪಡೆದಿರಲಿದೆ. ಇದರ ಇನ್ನು ಡಿಸ್‌ಪ್ಲೇ 1,080 x 2,396 ಪಿಕ್ಸೆಲ್ ರೆಸಲ್ಯೂಶನ ಜೊತೆಗೆ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 4 Gen 4 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಇರಬಹುದು. ಇದಕ್ಕೆ ಪೂರಕವಾಗಿ 8GB RAM + 256GB ವೇರಿಯಂಟ್ ಇರುವ ಸಾಧ್ಯತೆ ಇದೆ.
ಹಾಗೆಯೇ ಪೊಕೊ M8 ಪವರ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಇದರ ಬ್ಯಾಟರಿ ವಿಭಾಗವೂ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, 8,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಈ ಬ್ಯಾಟರಿ ದೀರ್ಘಕಾಲದ ಬಳಕೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.