Vi ಟೆಲಿಕಾಂನ 2099 ರೂ.ಗಳ ಯೋಜನೆಯಲ್ಲಿ ಭರ್ಜರಿ ವ್ಯಾಲಿಡಿಟಿ! ರೀಚಾರ್ಜ್‌ ಮಾಡ್ತೀರಾ?

ದೇಶದ ತೃತೀಯ ದೊಡ್ಡ ಟೆಲಿಕಾಂ ಎನಿಸಿರುವ Vi ಸಂಸ್ಥೆಯು ಭಿನ್ನ ಡೇಟಾ ಪ್ರಯೋಜನದ ಪ್ರಿಪೇಯ್ಡ್ ಯೋಜನೆಗಳ ಆಯ್ಕೆಯನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಏರ್‌ಟೆಲ್‌ ಹಾಗೂ ಜಿಯೋ ಸಂಸ್ಥೆಗಳಿಗೆ ನೇರ ಟಾಂಗ್ ನೀಡಿದೆ. ಆ ಪೈಕಿ ವಿ ಟೆಲಿಕಾಂ ಪ್ರತಿದಿನ ಅನಿಯಮಿತ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಮುಖ್ಯವಾಗಿ ಅಧಿಕ ವ್ಯಾಲಿಡಿಟಿ ಜೊತೆಗೆ ಡೇಟಾ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿವೆ. ಅಂದಹಾಗೆ ಕಂಪನಿಯ 2099 ರೂ.ಗಳ ಪ್ಲಾನ್‌ಗಳಲ್ಲಿ ಡೇಟಾ ಸೌಲಭ್ಯ ಜೊತೆಗೆ ಹೆಚ್ಚುವರಿ ಪ್ರಯೋಜನಗಳು ಸಹ ಸಿಗುತ್ತವೆ. ಹಾಗಾದರೆ ವಿ ಟೆಲಿಕಾಂನ 2099 ರೂ.ಗಳ ಪ್ಲಾನ್ ಪ್ರಯೋಜನಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಡಿಸ್ಕೌಂಟ್‌ ಬೆಲೆಯಲ್ಲಿ Oppo K14x ಮೊಬೈಲ್‌ ಖರೀದಿ ಮಾಡಲು ಇದು ಸೂಕ್ತ ಸಮಯ!

Vi ಸಂಸ್ಥೆಯ 2099 ರೂ.ಗಳ ಯೋಜನೆ ಮಾಹಿತಿ

ವಿ ಟೆಲಿಕಾಂನ 2099 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಸಹ ಬಳಕೆದಾರರಿಗೆ ಅನಿಯಮಿತ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 180 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.

ವಿ ಟೆಲಿಕಾಂನ 1599 ರೂ.ಗಳ ರೀಚಾರ್ಜ್‌ ಮಾಹಿತಿ

ವಿ ಟೆಲಿಕಾಂನ 1599 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್‌ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ನೆಟ್‌ಫ್ಲಿಕ್ಸ್‌ ಬೇಸಿಕ್ ಚಂದಾದಾರಿಕೆ ಲಭ್ಯ.

ವಿ ಸಂಸ್ಥೆಯ 1005 ರೂ.ಗಳ ಪ್ಲಾನ್‌ ಮಾಹಿತಿ

ವಿ ಟೆಲಿಕಾಂನ 1005 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಸಹ ಬಳಕೆದಾರರಿಗೆ ಅನಿಯಮಿತ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :