Poco M2 Pro ಮಾರಾಟ: ಇಂದು ಮಧ್ಯಾಹ್ನ 12 ಗಂಟೆಗೆ ಮಾರಾಟಕ್ಕೆ ಲಭ್ಯ, ಬೆಲೆ ಮತ್ತು ವಿಶೇಷಣಗಳನ್ನು ತಿಳಿಯಿರಿ

Updated on 06-Aug-2020
HIGHLIGHTS

Poco M2 Pro ಸ್ಮಾರ್ಟ್‌ಫೋನ್ ಮಾರಾಟ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.

Poco M2 Pro ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಒದಗಿಸಲಾಗಿದೆ.

Poco M2 Proಸ್ಮಾರ್ಟ್ಫೋನ್ 6.07 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು 1080x2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.

Poco M2 Pro ಸ್ಮಾರ್ಟ್‌ಫೋನ್ ಇಂದು ಮತ್ತೊಮ್ಮೆ ಮಾರಾಟಕ್ಕೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಮಾರಾಟ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು ಬಳಕೆದಾರರು ಇದನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ನಿಂದ ಖರೀದಿಸಬಹುದು. Poco M2 Pro ಕಂಪನಿಯ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು ಬಳಕೆದಾರರು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಪಡೆಯಲಿದ್ದಾರೆ. ಅಲ್ಲದೆ 5000mAh ಬ್ಯಾಟರಿಯನ್ನು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಒದಗಿಸಲಾಗಿದೆ. ಇದು ದೀರ್ಘವಾದ ಬ್ಯಾಕಪ್ ಅನ್ನು ಒದಗಿಸುತ್ತದೆ. ಈ ಸ್ಮಾರ್ಟ್ಫೋನ್ P2i ನ್ಯಾನೋ ಲೇಪನದೊಂದಿಗೆ ಬರುತ್ತದೆ. ಮತ್ತು ಇದು ಧೂಳು ಮತ್ತು ಸ್ಪ್ಲಾಶ್ ಪ್ರೂಫ್ ಮಾಡುತ್ತದೆ.

Poco M2 Pro ಬೆಲೆ ಮತ್ತು ಕೊಡುಗೆಗಳು

ಬಳಕೆದಾರರು Poco M2 Pro ಸ್ಮಾರ್ಟ್ಫೋನ್ 4GB + 64GB ಸ್ಟೋರೇಜ್ ರೂಪಾಂತರವನ್ನು 13,999 ರೂಗಳಿಗೆ ಖರೀದಿಸಬಹುದು. ಇದರ 6GB + 64GB ಮಾದರಿಯ ಬೆಲೆ 14,999 ರೂಗಳಾದರೆ 6GB + 128GB ಮಾದರಿಯ ಬೆಲೆ 16,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ನೀಲಿ ಮತ್ತು ಹಸಿರು ಮತ್ತು ಗ್ರೀನರ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದರೊಂದಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಆಕ್ಸಿಸ್ ಬ್ಯಾಂಕ್ ಬುಜ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ರಿಯಾಯಿತಿ ಲಭ್ಯವಿದೆ. UPI ವಹಿವಾಟಿನಲ್ಲಿ 75 ರೂಪಾಯಿ ಮತ್ತು ರುಪೇ ಪೇ ಡೆಬಿಟ್ ಕಾರ್ಡ್‌ನಲ್ಲಿ 75 ರೂ. ಈ ಸ್ಮಾರ್ಟ್ಫೋನ್ ಅನ್ನು ನೋ ಕೋಸ್ಟ್ ಇಎಂಐ ಆಯ್ಕೆಯೊಂದಿಗೆ ಖರೀದಿಸಬಹುದು.

Poco M2 Pro ವಿಶೇಷಣಗಳು

ಆಂಡ್ರಾಯ್ಡ್ 10 ಓಎಸ್ ಆಧಾರಿತ Poco M2 Proಸ್ಮಾರ್ಟ್ಫೋನ್ 6.07 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು 1080×2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 720G ಚಿಪ್‌ಸೆಟ್ ಹೊಂದಿದೆ. ಇದು ಪವರ್ ಬ್ಯಾಕಪ್‌ಗಾಗಿ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ ಫೋನ್‌ನ ಸಂಗ್ರಹವನ್ನು 512GB ವರೆಗೆ ವಿಸ್ತರಿಸಬಹುದು. Poco M2 Proನಾಲ್ಕು ಹಿಂದಿನ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳಲ್ಲಿ 485MP ಪ್ರೈಮರಿ ಕ್ಯಾಮೆರಾ ಮತ್ತು 85MP ಅಲ್ಟ್ರಾ ವೈಡ್ ಆಂಗಲ್ ಕೊನೆಯದಾಗಿ 5MP ಮ್ಯಾಕ್ರೋ ಶೂಟರ್ ಮತ್ತು 25MP ಡೆಪ್ತ್ ಸೆನ್ಸಾರ್ ಸೇರಿವೆ. ಅದೇ ಸಮಯದಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗೆ ಅನುಕೂಲವಾಗುವಂತೆ ಪಂಚ್ ಹೋಲ್ ವಿನ್ಯಾಸದೊಂದಿಗೆ 165MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :