ಭಾರತಕ್ಕೆ ಬರುತ್ತಿದೆ Philips 5G ಸ್ಮಾರ್ಟ್‌ಫೋನ್‌: ಲಾಂಚ್‌ ಡೇಟ್, ಫೀಚರ್ಸ್ ಮಾಹಿತಿ ಬಹಿರಂಗ

ನೆದರ್‌ಲ್ಯಾಂಡ್ಸ್ ಮೂಲದ Philips ಶೀಘ್ರದಲ್ಲೇ ಭಾರತದಲ್ಲಿ ತನ್ನ ಹೊಸ 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿ ಫೋನ್‌ನ ಅಧಿಕೃತ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಅಮೆಜಾನ್‌ನಲ್ಲಿ ಲೈವ್ ಆಗಿರುವ ವಿಶೇಷ ಮೈಕ್ರೋಸೈಟ್ ಮೂಲಕ ಇದರ ಬಿಡುಗಡೆ ದಿನಾಂಕ ಸೆಪ್ಟೆಂಬರ್ 2 ಎಂದು ಖಚಿತವಾಗಿದೆ. ಅಮೆಜಾನ್‌ ಲಿಸ್ಟಿಂಗ್‌ನಲ್ಲಿ ಫೋನ್‌ನ ವಿನ್ಯಾಸದ ಜೊತೆಗೆ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಲಾಗಿದೆ. ಹೊಸ ಫಿಲಿಪ್ಸ್‌ ಸ್ಮಾರ್ಟ್‌ಫೋನ್‌ ಮೂರು ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಪ್ರಮುಖ ಆಕರ್ಷಣೆಗಳಲ್ಲಿ 64 ಮೆಗಾಪಿಕ್ಸೆಲ್ AI ಕ್ಯಾಮೆರಾ, 120Hz ಡಿಸ್ಪ್ಲೇ ಮತ್ತು 5G ಕನೆಕ್ಟಿವಿಟಿ ಸೇರಿವೆ. ಹಾಗಾದರೆ ಮುಂಬರುವ ಈ ಫೋನ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Vi ಟೆಲಿಕಾಂನ ಈ ಈ ಪ್ಲಾನಿನಲ್ಲಿ ಅನಿಯಮಿತ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ

Philips ಫೋನ್‌ ಬಿಡುಗಡೆಗೆ ಡೇಟ್ ಫಿಕ್ಸ್‌

ಅಮೆಜಾನ್‌ನಲ್ಲಿನ ಹೊಸ ಲ್ಯಾಂಡಿಂಗ್‌ ಪೇಜ್‌ ಪ್ರಕಾರ ಫಿಲಿಪ್ಸ್‌ನ ಹೊಸ 5G ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಲಿಸ್ಟಿಂಗ್‌ನಲ್ಲಿ ಫೋನ್‌ ಬ್ಲ್ಯಾಕ್‌, ಗ್ರೇ ಮತ್ತು ವೈಟ್‌ ಕಲರ್‌ಗಳ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ. ಆದರೆ ಈ ಕಲರ್‌ಗಳ ಅಧಿಕೃತ ಹೆಸರುಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಹೊಸ ಫಿಲಿಪ್ಸ್‌ ಸ್ಮಾರ್ಟ್‌ಫೋನ್‌ನ ಅಧಿಕೃತ ಹೆಸರು ಇನ್ನೂ ದೃಢಪಟ್ಟಿಲ್ಲ. ಆದರೆ ಈ ಹಿಂದೆ ಅಮೆಜಾನ್‌ನಲ್ಲಿ ಕಾಣಿಸಿಕೊಂಡಿದ್ದ ಲಿಸ್ಟಿಂಗ್‌ನಲ್ಲಿ Philips S7221 ಎಂಬ ಹೆಸರು ಉಲ್ಲೇಖವಾಗಿತ್ತು.

64MP ಕ್ಯಾಮೆರಾ ಸಾಧ್ಯತೆ

ಫಿಲಿಪ್ಸ್‌ನ ಮುಂಬರುವ 5G ಸ್ಮಾರ್ಟ್‌ಫೋನ್‌ನಲ್ಲಿ 120Hz ರಿಫ್ರೆಶ್‌ ರೇಟ್‌ ಡಿಸ್‌ಪ್ಲೇ ಇರಲಿದೆ ಎಂದು ಕಂಪನಿ ದೃಢಪಡಿಸಿದೆ. ಹೆಚ್ಚಿನ ರಿಫ್ರೆಶ್‌ ರೇಟ್‌ನಿಂದ ಸ್ಕ್ರೋಲಿಂಗ್‌ ಮತ್ತು ಅನಿಮೇಷನ್‌ಗಳು ಇನ್ನಷ್ಟು ಸ್ಮೂತ್ ಆಗಿ ಕಾಣುವ ನಿರೀಕ್ಷೆಯಿದೆ. ಮೆಮೊರಿ ಆಯ್ಕೆಗಳ ವಿಚಾರದಲ್ಲಿ 6GB ಮತ್ತು 8GB RAM ವೇರಿಯಂಟ್‌ಗಳು ಸಿಗಲಿವೆ. ಸ್ಟೋರೇಜ್‌ಗೆ 128GB ಮತ್ತು 256GB ಆಯ್ಕೆಗಳನ್ನು ನೀಡಲಾಗುತ್ತದೆ.

ಹಾಗೆಯೇ ಈ ಫೋನ್‌ ಫೋಟೋಗ್ರಫಿಗಾಗಿ ಹಿಂಭಾಗದಲ್ಲಿ 64MP AI ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಇದು Ultra Max Audio ಸಪೋರ್ಟ್‌ ಜೊತೆಗೆ ಡ್ಯುಯಲ್‌ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿರಲಿದೆ. ಇದರ ಜೊತೆಗೆ ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ನೀಡಲು IP64 ರೇಟಿಂಗ್‌ ಸೌಲಭ್ಯ ಪಡೆದಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :