ಒಪ್ಪೋ ಮೊಬೈಲ್ ಸಂಸ್ಥೆಯು ಇದೀಗ ಹೊಸದಾಗಿ Oppo Find X10 ಸ್ಮಾರ್ಟ್‌ಫೋನ್ ಅನ್ನು ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಫ್ಲ್ಯಾಗ್‌ಶಿಫ್ ಮಾದರಿಯಲ್ಲಿ ಇರುವ ಈ ನೂತನ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9600M ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಫೋನ್ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಇದರ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರುವುದು ಆಕರ್ಷಕ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಟ್ಟಿದೆ. ಹಾಗಾದರೆ ಒಪ್ಪೋ ಫೈಂಡ್ X10 ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read :ಭಾರತದಲ್ಲಿ Oppo Find X10 Pro Max ಸ್ಮಾರ್ಟ್‌ಫೋನ್ ಲಾಂಚ್! ಅಬ್ಬಬ್ಬಾ ಟ್ರಿಪಲ್ 200MP ಕ್ಯಾಮೆರಾ ಸೌಲಭ್ಯ
ಮಾರುಕಟ್ಟೆ ಪ್ರವೇಶಿಸಿರುವ ಒಪ್ಪೋ ಫೈಂಡ್ X10 ಮೊಬೈಲ್ ಫ್ಲ್ಯಾಗ್‌ಶಿಪ್ ದರದ ಪ್ರೈಸ್‌ಟ್ಯಾಗ್ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಒಪ್ಪೋ ಫೈಂಡ್ X10 ಮೊಬೈಲ್‌ನ 12GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 1,39,999 ರೂ.ಗಳು ಆಗಿದೆ. ಹಾಗೆಯೇ 12GB + 512GB ವೇರಿಯಂಟ್ ಬೆಲೆಯು 1,69,999 ರೂ.ಗಳು ಆಗಿದೆ. ಒಪ್ಪೋ ಫೈಂಡ್ X10 ಮೊಬೈಲ್ ಗ್ಲೇಸಿಯರ್ ಬ್ಲೂ, ಗ್ಲೋ ಕೋರಲ್ ಮತ್ತು ಮಿಸ್ಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಈ ಹೊಸ ಸ್ಮಾರ್ಟ್‌ಫೋನ್ ಅಕ್ಟೋಬರ್ 29 ರಂದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಗ್ರಾಹಕರು ಒಪ್ಪೋ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು.
ನೂತನ ಒಪ್ಪೋ ಫೈಂಡ್ X10 ಮೊಬೈಲ್ 6.59 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 1,272 x 2,768 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9600M ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿದ್ದು, Android 17 ಆಧಾರಿತ ColorOS 17 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಪಡೆದಿದೆ. ಈ ಫೋನ್ 12GB + 256GB ಹಾಗೂ 12GB + 512GB ಸ್ಟೋರೇಜ್ ಒಳಗೊಂಡಿದೆ.
ಹಾಗೆಯೇ ಒಪ್ಪೋ ಫೈಂಡ್ X10 ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ ತೃತೀಯ ಕ್ಯಾಮೆರಾ ಸಹ 200MP ಸೆನ್ಸಾರ್ ಪಡೆದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 50MP ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.