OPPO Reno 14 Series launching soon
OPPO Reno 14 Series: ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಒಪ್ಪೋ (OPPO) ಭಾರತದಲ್ಲಿ ತನ್ನ ಹೊಚ್ಚ ಹೊಸ ‘OPPO Reno 14 Series’ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇತ್ತೀಚಿನ ವರದಿಗಳ ಪ್ರಕಾರ ಈ ಸರಣಿಯು ಜುಲೈ ಮೊದಲ ವಾರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ OPPO Reno 14 ಮತ್ತು OPPO Reno 14 Pro ಎಂಬ ಎರಡು ಅತ್ಯಾಕರ್ಷಕ ಮಾದರಿಗಳು ಇರಲಿವೆ.
ಈ ಸ್ಮಾರ್ಟ್‌ಫೋನ್‌ಗಳು ಟ್ವಿಟ್ಟರ್ ಮೂಲಕ OPPOReno14Series #TravelWithReno #AIPortraitCamera ಕೀವರ್ಡ್ ಮೂಲಕ ಟ್ರೆಂಡ್ ಆಗುತ್ತಿದ್ದು ತಮ್ಮ ಕ್ಯಾಮೆರಾ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು ಗ್ರಾಹಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ. OPPO Reno 14 Pro ಮಾದರಿಯು 50MP ಮೆಗಾಪಿಕ್ಸೆಲ್‌ನ ಮೂರು ಕ್ಯಾಮೆರಾಗಳನ್ನು (ಟ್ರಿಪಲ್ ಕ್ಯಾಮೆರಾ ಸೆಟಪ್) ಹೊಂದಿರಲಿದ್ದು ಅತ್ಯುತ್ತಮ ಫೋಟೊಗ್ರಫಿ ಅನುಭವವನ್ನು ನೀಡಲಿದೆ. ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 8450 ಪ್ರೊಸೆಸರ್ ಮತ್ತು 6200mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಒಳಗೊಂಡಿರಲಿದೆ.
ಮತ್ತೊಂದೆಡೆ ಮೂಲ ಮಾದರಿಯಾದ OPPO Reno 14 ಕೂಡ 50MP ಮುಖ್ಯ ಕ್ಯಾಮೆರಾ, ಪವರ್ಫುಲ್ ಮೀಡಿಯಾಟೆಕ್ ಡೈಮೆನ್ಸಿಟಿ 8350 ಚಿಪ್‌ಸೆಟ್ ಮತ್ತು 80W ವೇಗದ ಚಾರ್ಜಿಂಗ್ ಬೆಂಬಲಿಸುವ 6000mAh ಬ್ಯಾಟರಿಯೊಂದಿಗೆ ಬರಲಿದೆ. ಎರಡೂ ಫೋನ್‌ಗಳು 120Hz ರಿಫ್ರೆಶ್ ರೇಟ್ ಹೊಂದಿರುವ ಅಮೋಲೆಡ್ ಡಿಸ್ಪ್ಲೇ ಮತ್ತು ಆಂಡ್ರಾಯ್ಡ್ 15 ಆಧಾರಿತ ಕಲರ್‌ಓಎಸ್ 15 (ColorOS 15) ಅನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.
Also Read: Ration Card: ನಿಮ್ಮ ರೇಷನ್ ಕಾರ್ಡ್‌ನ ಕೆವೈಸಿ ಇನ್ನೂ ಪೂರ್ಣವಾಗಿಲ್ವಾ? ಹಾಗಾದ್ರೆ ಆನ್‌ಲೈನ್ ವಿಧಾನ ಇನ್ನೂ ಸುಲಭ!
ಈ ಸರಣಿಯು ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವುದರಿಂದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ ಈ ಮುಂಬರಲಿರುವ ಸ್ಮಾರ್ಟ್ಫೋನ್ ಸರಣಿಯಲ್ಲಿ ಈ ರೀತಿಯ ಫೀಚರ್ ನಿರೀಕ್ಷಿಸಬಹುದು. ಒಪ್ಪೋ ರೆನೋ 14 6.59-ಇಂಚಿನ FHD+ 120Hz ಡಿಸ್ಪ್ಲೇ, ಕ್ರಿಸ್ಟಲ್ ಶೀಲ್ಡ್ ಗ್ಲಾಸ್, ಮೀಡಿಯಾಟೆಕ್ ಡೈಮೆನ್ಸಿಟಿ 8350 ಮತ್ತು 80W ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ.
ಕ್ಯಾಮೆರಾ ಸೆಟಪ್ 50MP OIS ಪ್ರೈಮರಿ, 50MP ಟೆಲಿಫೋಟೋ, 8MP ಅಲ್ಟ್ರಾ-ವೈಡ್ ಮತ್ತು 50MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರ ಅಂದಾಜು ಬೆಲೆ ₹40,000. ಒಪ್ಪೋ ರೆನೋ 14 ಪ್ರೊ 6.83-ಇಂಚಿನ 1.5K OLED ಡಿಸ್ಪ್ಲೇ, 120Hz ರಿಫ್ರೆಶ್ ದರ, 6,200mAh ಬ್ಯಾಟರಿ, ಆಂಡ್ರಾಯ್ಡ್ 15, 16GB RAM ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಸೆಟಪ್ ಅನ್ನು ಪಡೆಯಲಿದೆ