OPPO K13x 5G Launch Soon
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಒಪ್ಪೋ (OPPO) ತನ್ನ ಮುಂಬರಲಿರುವ OPPO K13x 5G ಸ್ಮಾರ್ಟ್‌ಫೋನ್ ಅನ್ನು ಅತಿ ಶೀಘ್ರದಲ್ಲೇ ಬಿಡುಗಡೆಗೊಳಿಸಿದೆ. ಇದರ ಬಗ್ಗೆ ಕಂಪನಿ ಈಗಾಗಲೇ ಫ್ಲಿಪ್ಕಾರ್ಟ್ ಮೂಲಕ ಮೈಕ್ರೋ ಸೈಟ್ ಪೇಜ್ ಸಹ ಲೈವ್ ಮಾಡಿದ್ದು ಈಗಾಗಲೇ ಒಪ್ಪೋವಿನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. OPPO K13x 5G ಸ್ಮಾರ್ಟ್‌ಫೋನ್ ಬಗ್ಗೆ ಕಂಪನಿ ಈಗಾಗಲೇ ಫೋನ್‌ನ ಬಣ್ಣಗಳ ಆಯ್ಕೆಯೊಂದಿಗೆ ಬಿಲ್ಡ್ ಮತ್ತು ಡಿಸೈನಿಂಗ್ ಡೀಟೇಲ್ಸ್ ಪೋಸ್ಟ್ ಮಾಡಿರುವ ಕಂಪನಿ ಇದು ಸ್ಮಾರ್ಟ್‌ಫೋನ್‌ನೊಂದಿಗೆ ಬರುವ ಬಾಳಿಕೆ ಪ್ರಮಾಣೀಕರಣಗಳನ್ನು ಸಹ ಬಹಿರಂಗಪಡಿಸಿದೆ.
ಒಪ್ಪೋ ಕಂಪನಿಯ ಈ ಮುಂಬರಲಿರುವ OPPO K13x 5G ಸ್ಮಾರ್ಟ್ಫೋನ್ ಭಾರತದಲ್ಲಿ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದ್ದು ಇದರ ಲಂಚ್ ಡೇಟ್ ಇನ್ನೂ ಕಂಫಾರ್ಮ್ ಆಗಿಲ್ಲ. ಆದರೆ ಪೋಸ್ಟ್ ಮೂಲಕ ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ ಎನ್ನುವುದನ್ನು ಘೋಷಿಸಿದೆ. OPPO K13x 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾಹಿತಿ ನೀಡಿದ್ದು ತಿಂಗಳ ಕೊನೆ ವಾರದಲ್ಲಿ ಇದರ ಬಿಡುಗಡೆಯನ್ನು ನಿರೀಕ್ಷಿಸಬಹುದು.
ಈ OPPO K13x 5G ಸ್ಮಾರ್ಟ್‌ಫೋನ್ ಒಪ್ಪೋದ ಸ್ಪಾಂಜ್ ಬಯೋಮಿಮೆಟಿಕ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್‌ನೊಂದಿಗೆ ಬರಲಿದೆ. ಇದು ಸಮುದ್ರ ಸ್ಪಂಜುಗಳಿಂದ ಪ್ರೇರಿತವಾಗಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. ಇದು ತನ್ನ ಇಂಟರ್ನಲ್ ಭಾಗಗಳನ್ನು ಹಾನಿಯಿಂದ ರಕ್ಷಿಸಲು ಸ್ಪಂಜಿನಂತಹ ಪದರಗಳೊಂದಿಗೆ ಹೊಂದಿಕೊಳ್ಳುವ ಆಘಾತ-ಹೀರಿಕೊಳ್ಳುವ ವಸ್ತುಗಳನ್ನು ಬಳಸುತ್ತದೆ ಎಂದು ಕಂಪನಿ ವಿವರಿಸಿದೆ.
Also Read: UPI Tips: ಫೋನಲ್ಲಿ ಡೇಟಾ ಇಲ್ವಾ? ಚಿಂತೆ ಬೇಡ ಇಂಟರ್ನೆಟ್ ಇಲ್ಲದೆ ಯುಪಿಐ ಪೇಮೆಂಟ್ ಮಾಡುವುದು ಹೇಗೆ?
ಒಪ್ಪೋ ಕಂಪನಿಯು K13x 5G 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿಯನ್ನು ಹೊಂದಿರುತ್ತದೆ ಎಂದು ಹೇಳುತ್ತದೆ. ಇದು SGS ಗೋಲ್ಡ್ ಡ್ರಾಪ್-ರೆಸಿಸ್ಟೆನ್ಸ್, SGS ಮಿಲಿಟರಿ ಸ್ಟ್ಯಾಂಡರ್ಡ್ ಮತ್ತು MIL-STD 810-H ಶಾಕ್ ರೆಸಿಸ್ಟೆನ್ಸ್ ಪ್ರಮಾಣೀಕರಣಗಳೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಪೂರೈಸುತ್ತದೆ ಎಂದು ಹೇಳಲಾಗಿದೆ.