OPPO K13x 5G Launched - Digit Kannada
ಭಾರತದಲ್ಲಿ ಒಪ್ಪೋ (OPPO) ಇಂದು ತನ್ನ ಹೊಚ್ಚ ಹೊಸ OPPO K13x 5G ಸ್ಮಾರ್ಟ್ ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿ ಜನಪ್ರಿಯ K-ಸರಣಿಗೆ ಈ ಹೊಸ 5G ಸ್ಮಾರ್ಟ್ಫೋನ್ ಸೇರ್ಪಡೆಗೊಳಿಸಿದ್ದು ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಪರಿಚಯಿಸಿದೆ. ಈ ಸ್ಮಾರ್ಟ್ಫೋನ್ ಸ್ಪರ್ಧಾತ್ಮಕ ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗವನ್ನು ಅದರ ಪ್ರಭಾವಶಾಲಿ ಫೀಚರ್ ಜೊತೆಗೆ ಪವರ್ಫುಲ್ ಬಿಲ್ಡ್ ಕ್ವಾಲಿಟಿ ಮತ್ತು ಆಕರ್ಷಕ ಬೆಲೆಯೊಂದಿಗೆ OPPO K13x 5G ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮೇಲಿಟ್ಟಿರುವ ಈ ಸ್ಮಾರ್ಟ್ಫೋನ್ ಕೇವಲ ₹11,999 ರೂಗಳಿಗೆ ಪರಿಚಯವಾಗಿದೆ. ಆದರೆ OPPO K13x 5G ಸ್ಮಾರ್ಟ್ ಫೋನ್ ಮೇಲೆ ಆಯ್ದ ಬ್ಯಾಂಕ್ ಕಾರ್ಡ್ ಆಫರ್ ಅಡಿಯಲ್ಲಿ 1000 ರೂಗಳ ಡಿಸ್ಕೌಂಟ್ ಸಹ ನೀಡುತ್ತಿದೆ.
ಭಾರತದಲ್ಲಿ ಇಂದು ಬಿಡುಗಡೆಯಾದ ಈ OPPO K13x 5G ಸ್ಮಾರ್ಟ್ ಫೋನ್ ಇದೆ 27ನೇ ಜೂನ್ 2025 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು. ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ಆಕರ್ಷಕ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ₹11,999 ರೂಗಳಾಗಿವೆ.
ಕ್ರಮವಾಗಿ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ₹12,999 ಆಗಿದ್ದರೆ ಕೊನೆಯದಾಗಿ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹14,999 ರೂಗಳಿಗೆ ಬಿಡುಗಡೆಯಾಗಿದೆ. ಆದರೆ ಆಸಕ್ತ ಖರೀದಿದಾರರು ₹1,000 ವರೆಗಿನ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಸಹ ನಿರೀಕ್ಷಿಸಬಹುದು.
Also Read: QLED Google TV: ಕಡಿಮೆ ಬೆಲೆಗೊಂದು ದೊಡ್ಡ ಮತ್ತು ಅತ್ಯುತ್ತಮ QLED ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಡೀಲ್ ನಿಮಗಾಗಿದೆ!
ಈ ಲೇಟೆಸ್ಟ್ OPPO K13x 5G ಸ್ಮಾರ್ಟ್ಫೋನ್ 6.67 ಇಂಚಿನ ದೊಡ್ಡ HD+ LCD ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 1000 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದ್ದು ರೋಮಾಂಚಕ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಈ ಡಿಸ್ಪ್ಲೇ “ಸ್ಪ್ಲಾಶ್ ಟಚ್” ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಬ್ಯಾಕ್ ಕ್ಯಾಮೆರಾವನ್ನು ಹೊಂದಿದ್ದು 2MP ಪೋರ್ಟ್ರೇಟ್ ಸೆನ್ಸರ್ ಪೂರಕವಾಗಿದೆ. ಅಲ್ಲದೆ ಸೆಲ್ಫಿಗಳಿಗಾಗಿ 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ AI- ಚಾಲಿತ ಇಮೇಜಿಂಗ್ ಈ ಫೋನ್, AI ಎರೇಸರ್ ಮತ್ತು AI ಸಮ್ಮರಿಯಂತಹ ವಿವಿಧ AI ಪರಿಕರಗಳನ್ನು ಸಂಯೋಜಿಸುತ್ತದೆ.
OPPO K13x 5G ಸ್ಮಾರ್ಟ್ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿದೆ ಮತ್ತು “360-ಡಿಗ್ರಿ ವಾಟರ್ ಪ್ರೂಫ್ ರಕ್ಷಾಕವಚ ಬಾಡಿಯನ್ನು ಹೊಂದಿದೆ. OPPO K13x 5G ಸ್ಮಾರ್ಟ್ಫೋನ್ MediaTek Dimensity 6300 5G ಚಿಪ್‌ಸೆಟ್‌ನಿಂದ ColorOS 15 ನೊಂದಿಗೆ Android 15 ನಲ್ಲಿ ಕಾರ್ಯನಿರ್ವಹಿಸುತ್ತದೆ. OPPO K13x 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಹೊಂದಿದ್ದು ಇದು 45W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.