OPPO k13 5G launch Confirmed
OPPO K13 5G launch Confirmed: ಭಾರತದಲ್ಲಿ ಒಪ್ಪೋ ಕಂಪನಿ ತನ್ನ ಮುಂಬರಲಿರುವ OPPO K13 5G ಸ್ಮಾರ್ಟ್ಫೋನ್ ಅನ್ನು 21ನೇ ಏಪ್ರಿಲ್ 2025 ರಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಗೊಳಿಸಲು ಸಜ್ಜಾಗಿದೆ. ಒಪ್ಪೋ ಕಂಪನಿಯು ತನ್ನ ಈ ಹೊಸ ಸ್ಮಾರ್ಟ್ಫೋನ್ ಅನ್ನು ಸುಮಾರು 20,000 ರೂಗಳೊಳಗೆ ಪರಿಚಯಿಸುವುದಾಗಿ ನಿರೀಕ್ಷಿಸಲಾಗುತ್ತಿದೆ. ಈ OPPO K13 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆಯೇ ಒಂದಿಷ್ಟು ಫೀಚರ್ ಪರಿಚಯಿಸಿದ್ದು 7000mAh ಬ್ಯಾಟರಿ ಮತ್ತು 50MP ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ಮೊದಲಿಗೆ ಈ OPPO K13 5G ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಕಂಪನಿ ಈಗಾಗಲೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇದರ ಡೇಟ್ ಮತ್ತು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗುವುದರ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡಿದೆ. ಅಲ್ಲದೆ ಸ್ಮಾರ್ಟ್ಫೋನ್ ಪ್ರಮುಖವಾಗಿ ಗೇಮಿಂಗ್ ವಲಯಕ್ಕೆ ಸೀಮಿತವಾಗಿದ್ದು ಅತ್ಯುತ್ತಮ ಪರ್ಫಾರ್ಮೆನ್ಸ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವುದಾಗಿ ಡಿಸೆಂಟ್ ವ್ಯಾಲ್ಯೂ ಫಾರ್ ಮನಿಯಾಗುವ ನಿರೀಕ್ಷೆಗಳಿವೆ.
ಈ ಮುಂಬರಲಿರುವ OPPO K13 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಒಟ್ಟು ಎರಡು ಮಾದರಿಯಲ್ಲಿ ಬರುವ ನಿರೀಕ್ಷೆ ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಸುಮಾರು 17,999 ರೂಗಳಿಗೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಸುಮಾರು 19,999 ರೂಗಳಿಗೆ ನಿರೀಕ್ಷಿಸಲಾಗಿದೆ.
ಈ ಮುಂಬರಲಿರುವ Oppo K13 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರ ಮತ್ತು 1200nits ಗರಿಷ್ಠ ಹೊಳಪಿನೊಂದಿಗೆ 6.67 ಇಂಚಿನ AMOLED FHD+ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ ವೆಟ್ ಟಚ್ ಮೋಡ್ ಅನ್ನು ಸಹ ಹೊಂದಿದೆ. ಅಂದರೆ ಫೋನ್ ಮೇಲ್ಮೈಯಲ್ಲಿ ನೀರು ಅಥವಾ ಎಣ್ಣೆ ಬಿದ್ದಿದ್ದರೂ ಸಹ ಸ್ಕ್ರೀನ್ ಸ್ಪಂದಿಸುವಂತೆ ಮಾಡುತ್ತದೆ. ಇದು ಭಾರತೀಯ ಪರಿಸ್ಥಿತಿಗಳಿಗೆ ಬಳಕೆಯ ಹೆಚ್ಚುವರಿ ಪದರವಾಗಿದೆ. ಇದರ ಮೂಲದಲ್ಲಿ OPPO K13 ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 Gen 4 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
7000mAh ಬ್ಯಾಟರಿ ಮತ್ತು 50MP ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. Oppo K13 ಪ್ರೀಮಿಯಂ ಮತ್ತು ಬಾಳಿಕೆ ಬರುವ ವಿನ್ಯಾಸವನ್ನು ಹೊಂದಿರುತ್ತದೆ. ಹೆಚ್ಚು ಖರ್ಚು ಮಾಡದೆ ತಮ್ಮ ಫೋನ್‌ನಿಂದ ಹೆಚ್ಚಿನದನ್ನು ನಿರೀಕ್ಷಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಹಿಂಭಾಗದಲ್ಲಿ 50MP AI ಸೆನ್ಸರ್ ಸೆಟಪ್ ಅನ್ನು ಹೊಂದಿರುತ್ತದೆ. ಉಳಿದ ವಿಶೇಷಣಗಳನ್ನು ಬಿಡುಗಡೆ ದಿನದಂದು ಘೋಷಿಸಲಾಗುತ್ತದೆ.