ಸದ್ಯದಲ್ಲೇ ಗ್ರ್ಯಾಂಡ್ ಎಂಟ್ರಿ ಕೊಡಲಿದೆ Oppo Find N6 ಮೊಬೈಲ್! ಅಚ್ಚರಿ ಮೂಡಿಸುವ ಫೀಚರ್ಸ್
ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಒಪ್ಪೋ ಫೈಂಡ್ N6 ಮೊಬೈಲ್
ಒಪ್ಪೋ ಫೈಂಡ್ N6 ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಪಡೆದಿರಲಿದೆ
ಒಪ್ಪೋ ಫೈಂಡ್ N6 ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಪ್ರೊಸೆಸರ್ ಪಡೆದಿರುವ ನಿರೀಕ್ಷೆ
Oppo ಮೊಬೈಲ್ ಸಂಸ್ಥೆಯು ತನ್ನ ಮುಂದಿನ ಮಡಚಬಹುದಾದ ಸ್ಮಾರ್ಟ್‌ಫೋನ್ Oppo Find N6 ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳ ಕೊನೆಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದೆ. ಅಂದಹಾಗೆ ಒಪ್ಪೋ ಕಂಪನಿಯು ಮುಂಬರುವ ಸ್ಮಾರ್ಟ್‌ಫೋನ್‌ನ ವಿನ್ಯಾಸ, ಕಲರ್ ಆಯ್ಕೆಗಳು ಹಾಗೂ ಇತರೆ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳ ಮಾಹಿತಿ ಕುರಿತು ಟೀಸರ್ ಅನ್ನು ಸಹ ಹಂಚಿಕೊಂಡಿದೆ. ಇನ್ನು ಈ ನೂತನ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗೆಯೇ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೆ ಒಪ್ಪೋ ಫೈಂಡ್ N6 ಸ್ಮಾರ್ಟ್‌ಫೋನ್ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Amazon EPL 2026: 55 ಇಂಚಿನ ಈ Sony ಸ್ಮಾರ್ಟ್‌ಟಿವಿಗೆ ಭರ್ಜರಿ ಡಿಸ್ಕೌಂಟ್
Oppo Find N6 ಲಾಂಚ್ ಡೇಟ್ ಹಾಗೂ ಕಲರ್
ಒಪ್ಪೋ ಮೊಬೈಲ್ ಕಂಪನಿಯು ತನ್ನ ನೂತನ ಒಪ್ಪೋ ಫೈಂಡ್ N6 ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ 17 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಿದೆ. ಒಪ್ಪೋ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ದಿನಾಂಕವನ್ನು ಖಚಿತಪಡಿಸಲಾಗಿದೆ. ಇನ್ನು ಸಂಸ್ಥೆಯ ಈ ಮೊಬೈಲ್ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಟೀಸರ್‌ನಿಂದ ತಿಳಿದುಬಂದಿದೆ. ಅವುಗಳು ಕ್ರಮವಾಗಿ ಗೋಲ್ಡನ್ ಆರೆಂಜ್, ಒರಿಜಿನಲ್ ಟೈಟಾನಿಯಂ ಮತ್ತು ಡೀಪ್ ಬ್ಲ್ಯಾಕ್ ಆಗಿವೆ. ಇನ್ನು ಒಪ್ಪೋ ಬಿಡುಗಡೆಗೆ ಮುಂಚಿತವಾಗಿ ಚೀನಾದಲ್ಲಿ ಪೂರ್ವ-ಆರ್ಡರ್ ಪೇಜ್ ಅನ್ನು ಸಹ ತೆರೆದಿದೆ. ಲೀಕ್ ಮಾಹಿತಿಗಳ ಪ್ರಕಾರ ಒಪ್ಪೋ ಫೈಂಡ್ N6 ಮೊಬೈಲ್ ಬೆಲೆ ಭಾರತದಲ್ಲಿ ಸುಮಾರು 1,10,000 ರೂ.ಗಳು ಆಗಿರಬಹುದು ಎಂದು ಊಹಿಸಲಾಗಿದೆ. ಆದರೆ ಕಂಪನಿಯು ಇನ್ನು ಯಾವುದೇ ಅಧಿಕೃತ ಬೆಲೆ ಮಾಹಿತಿ ಬಹಿರಂಗಪಡಿಸಿಲ್ಲ.

ಒಪ್ಪೋ ಫೈಂಡ್ N6 ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ಒಪ್ಪೋ ಫೈಂಡ್ N6 ಮೊಬೈಲ್ 6.62 ಇಂಚಿನ LTPO OLED ಕವರ್ ಸ್ಕ್ರೀನ್ ಪಡೆದಿರುವ ನಿರೀಕ್ಷೆಯಿದೆ. ಹಾಗೆಯೇ ಒಳಗಿನ ಡಿಸ್‌ಪ್ಲೇಯು 8.12 ಇಂಚಿನ LTPO OLED ಪ್ಯಾನೆಲ್ ಆಗಿರಲಿದೆ ಎನ್ನಲಾಗಿದೆ. ಈ ಮೊಬೈಲ್ ColorOS 16 ಜೊತೆಗೆ ಆಂಡ್ರಾಯ್ಡ್ 16 ಸಪೋರ್ಟ್ ಪಡೆದಿರಲಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್ 16GB ವರೆಗೆ RAM ಮತ್ತು 1TB ವರೆಗೆ UFS 4.1 ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಪಡೆದಿರಲಿದೆ.
ಅಲ್ಲದೇ ಈ ಮೊಬೈಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 200MP ಸೆನ್ಸಾರ್ ಆಗಿರಬಹುದು. ಅಲ್ಲದೇ ಉಳಿದೆರಡು ಕ್ಯಾಮೆರಾಗಳು 50MP ಸೆನ್ಸಾರ್ ಮತ್ತು 50MP ಅಲ್ಟ್ರಾ ವೈಡ್ ಸೆನ್ಸಾರ್‌ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಈ ಸ್ಮಾರ್ಟ್‌ಫೋನ್ 20MP ಕ್ಯಾಮೆರಾವನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತದೆ. ಹಾಗೆಯೇ 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್ ಜೊತೆಗೆ 6,000mAh ಬ್ಯಾಟರಿ ಪಡೆದಿರಲಿದೆ ಎಂದು ಲೀಕ್ ಮಾಹಿತಿಗಳು ಸೂಚಿಸುತ್ತವೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile