ನಾಳೆ Oppo F33 5G ಮೊಬೈಲ್‌ ಖರೀದಿಗೆ ಲಭ್ಯ! ಆಕರ್ಷಕ ಫೀಚರ್ಸ್‌

HIGHLIGHTS

ನಾಳೆ (ಏಪ್ರಿಲ್‌ 29 ರಂದು) ಒಪ್ಪೋದ ಈ ಮೊಬೈಲ್‌ ಸೇಲ್‌ ಶುರು

ಈ ಹೊಸ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಮ್ಯಾಕ್ಸ್ ಪ್ರೊಸೆಸರ್‌ ಪಡೆದಿದೆ

ಒಪ್ಪೋದ ಈ ಫೋನ್‌ ಫಾರೆಸ್ಟ್ ಗ್ರೀನ್ ಮತ್ತು ಪರ್ಲ್ ವೈಟ್ ಕಲರ್ ಆಯ್ಕೆ ಹೊಂದಿದೆ

ನಾಳೆ Oppo F33 5G ಮೊಬೈಲ್‌ ಖರೀದಿಗೆ ಲಭ್ಯ! ಆಕರ್ಷಕ ಫೀಚರ್ಸ್‌

ಒಪ್ಪೋ ಕಂಪನಿಯ ನೂತನ Oppo F33 5G ಮೊಬೈಲ್‌ ಸರಣಿಯ ಮೀಡ್‌ರೇಂಜ್‌ ಬೆಲೆಯ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಗಮನ ಸೆಳೆದಿವೆ. ಈ ಸ್ಮಾರ್ಟ್‌ಫೋನ್‌ ನಾಳೆ (ಏಪ್ರಿಲ್‌ 29 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಪ್ರಾರಂಭ ಮಾಡಲಿವೆ. ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಮ್ಯಾಕ್ಸ್ ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್‌ 80W SuperVOOC ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿರುವ ಜೊತೆಗೆ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ ಅಲ್ಲದೇ ಇದು ಫಾರೆಸ್ಟ್ ಗ್ರೀನ್ ಮತ್ತು ಪರ್ಲ್ ವೈಟ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೆ ಒಪ್ಪೋ F33 5G ಮೊಬೈಲ್‌ನ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : OnePlus Nord CE 6 Lite ಫೋನಿನ ಬೆಲೆ ಮಾಹಿತಿ ಬಹಿರಂಗ! ಮೇ 7 ರಂದು ಲಾಂಚ್‌

Oppo F33 5G ಫೋನ್‌ ಸೇಲ್‌ ಮಾಹಿತಿ

ಒಪ್ಪೋ F33 5G ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಈ ಮೊಬೈಲ್‌ ನಾಳೆ (ಏಪ್ರಿಲ್‌ 29 ರಂದು) 12AM ರಂದು ಅಮೆಜಾನ್‌ ಪ್ಲಾಟ್‌ಫಾರ್ಮ್‌ ಮೂಲಕ ಮಾರಾಟ ಶುರು ಮಾಡಲಿವೆ. ಒಪ್ಪೋ F33 5G ಫೋನಿನ 6GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 31,999 ರೂ.ಗಳು ಆಗಿದೆ. ಹಾಗೆಯೇ 8GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 34,999 ರೂ.ಗಳು ಆಗಿದೆ. ಅದೇ ರೀತಿ 8GB + 256GB ವೇರಿಯಂಟ್‌ ಬೆಲೆಯು 37,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ ಫಾರೆಸ್ಟ್ ಗ್ರೀನ್ ಮತ್ತು ಪರ್ಲ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್ ಅಮೆಜಾನ್‌ ಮತ್ತು ಒಪ್ಪೋ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಾಗಲಿದೆ.

Oppo F33 5g

ಒಪ್ಪೋ F33 5G ಮೊಬೈಲ್‌ ಫೀಚರ್ಸ್‌

ಒಪ್ಪೋ F33 5G ಮೊಬೈಲ್‌ 6.57 ಇಂಚಿನ FHD+ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 1,400 nits ಪೀಕ್‌ ಬ್ರೈಟ್ನೆಸ್‌ ಬೆಂಬಲ ಹೊಂದಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಮ್ಯಾಕ್ಸ್ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್‌ IP66 + IP68 + IP69 ರೇಟಿಂಗ್‌ ಸಪೋರ್ಟ್‌ ಒಳಗೊಂಡಿದೆ.

ಒಪ್ಪೋ F33 5G ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಹಾಗೆಯೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್‌ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಹಾಗೆಯೇ ಈ ಮೊಬೈಲ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 80W SuperVOOC ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo