OnePlus Nord CE 6 Lite ಫೋನಿನ ಬೆಲೆ ಮಾಹಿತಿ ಬಹಿರಂಗ! ಮೇ 7 ರಂದು ಲಾಂಚ್‌

HIGHLIGHTS

ಮೇ 7 ರಂದು ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಲಾಂಚ್

ಒನ್‌ಪ್ಲಸ್‌ನ ಈ ಫೋನ್‌ ಡಿಸ್‌ಪ್ಲೇಯು 144Hz ರಿಫ್ರೆಶ್‌ ರೇಟ್‌ ಹೊಂದಿರಲಿದೆ

ಈ ಫೋನ್‌ ಫ್ರೆಶ್ ಬ್ಲೂ, ಲೂನಾರ್ ಪರ್ಲ್ ಮತ್ತು ಪಿಚ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ

OnePlus Nord CE 6 Lite ಫೋನಿನ ಬೆಲೆ ಮಾಹಿತಿ ಬಹಿರಂಗ! ಮೇ 7 ರಂದು ಲಾಂಚ್‌

ಒನ್‌ಪ್ಲಸ್ ಕಂಪನಿಯು ಸದ್ಯದಲ್ಲೇ ನಾರ್ಡ್‌ ಸರಣಿಯಲ್ಲಿ ಹೊಸದಾಗಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅವುಗಳು ಕ್ರಮವಾಗಿ OnePlus Nord CE 6 ಹಾಗೂ OnePlus Nord CE 6 Lite ಮಾಡೆಲ್‌ಗಳು ಆಗಿವೆ. ಇನ್ನು ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನ್‌ ಇದೇ ಮೇ 7 ರಂದು ಲಾಂಚ್‌ ಆಗಲಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ CE 6 ಮೊಬೈಲ್‌ ಮೇ 6 ರಂದು ಬಿಡುಗಡೆ ಆಗಲಿದೆ. ಈ ಎರಡು ಫೋನ್‌ಗಳ ಲೀಕ್‌ ಫೀಚರ್ಸ್‌ ಈಗಾಗಲೇ ಮೊಬೈಲ್‌ ಪ್ರಿಯರ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನಿನ ಬೆಲೆ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಗ್ರಾಹಕರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ CE 6 ಲೈಟ್‌ ಫೋನಿನ ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನಿಮ್ಮ Smartphone ಸುರಕ್ಷಿತವಾಗಿದೆಯೇ? ಫೋನ್ ಹ್ಯಾಕ್ ಆಗದಂತೆ ತಡೆಯಲು ಹೀಗೆ ಮಾಡಿ!

OnePlus Nord CE 6 Lite: ನಿರೀಕ್ಷಿತ ಬೆಲೆ ಹಾಗೂ ಲಾಂಚ್

ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಭಾರತದಲ್ಲಿ 20,000 ರೂ.ಗಳಿಂದ 25,000 ರೂ.ಗಳ ರೇಂಜ್‌ನಲ್ಲಿ ಬಿಡುಗಡೆ ಆಗಬಹುದು ಎಂದು ವರದಿಗಳಾಗಿವೆ. ಅಂದಹಾಗೆ ಈ ಮೊಬೈಲ್‌ ಇದೇ ಮೇ 7 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಅಮೆಜಾನ್‌ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್‌ ಫ್ರೆಶ್ ಬ್ಲೂ, ಲೂನಾರ್ ಪರ್ಲ್ ಮತ್ತು ಪಿಚ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.

OnePlus Nord CE 6 Lite

ಒನ್‌ಪ್ಲಸ್‌ ನಾರ್ಡ್‌ CE 6 ನಿರೀಕ್ಷಿತ ಫೀಚರ್ಸ್‌

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಡಲಿರುವ ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು 144Hz ರಿಫ್ರೆಶ್‌ ರೇಟ್‌ ಜೊತೆಗೆ 1.5K ರೆಸಲ್ಯೂಶನ್ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಈ ಫೋನ್‌ 8,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಸಪೋರ್ಟ್‌ ಒಳಗೊಂಡಿರುವ ಸಾಧ್ಯತೆಗಳು ಅಧಿಕ ಆಗಿವೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ ಆಕ್ಸಿಜನ್‌ಓಎಸ್ 16 ನಲ್ಲಿ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್‌ ನಾರ್ಡ್‌ CE 6 ಸ್ಮಾರ್ಟ್‌ಫೋನ್‌ ಹಿಂಬದಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ Sony Lytia ಸೆನ್ಸಾರ್‌ ಅನ್ನು ಪಡೆದಿರಲಿದೆ. ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇರಲಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 32MP ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ. ಈ ಫೋನ್‌ 27W ರಿವರ್ಸ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿರುವ ಸಾಧ್ಯತೆಗಳು ಇವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo