OPPO F31 Series ಬಿಡುಗಡೆ ಕಂಫಾರ್ಮ್ ಮಾಡಿದ ಒಪ್ಪೋ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 08-Sep-2025
HIGHLIGHTS

ಭಾರತದಲ್ಲಿ OPPO F31 Series ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್.

OPPO F31 Series ಸ್ಮಾರ್ಟ್ಫೋನ್ 7000mAh ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ ಪ್ರೊಸೆಸರ್ನೊಂದಿಗೆ ಬರಲಿದೆ.

OPPO F31 Series ಸ್ಮಾರ್ಟ್ಫೋನ್ 128GB ಮಾದರಿ ಸುಮಾರು ₹20,000 ಕ್ಕಿಂತ ಕಡಿಮೆ ಬೆಲೆಗೆ ನಿರೀಕ್ಷಿಸಲಾಗಿದೆ.

ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿ ಒಪ್ಪೋ (OPPO) ತನ್ನ ಬಹುನಿರೀಕ್ಷಿತ OPPO F31 Series ಬಿಡುಗಡೆ ದಿನಾಂಕವನ್ನು ಭಾರತದಲ್ಲಿ ದೃಢಪಡಿಸಿದೆ. ಸ್ಮಾರ್ಟ್ಫೋನ್ “Durable Champion” ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುವ ಈ ಹೊಸ ಸ್ಮಾರ್ಟ್‌ಫೋನ್ ಸರಣಿಯು ಇದೆ 15ನೇ ಸೆಪ್ಟೆಂಬರ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಸರಣಿಯು ಪ್ರೀಮಿಯಂ ಫೀಚರ್ಗಳನ್ನು ಹೊಂದಿದ್ದು ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆ ಇದೆ. ಕಂಪನಿಯು ಇನ್ನೂ ಎಲ್ಲಾ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ ಆದರೆ ಹಲವು ವಿಶ್ವಾಸಾರ್ಹ ಮಾಹಿತಿ ಸೋರಿಕೆಗಳು ಮತ್ತು ಅಧಿಕೃತ ಟೀಸರ್‌ಗಳು ಈ ಸರಣಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿವೆ.

ಭಾರತದಲ್ಲಿ OPPO F31 Series ನಿರೀಕ್ಷಿತ ಬೆಲೆ ಮತ್ತು ವೇರಿಯೆಂಟ್

ಒಪ್ಪೋ ಕಂಪನಿ ತನ್ನ ಮುಂಬರಲಿರುವ ಈ ಸ್ಮಾರ್ಟ್ಫೋನ್ ಸರಣಿಯಲ್ಲಿ ಒಟ್ಟಾರೆಯಾಗಿ 3 ವೇರಿಯೆಂಟ್ ಪರಿಚಯಿಸುವ ನಿರೀಕ್ಷೆಗಳಿವೆ. ಕಂಪನಿ ಇದರಲ್ಲಿ OPPO F31, OPPO F31 Pro ಮತ್ತು OPPO F31 Pro+ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಸುಮಾರು 20,000 ರೂಗಳಿಗಿಂತ ಕಡಿಮೆ ಬೆಲೆಗೆ ನಿರೀಕ್ಷಿಸಲಾಗಿದೆ. ಈ OPPO F31 Series ಸ್ಮಾರ್ಟ್ ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗುವ ನಿರೀಕ್ಷೆಗಳಿವೆ.

ಭಾರತದಲ್ಲಿ OPPO F31 Series ನಿರೀಕ್ಷಿತ ಫೀಚರ್ಗಳೇನು?

ಈ ಸರಣಿಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬಾಳಿಕೆಯಾಗಿದೆ. ಈ ಫೋನ್‌ಗಳು IP66, IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿರಲಿದ್ದು ಇದು ಧೂಳು ಮತ್ತು ನೀರಿನಿಂದ ಫೋನ್‌ಗೆ ರಕ್ಷಣೆ ನೀಡುತ್ತದೆ. ಈ ಸ್ಮಾರ್ಟ್ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಸಾಧ್ಯತೆ ಇದೆ. ಈ ಸರಣಿಯ ಎಲ್ಲಾ ಫೋನ್‌ಗಳು ಪ್ರೈಮರಿ 50MP ಕ್ಯಾಮೆರಾ ಹೊಂದಿರಲಿವೆ.

Also Read: ತಪ್ಪಾದ UPI ಖಾತೆಗೆ ಹಣ ಸೆಂಡ್ಆ ಆಗೋಯ್ತಾ? ಹಾಗಾದ್ರೆ ತಕಕ್ಷಣ ವಾಪಸ್ ಪಡೆಯೋದು ಹೇಗೆ ತಿಳಿಯಿರಿ!

ಈ ಸ್ಮಾರ್ಟ್ ಫೋನ್ಗಳಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್‌ಗಳು 32MP ಮುಂಭಾಗದ ಕ್ಯಾಮೆರಾ ಹೊಂದಿರಲಿವೆ. ಇದು ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿವೆ ಆದರೆ ಇವುಗಳ ಖಚಿತ ಫೀಚರ್ಗಳಿಗಾಗಿ ಇನ್ನೂ ಕೊಂಚ ಸಮಯ ಕಾಯಬೇಕಿದೆ.

ಈ OPPO F31 ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಿಂದ OPPO F31 Pro ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಮತ್ತು OPPO F31 Pro+ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ OPPO F31 Series ಎಲ್ಲಾ ಮೂರು ಮಾದರಿಗಳು 7000mAh ಬ್ಯಾಟರಿ ಹೊಂದಿರಲಿವೆ ಎಂದು ಹೇಳಲಾಗಿದೆ. ಇದರೊಂದಿಗೆ ಫೋನ್‌ಗಳು 80W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು ಇದರಿಂದ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :