OnePlus Nord CE 6 Lite ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಬೆಸ್ಟ್ ಟೈಮ್! ಸಖತ್ ಆಫರ್
ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್ ಬೆಲೆಯಲ್ಲಿ ಇಳಿಕೆ
ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದೆ
ಒನ್‌ಪ್ಲಸ್‌ನ ಈ ಫೋನ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್ ಪಡೆದಿದೆ
ಗ್ರಾಹಕರ ಕುತೂಹಲ ಹೆಚ್ಚಿಸಿರುವ Amazon Great Indian Festival Sale 2026 ಸೇಲ್ ಇದೇ ಅಕ್ಟೋಬರ್ 8 ರಂದು ಶುರುವಾಗಲಿದೆ. ಈ ಮಾರಾಟ ಪ್ರಾರಂಭಕ್ಕೂ ಮುನ್ನವೇ ಅಮೆಜಾನ್ ತಾಣವು ಮೊಬೈಲ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಫರ್‌ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ ಮಾರಾಟದಲ್ಲಿ OnePlus Nord CE 6 Lite ಮೊಬೈಲ್ ಆಕರ್ಷಕ ಕೊಡುಗೆ ಪಡೆದಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ ಖರೀದಿದಾರರು ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಹಾಗಾದರೆ ಅಮೆಜಾನ್‌ನಲ್ಲಿ ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್‌ಗೆ ಲಭ್ಯವಿರುವ ಕೊಡುಗೆಯ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ Vivo X Fold 6 ಸ್ಮಾರ್ಟ್‌ಫೋನ್! ಬೆಲೆ ಹಾಗೂ ಫೀಚರ್ಸ್ ಗಮನಿಸಿ
OnePlus Nord CE 6 Lite ಫೋನಿಗೆ ಭಾರೀ ಡಿಸ್ಕೌಂಟ್
ಒನ್‌ಪ್ಲಸ್ ಮೊಬೈಲ್ ಕಂಪನಿಯ ಒನ್‌ಪ್ಲಸ್ ನಾರ್ಡ್ CE 6 ಲೈಟ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಪ್ರಾರಂಭವಾಗಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026 ಸೇಲ್‌ನಲ್ಲಿ ಬೊಂಬಾಟ್ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಅಮೆಜಾನ್‌ನಲ್ಲಿ ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್‌ನ 8GB + 128GB ವೇರಿಯಂಟ್ ಬೆಲೆ 33,999 ರೂ.ಗಳ ಬೆಲೆಯನ್ನು ಹೊಂದಿದೆ. ಆದರೆ ಪ್ರಸ್ತುತ ಇದರ ಬೆಲೆ 30,999 ರೂ.ಗಳು ಎಂದು ಲಿಸ್ಟ್ ಮಾಡಲಾಗಿದೆ.

ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್ ಫೀಚರ್ಸ್
ಒನ್‌ಪ್ಲಸ್ ನಾರ್ಡ್ CE 6 ಲೈಟ್ ಮೊಬೈಲ್ 144Hz ರಿಫ್ರೆಶ್ ರೇಟ್ ಜೊತೆಗೆ 6.78 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್ ಅನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನ್ MIL STD 810H ಮಿಲಿಟರಿ ದರ್ಜೆಯ ಬಾಳಿಕೆ ಜೊತೆಗೆ IP66, IP68, IP69 ಮತ್ತು IP69K ರೇಟಿಂಗ್ ಸೌಲಭ್ಯ ಪಡೆದಿದೆ.
ಒನ್‌ಪ್ಲಸ್ ನಾರ್ಡ್ CE 6 ಲೈಟ್ ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 2MP ಡೆಪ್ತ್ ಸೆನ್ಸಾರ್ ಸೌಲಭ್ಯದಲ್ಲಿ ಒಳಗೊಂಡಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8MP ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 7,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಸಪೋರ್ಟ್ ಒಳಗೊಂಡಿದೆ. ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
