ನೂತನ OnePlus Nord 6 ಮೊಬೈಲ್ ಪವರ್‌ಫುಲ್ ಫೀಚರ್ಸ್ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಇಂದು (ಏಪ್ರಿಲ್ 9 ರಂದು) ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 9,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 165Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೇ ಈ ಫೋನ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಯೊಂದಿಗೆ ಲಗ್ಗೆ ಇಟ್ಟಿದೆ. ಹಾಗಾದರೇ ಒನ್‌ಪ್ಲಸ್ ನಾರ್ಡ್ 6 ಮೊಬೈಲ್‌ನ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Motorola ಕಂಪನಿಯ ಈ ಜನಪ್ರಿಯ ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ! ಹೊಸ ಬೆಲೆ ನೋಡಿ
ದೇಶಿಯ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿರುವ ಒನ್‌ಪ್ಲಸ್ ನಾರ್ಡ್ 6 ಮೊಬೈಲ್ ನಾಳೆ (ಏಪ್ರಿಲ್ 9 ರಂದು) ಮಧ್ಯಾಹ್ನ 12 ಗಂಟೆಗೆ ಫಸ್ಟ್ ಸೇಲ್ ಪ್ರಾರಂಭ ಮಾಡಲಿದೆ. OnePlus Nord 6 Price in India for 8GB RAM + 256GB ವೇರಿಯಂಟ್ ಬೆಲೆಯು 38,999 ರೂ.ಗಳು ಆಗಿದೆ. ಅದೇ ರೀತಿ 12GB RAM + 256GB ವೇರಿಯಂಟ್ ಬೆಲೆಯು 41,999 ರೂ.ಗಳು ಆಗಿದೆ. ಇನ್ನು ಆಕ್ಸಸ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ದೊರೆಯುತ್ತದೆ. ಅಂದಹಾಗೆ ಈ ಮೊಬೈಲ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಹೊಸ ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ 6.78 ಇಂಚಿನ 1.5k ಸೂಪರ್ AMOLED ಡಿಸ್‌ಪ್ಲೇಯ ಹೊಂದಿದ್ದು, ಇದು 1,272×2,772 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 165Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 1800 nits ಬ್ರೈಟ್ನೆಸ್ ಪಡೆದುಕೊಂಡಿದೆ. ಹಾಗೆಯೇ ಇದು ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP66, IP68, IP69 ಮತ್ತು IP69K ರೇಟಿಂಗ್ ಸೌಲಭ್ಯ ಬೆಂಬಲಿಸುತ್ತದೆ.
ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 CMOS ಸೆನ್ಸಾರ್ ಅನ್ನು ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 32MP ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ ಈ ಫೋನ್ 9,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 80W SuperVOOC ಚಾರ್ಜಿಂಗ್ ಜೊತೆಗೆ 27W ವೈರ್ಡ್ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.