ಇಂದು ಭಾರತದಲ್ಲಿ OnePlus Nord 6 ಸ್ಮಾರ್ಟ್‌ಫೋನ್‌ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌

HIGHLIGHTS

ಇಂದು (ಏಪ್ರಿಲ್‌ 7 ರಂದು) ಎಂಟ್ರಿ ಕೊಡಲಿದೆ ಒನ್‌ಪ್ಲಸ್‌ ನಾರ್ಡ್‌ 6

ಒನ್‌ಪ್ಲಸ್‌ ಈ ಮೊಬೈಲ್‌ 50MP ಪ್ರಾಥಮಿಕ ಕ್ಯಾಮೆರಾ ಪಡೆದುಕೊಂಡಿರಲಿದೆ

ಒನ್‌ಪ್ಲಸ್‌ ನಾರ್ಡ್‌ 6 ಗ್ರೀನ್‌ ಹಾಗೂ ಪಿಂಕ್ ಕಲರ್‌ ಆಯ್ಕೆಯೊಂದಿಗೆ ಲಗ್ಗೆ ಇಡಬಹುದು

ಇಂದು ಭಾರತದಲ್ಲಿ OnePlus Nord 6 ಸ್ಮಾರ್ಟ್‌ಫೋನ್‌ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌

ಜನಪ್ರಿಯ OnePlus ಕಂಪನಿಯು ತನ್ನ ಬಹುನಿರೀಕ್ಷಿತ OnePlus Nord 6 ಮೊಬೈಲ್‌ ಅನ್ನು ಇಂದು (ಏಪ್ರಿಲ್‌ 7 ರಂದು) ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಅಮೆಜಾನ್‌ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ 9,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಪವರ್ ಅನ್ನು ಪಡೆದುಕೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ ಇದು 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾಧ್ಯತೆಗಳು ಇವೆ. ಹಾಗಾದರೇ ಒನ್‌ಪ್ಲಸ್‌ ನಾರ್ಡ್‌ 6 ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Digit.in Survey
✅ Thank you for completing the survey!

Also Read : 12GB RAM ಇರುವ ಹೊಸ Motorola Signature ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

OnePlus Nord 6 ಮೊಬೈಲ್‌ ಇಂದು ಬಿಡುಗಡೆ

ಒನ್‌ಪ್ಲಸ್‌ ಸಂಸ್ಥೆಯ ಮುಂಬರುವ ನೂತನ ಒನ್‌ಪ್ಲಸ್‌ ನಾರ್ಡ್‌ 6 ಸ್ಮಾರ್ಟ್‌ಫೋನ್‌ ಇಂದು (ಏಪ್ರಿಲ್‌ 7 ರಂದು) ಸಂಜೆ 7 ಗಂಟೆಗೆ ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಅಮೆಜಾನ್‌ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್‌ ಗ್ರೀನ್‌ ಹಾಗೂ ಪಿಂಕ್ ಕಲರ್‌ ಆಯ್ಕೆಗಳೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳಿವೆ. ಇದು 12GB RAM ವೇರಿಯಂಟ್‌ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗೆಯೇ ಸಂಸ್ಥೆಯು ತನ್ನ ಅಧಿಕೃತ ಟೀಸರ್‌ಗಳಲ್ಲಿ ಒನ್‌ಪ್ಲಸ್‌ ನಾರ್ಡ್‌ 6 ಬೆಲೆ 35,000 ರಿಂದ 40,000 ರೂ.ಗಳ ಅಂತರದಲ್ಲಿ ಇರಲಿದೆ ಎಂದು ಸೂಚಿಸಿದೆ. ಆದರೆ ಅಧಿಕೃತ ಬೆಲೆ ಇನ್ನು ಬಹಿರಂಗ ಮಾಡಿಲ್ಲ.

OnePlus Nord 6

ಒನ್‌ಪ್ಲಸ್‌ ನಾರ್ಡ್‌ 6 ನಿರೀಕ್ಷಿತ ಫೀಚರ್ಸ್‌

ನೂತನವಾಗಿ ಎಂಟ್ರಿ ಕೊಡಲಿರುವ ಒನ್‌ಪ್ಲಸ್‌ ನಾರ್ಡ್‌ 6 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯು 165Hz ರಿಫ್ರೆಶ್‌ ರೇಟ್‌ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು ಕ್ವಾಲ್ಕಮ್‌ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಈ ಫೋನ್‌ 9,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಸಪೋರ್ಟ್‌ ಒಳಗೊಂಡಿರುವ ಸಾಧ್ಯತೆಗಳು ಅಧಿಕ ಆಗಿವೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್‌ IP66, IP68, IP69 ಮತ್ತು IP69K ರೇಟಿಂಗ್‌ ಸೌಲಭ್ಯ ಬೆಂಬಲಿಸುತ್ತದೆ.

ಒನ್‌ಪ್ಲಸ್‌ ನಾರ್ಡ್‌ 6 ಸ್ಮಾರ್ಟ್‌ಫೋನ್‌ ಹಿಂಬದಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ Sony Lytia ಸೆನ್ಸಾರ್‌ ಅನ್ನು ಪಡೆದಿರಲಿದೆ. ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇರಲಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 32MP ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo