12GB RAM ಇರುವ ಹೊಸ Motorola Signature ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲಾ ಸಿಗ್ನಿಚರ್‌ ಬೆಲೆಯಲ್ಲಿ ಇಳಿಕೆ

ಮೊಟೊ ಸಂಸ್ಥೆಯ ಈ ಮೊಬೈಲ್‌ 5,200mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ

ಮೊಟೊರೊಲಾ ಸಿಗ್ನಿಚರ್‌ ಮೊಬೈಲ್‌ ಎರಡು ಆಕರ್ಷಕ ಕಲರ್‌ ಆಯ್ಕೆಗಳನ್ನು ಹೊಂದಿದೆ

12GB RAM ಇರುವ ಹೊಸ Motorola Signature ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

Motorola ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವ ಗ್ರಾಹಕರಿಗೆ ಇದೀಗ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಆಕರ್ಷಕ ಕೊಡುಗೆ ಲಭ್ಯ. ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಇದೀಗ Motorola Signature ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ ಘೋಷಿಸಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಮೊಟೊರೊಲಾ ಸಂಸ್ಥೆಯ ಈ ಮೊಬೈಲ್‌ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ 5,200mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಸಿಗ್ನಿಚರ್‌ ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಆಫರ್‌ನಲ್ಲಿ Samsung Galaxy M17 5G ಮೊಬೈಲ್‌ ಖರೀದಿಸಲು ಈ ಚಾನ್ಸ್‌ ಸೂಪರ್‌!

Motorola Signature ಬೆಲೆಯಲ್ಲಿ ಸಖತ್ ಇಳಿಕೆ

Motorola ಸಂಸ್ಥೆಯ ಮೊಟೊರೊಲಾ ಸಿಗ್ನಿಚರ್‌ ಫೋನ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 12GB RAM + 256GB ವೇರಿಯಂಟ್‌ ಬೆಲೆ 74,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 59,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಮೊಬೈಲ್‌ ಪ್ಯಾಂಟೋನ್ ಕಾರ್ಬನ್ ಹಾಗೂ ಪ್ಯಾಂಟೋನ್ ಮಾರ್ಟಿನಿ ಆಲಿವ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

Motorola Signature

ಮೊಟೊರೊಲಾ ಸಿಗ್ನಿಚರ್‌ ಫೋನಿನ ಫೀಚರ್

ಮೊಟೊರೊಲಾ ಸಿಗ್ನಿಚರ್‌ ಫೋನ್‌ 6.8 ಇಂಚಿನ Super HD AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1,264×2,780 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 165Hz ವರೆಗೆ refresh rate ಪಡೆದಿರುವ ಜೊತೆಗೆ 6,200 nits ಸೌಲಭ್ಯ ಹೊಂದಿದೆ. ಈ ಫೋನ್ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಬಲದ ಜೊತೆಗೆ Android 16 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ ಮೊಬೈಲ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಸಹ 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇವೆ. ಇದರ ಜೊತೆಗೆ ಸೆಲ್ಫಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.

ಮೊಟೊರೊಲಾ ಸಿಗ್ನಿಚರ್‌ ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಪವರ್‌ ಪಡೆದುಕೊಂಡಿದ್ದು ಇದಕ್ಕೆ ಅನುಗುಣವಾಗಿ ಆಗಿ 90W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್‌ ಹೊಂದಿದೆ. ಅಂದಹಾಗೆ ಈ ಫೋನ್ 41 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ ಇದು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ಮಾಡುವ ವ್ಯವಸ್ಥೆಯ ಆಯ್ಕೆ ಹೊಂದಿದೆ. ಹಾಗೆಯೇ ಈ ಫೋನ್‌ 5G, 4G LTE, Wi-Fi 7, ಬ್ಲೂಟೂತ್ 6.0, USB ಟೈಪ್-C ಪೋರ್ಟ್, GPS ಸಪೋರ್ಟ್ ಸಹ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo