OnePlus Nord 5 and OnePlus Nord CE5
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒನ್‌ಪ್ಲಸ್ (OnePlus) ಭಾರತದಲ್ಲಿ ಇಂದು ತನ್ನ ಎರಡು ಪವರ್ಫುಲ್ ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಇಂದು OnePlus Nord 5 ಮತ್ತು OnePlus Nord CE5 ಫೋನ್ಗಳನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಇತ್ತೀಚಿನಹೊಸ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆರಂಭಿಕ OnePlus Nord CE5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 22,999 ರೂಗಳಿಗೆ ಬಂದ್ರೆ OnePlus Nord 5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 29,999 ರೂಗಳಿಗೆ ಬಿಡುಗಡೆಯಾಗಿದೆ. ಹಾಗಾದ್ರೆ ಇವೆರಡು ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಮತ್ತು ಫೀಚರ್ಗಳೇನು ಸಂಪೂರ್ಣವಾಗಿ ಈ ಕೆಳಗೆ ಪರಿಶೀಲಿಸಬಹುದು.
ಮೊದಲಿಗೆ OnePlus Nord 5 ಸ್ಮಾರ್ಟ್ಫೋನ್ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ₹31,999 ರಿಂದ ಪ್ರಾರಂಭವಾದರೆ ಮತ್ತೊಂದು 12GB + 256GB ರೂಪಾಂತರದ ಬೆಲೆ ₹34,999 ಆಗಿದೆ. OnePlus Nord CE5 ಸ್ಮಾರ್ಟ್ಫೋನ್ 8GB RAM + 128GB ಸ್ಟೋರೇಜ್ ಬ್ಯಾಂಕ್ ಆಫರ್ ಜೊತೆಗೆ ₹22,999 ರುಗಳಾಗಿವೆ ಮತ್ತೊಂದು 8GB + 256GB ಸ್ಟೋರೇಜ್ ₹24,999 ರೂಗಳು ಮತ್ತು ಕೊನೆಯದಾಗಿ 12GB + 256GB ಸ್ಟೋರೇಜ್ ₹26,999 ರೂಗಳಿಗೆ ಲಭ್ಯ.
ಈ ಎರಡೂ ಫೋನ್ ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ₹2,000 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತವೆ. OnePlus Nord 5 ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ 9ನೇ ಜುಲೈ ಮೊದಲ ಮಾರಾಟಕ್ಕೆ ಲಭ್ಯವಾಗಲಿದ್ದು ಇದರ ರಂದು ಮತ್ತು OnePlus Nord CE5 ಸ್ಮಾರ್ಟ್ಫೋನ್ 12ನೇ ಜುಲೈಗೆ ಮೊದಲ ಮಾರಾಟಕ್ಕೆ ಬರಲಿದೆ.
Also Read: Free Ration: ಉಚಿತ ರೇಷನ್ ಪಡೆಯಲು ಮನೆಯಲ್ಲೇ ಕುಳಿತು ಈ 2 ನಿಮಿಷದ ಕೆಲಸ ಮಾಡಿಕೊಳ್ಳಿ!
OnePlus Nord 5 ಅದ್ಭುತವಾದ 6.83-ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದ್ದು 144Hz ರಿಫ್ರೆಶ್ ದರ ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಇದು OIS ಹೊಂದಿರುವ 50MP ಸೋನಿ LYT-700 ಮುಖ್ಯ ಕ್ಯಾಮೆರಾ ಮತ್ತು 50MP ಸ್ಯಾಮ್‌ಸಂಗ್ JN5 ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು ಎರಡೂ 4K 60fps ವೀಡಿಯೊ ಸಾಮರ್ಥ್ಯವನ್ನು ಹೊಂದಿವೆ. OnePlus Nord CE5 ಸ್ಮಾರ್ಟ್ಫೋನ್ 6.77 ಇಂಚಿನ FHD+ AMOLED 120Hz ಡಿಸ್ಪ್ಲೇ, OIS ಹೊಂದಿರುವ 50MP ಸೋನಿ LYT-600 ಮುಖ್ಯ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಕಾರ್ಯಕ್ಷಮತೆಯ ವಿಷಯದಲ್ಲಿ OnePlus Nord 5 ಫ್ಲ್ಯಾಗ್‌ಶಿಪ್-ಗ್ರೇಡ್ ಸ್ನಾಪ್‌ಡ್ರಾಗನ್ 8s Gen 3 SoC ನಿಂದ ಚಾಲಿತವಾಗಿದ್ದರೆ OnePlus Nord CE5 ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಪೆಕ್ಸ್ ಅನ್ನು ಬಳಸುತ್ತದೆ. OnePlus Nord 5 ದೊಡ್ಡ 6800mAh ಬ್ಯಾಟರಿಯನ್ನು ಹೊಂದಿದ್ದು 80W SUPERVOOC ಚಾರ್ಜಿಂಗ್ ಹೊಂದಿದೆ. OnePlus Nord CE5 ಫೋನ್ 7100mAh ಬ್ಯಾಟರಿಯೊಂದಿಗೆ ಇನ್ನಷ್ಟು ದೊಡ್ಡದಾಗಿದೆ ಜೊತೆಗೆ 80W ವೇಗದ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ. ಈ ಎರಡೂ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15 ಅನ್ನು ರನ್ ಮಾಡುತ್ತವೆ.
ಎರಡೂ ಫೋನ್‌ಗಳು ಡ್ಯುಯಲ್ ಸಿಮ್ 5G ಸಂಪರ್ಕ, ವೈ-ಫೈ 6 ಮತ್ತು ಬ್ಲೂಟೂತ್ 5.4 ಅನ್ನು ನೀಡುತ್ತವೆ. OnePlus Nord 5 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಬಾಳಿಕೆಯನ್ನು ಖಚಿತಪಡಿಸುತ್ತದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಸುರಕ್ಷಿತ ಅನ್‌ಲಾಕಿಂಗ್‌ಗಾಗಿ ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿವೆ. OnePlus Nord 5 ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು AI ಕಾರ್ಯಗಳಿಗಾಗಿ ಗೂಗಲ್ ಜೆಮಿನಿ ಏಕೀಕರಣವನ್ನು ಸಹ ಒಳಗೊಂಡಿದೆ.