OnePlus 15T ಸ್ಮಾರ್ಟ್‌ಫೋನ್‌ ಬಿಡುಗಡೆ! 100W SuperVOOC ಚಾರ್ಜಿಂಗ್ ಸೌಲಭ್ಯ

HIGHLIGHTS

ಚೀನಾದಲ್ಲಿ ಒನ್‌ಪ್ಲಸ್‌ 15T ಸ್ಮಾರ್ಟ್‌ಫೋನ್ ಲಾಂಚ್

ಈ ಫೋನ್‌ Snapdragon 8 Elite Gen 5 ಪ್ರೊಸೆಸರ್ ಹೊಂದಿದೆ

ಒನ್‌ಪ್ಲಸ್‌ 15T ಮೊಬೈಲ್‌ 7,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ

OnePlus 15T ಸ್ಮಾರ್ಟ್‌ಫೋನ್‌ ಬಿಡುಗಡೆ! 100W SuperVOOC ಚಾರ್ಜಿಂಗ್ ಸೌಲಭ್ಯ

ಲೀಡಿಂಗ್ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾಗಿರುವ ಒನ್‌ಪ್ಲಸ್‌ ಹೊಸದಾಗಿ OnePlus 15T ಸ್ಮಾರ್ಟ್‌ಫೋನ್ ಅನ್ನು ಇಂದು (ಮಾರ್ಚ್ 24 ರಂದು) ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ ಆಕ್ಟಾ ಕೋರ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿರುವ ಜೊತೆಗೆ 7,500mAh ಗ್ಲೇಸಿಯರ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ನೂತನ ಮೊಬೈಲ್‌ ಮೂರು ಕಲರ್‌ ವೇರಿಯಂಟ್‌ ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ ಇನ್ನೊಂದು ಹೈಲೈಟ್‌ ಎಂದರೆ ಇದು 100W SuperVOOC ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಓಎಸ್‌ ಸಪೋರ್ಟ್‌ನಲ್ಲಿಕೆಲಸ ಮಾಡಲಿದೆ. ಹಾಗಾದರೆ ಒನ್‌ಪ್ಲಸ್‌ 15T ಸ್ಮಾರ್ಟ್‌ಫೋನ್ ಫೀಚರ್ಸ್‌ ಹಾಗೂ ಬೆಲೆ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Samsung Galaxy F36 5G ಖರೀದಿ ಮಾಡಲು ಇದೇ ಬೆಸ್ಟ್‌ ಚಾನ್ಸ್‌! ಆಫರ್‌ ನೋಡಿ

OnePlus 15T ಸ್ಮಾರ್ಟ್‌ಫೋನ್ ಬೆಲೆ ಮಾಹಿತಿ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಒನ್‌ಪ್ಲಸ್‌ 15T ಮೊಬೈಲ್‌ನ ಆರಂಭಿಕ 12GB RAM + 256GB ವೇರಿಯಂಟ್‌ ಬೆಲೆ ಚೀನಾದಲ್ಲಿ CNY 4,299 (ಭಾರತದಲ್ಲಿ ಅಂದಾಜು 58,000 ರೂ.) ಆಗಿದೆ. ಹಾಗೆಯೇ 16GB RAM + 1TB ಸ್ಟೋರೇಜ್‌ನ ಹೈ ಎಂಡ್‌ ವೇರಿಯಂಟ್‌ CNY 5,699 (ಭಾರತದಲ್ಲಿ ಅಂದಾಜು 78,000ರೂ) ಆಗಿದೆ. ಈ ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

OnePlus 15T

ಒನ್‌ಪ್ಲಸ್‌ 15T ಮೊಬೈಲ್‌ ಫೀಚರ್ಸ್‌

ಒನ್‌ಪ್ಲಸ್‌ 15T ಮೊಬೈಲ್‌ 6.32 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ 165Hz ವರೆಗೆ ರಿಫ್ರೆಶ್ ರೇಟ್‌ ಹೊತೆಗೆಗ 1,800 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಪಡೆದುಕೊಂಡಿದೆ. ಅಲ್ಲದೇ ಇದರ ಸ್ಕ್ರೀನ್ 1,216×2,640 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಹಾಗೆಯೇ ಇದು ಆಕ್ಟಾ ಕೋರ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್‌ ಪಡೆದಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 16 ಓಎಸ್‌ ಕಾರ್ಯನಿರ್ವಹಿಸಲಿದೆ. ಅಲ್ಲದೇ 12GB RAM + 256GB ಹಾಗೂ 16GB RAM + 1TB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ ಒನ್‌ಪ್ಲಸ್‌ 15T ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹಾಗೂ ದ್ವಿತೀಯ ಕ್ಯಾಮೆರಾವು ಸಹ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 7,500mAh ಗ್ಲೇಸಿಯರ್ ಬ್ಯಾಟರಿ ಜೊತೆಗೆ 100W SuperVOOC ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo