OnePlus 15R Front Camera
ಭಾರತದಲ್ಲಿ ಮುಂಬರಲಿರುವ ಈ ಪವರ್ಫುಲ್ ಮತ್ತು ಅತ್ಯುತ್ತಮ OnePlus 15R ಸ್ಮಾರ್ಟ್‌ಫೋನ್ ಅನ್ನು ಇದೆ 17ನೇ ಡಿಸೆಂಬರ್ 2025 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದರ ಜೊತೆಗೆ OnePlus Pad Go 2 ಅನ್ನು ಸಹ ಬಿಡುಗಡೆ ಮಾಡಿದೆ. ಬಿಡುಗಡೆಗೆ ಮೊದಲು ಕಂಪನಿಯು ಈ ಹೊಸ ಸ್ಮಾರ್ಟ್ಫೋನ್ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುತ್ತಿದೆ. ಇತ್ತೀಚಿನ ಪ್ರಕಟಣೆಯಲ್ಲಿ ಹೊಸ ಫೀಚರ್ ಅನ್ನು ಈ ಫೋನ್ ಪರಿಚಯಿಸಿದ್ದು ಇದು 4K ವಿಡಿಯೋ ರೆಕಾಡಿಂಗ್ ಜೊತೆಗೆ 32MP ಮೆಗಾಪಿಕ್ಸೆಲ್ ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವುದಾಗಿ ಖಚಿತಪಡಿಸಿದೆ. ಈ OnePlus 15R ಸ್ಮಾರ್ಟ್‌ಫೋನ್ ಡಿಸ್ಪ್ಲೇ ಮತ್ತು ಕ್ಯಾಮೆರಾ ಸಾಮರ್ಥ್ಯಗಳ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿದ್ದು ಇದರ ಬಗ್ಗೆ ಈ ಕೆಳಗೆ ತಿಳಿಯಿರಿ.
Also Read: ನೀವು Paytm, G Pay ಅಥವಾ PhonePe ಬಳಸಿ ಮೂಲಕ ತಪ್ಪಾದ UPI ಖಾತೆಗೆ ಹಣ ಕಳುಹಿಸಿದ್ರೆ ಮೊದಲು ಈ ಕೆಲಸ ಮಾಡಿ!
ಕಂಪನಿಯು ಈಗಾಗಲೇ ಪೋಸ್ಟ್ ಮಾಡಿರುವಂತೆ OnePlus ಸ್ಮಾರ್ಟ್‌ಫೋನ್ ತನ್ನ ಈ R ಸರಣಿಯ ಫೋನ್ಗಳಲ್ಲಿ ಇದುವರೆಗೂ ಅಳವಡಿಸಿರುವ ಅತ್ಯಾಧುನಿಕ ಸೆಲ್ಫಿ ಕ್ಯಾಮೆರಾ ಸ್ವೀಕರಿಸಿರುವ ಈ ಫೋನ್ 32MP ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಆಟೋಫೋಕಸ್ ಸಾಮರ್ಥ್ಯ ಇರುತ್ತದೆ. ಇದರರ್ಥ ಮಸುಕಾದ ಅಥವಾ ಅಸ್ಪಷ್ಟವಾದ ಸೆಲ್ಫಿಗಳನ್ನು ತಪ್ಪಿಸಲು ಇದು ಸ್ವಯಂಚಾಲಿತವಾಗಿ ಲೆನ್ಸ್ ಅನ್ನು ಹೊಂದಿಸುತ್ತದೆ. ಇದಲ್ಲದೆ ಒನ್‌ಪ್ಲಾಸ್ 15R ಇದು ಫ್ರಂಟ್ ಕ್ಯಾಮೆರಾದಲ್ಲಿ 4K 30fps ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲದೊಂದಿಗೆ Detailmax Engine ಟೆಕ್ನಾಲಜಿಯನ್ನು ಬಳಸುವುದಾಗಿ ಹೇಳಲಾಗುತ್ತಿದೆ. ಇದನ್ನು R ಸರಣಿಯ ಮೊದಲ ಹ್ಯಾಂಡ್‌ಸೆಟ್ ಆಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಪ್ರೈಮರಿ 50MP ಕ್ಯಾಮೆರಾ IMX906 ಸೆನ್ಸರ್ ಮತ್ತೊಂದು 8MP ಅಲ್ಟ್ರಾವೈಡ್ IMX335 ಸೆನ್ಸರ್ ಜೊತೆಗೆ ಬರುತ್ತದೆ.
ಈ ಸ್ಮಾರ್ಟ್‌ಫೋನ್ ಡಿಸ್ಪ್ಲೇಯು ಪ್ರಮುಖ ಆಕರ್ಷಣೆಯಾಗಿದ್ದು ಈ OnePlus 15R ಸ್ಮಾರ್ಟ್‌ಫೋನ್ ಫ್ಲಾಗ್‌ಶಿಪ್ 6.78 ಇಂಚಿನ 1.5K AMOLED ರೆಸಲ್ಯೂಶನ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್ ರೇಟ್ 165Hz ಆಗಿದ್ದು ಬರೋಬ್ಬರಿ 450 ಪಿಕ್ಸೆಲ್ಸ್ ಡೆನ್ಸಿಟಿಯೊಂದಿಗೆ ಬರಲಿದೆ. ಅಲ್ಲದೆ ಇದು ಬರೋಬ್ಬರಿ 1800 ನಿಟ್ಸ್‌ನಷ್ಟು ಗರಿಷ್ಠ ಪ್ರಕಾಶಮಾನತೆಯನ್ನು ನೀಡುವ ಸಾಧ್ಯತೆಗಳಿವೆ. ಇದು ಪವರ್ಫುಲ್ Snapdragon 8 Gen 5 ಚಿಪ್‌ಸೆಟ್‌ಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಹೊಸ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗುವ ಮೊದಲ ಹ್ಯಾಂಡ್‌ಸೆಟ್ ಇದಾಗಿದೆ ಮತ್ತು ಇದನ್ನು ಕ್ವಾಲ್‌ಕಾಮ್‌ನೊಂದಿಗೆ ಸಹ-ಆಪ್ಟಿಮೈಸ್ ಮಾಡಲಾಗಿದೆ ಎಂದು ಹೇಳಲಾಗಿದೆ. ಇಂಟರ್ನೆಟ್ ಸಂಪರ್ಕ ಮತ್ತು ಸ್ಪಂದನವನ್ನು ಸುಧಾರಿಸಲು ಈ ಫೋನ್ ಹೊಸ G2 WiFi ಚಿಪ್ ಮತ್ತು ಟಚ್ ರೆಸ್ಪಾನ್ಸ್ ಚಿಪ್ಅನ್ನು ಸಹ ಹೊಂದಿದೆ. ಇದರ ವಿನ್ಯಾಸದ ವಿಷಯದಲ್ಲಿ ಇದು ಯಾವುದೇ ಒನ್‌ಪ್ಲಸ್ ಸಾಧನದಲ್ಲಿ ಇದುವರೆಗೆ ನೀಡಲಾದ ಅತಿದೊಡ್ಡ ಸೆಲ್ ಆಗಿರುವ 7400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ನಾಲ್ಕು ವರ್ಷಗಳ ಬಳಿಕವೂ ಇದರ ಸಾಮರ್ಥ್ಯದ 80 ಪ್ರತಿಶತ ಉಳಿಯುತ್ತದೆ ಎಂದು ಕಂಪನಿ ಹೇಳಿದೆ.