OnePlus 13s Launched in India
ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ OnePlus ಭಾರತದಲ್ಲಿ ಇಂದು ತನ್ನ ಹೊಚ್ಚ ಹೊಸ OnePlus 13s 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಪ್ರೀಮಿಯಂ 5G ಸ್ಮಾರ್ಟ್ಫೋನ್ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳಿಂದ ತುಂಬಿದೆ. ಅಲ್ಲದೆ ಸ್ಮಾರ್ಟ್ಫೋನ್ ವಿಶೇಷವಾಗಿ 12GB RAM, Snapdragon 8 Elite ಮತ್ತು ಸೇಲ್ಫಿಗಾಗಿ 32MP ಸೆನ್ಸರ್ಗಳನ್ನು ಹೊಂದಿದೆ. OnePlus 13s 5G ಸ್ಮಾರ್ಟ್ಫೋನ್ ಮಾದರಿಯನ್ನು ಕಂಪನಿ ಬರೋಬ್ಬರಿ 5000 ರೂಗಳ ಬ್ಯಾಂಕ್ ಆಫರ್ ಜೊತೆಗೆ ಪರಿಚಯಿಸಿದೆ. ಹಾಗಾದ್ರೆ ಈ OnePlus 13s 5G ಸ್ಮಾರ್ಟ್ಫೋನ್ ಮಾರಾಟದ ಬೆಲೆ ಎಷ್ಟು ಮತ್ತು ಇದರ್ಥ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
OnePlus 13s 5G ಸ್ಮಾರ್ಟ್ಫೋನ್ ಗ್ರೀನ್ ಸಿಲ್ಕ್, ಬ್ಲಾಕ್ ವೆಲ್ವೆಟ್ ಮತ್ತು ಪಿಂಕ್ ಸ್ಯಾಟಿನ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ ಪ್ರಸ್ತುತ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಸುಮಾರು 54,999 ರೂಗಳಿಗೆ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು 59,999 ರೂಗಳಿಗೆ ಪರಿಚಯಿಸಿದೆ.
ಆದರೆ ಕಂಪನಿ ಬಿಡುಗಡೆಯ ಆಫರ್ ಅಡಿಯಲ್ಲಿ ಈ ಎರಡು ಫೋನ್ಗಳ ಮೇಲೆ SBI ಕಾರ್ಡ್ ಬಳಸಿಕೊಂಡು ಬಳಕೆದಾರರು ಬರೋಬ್ಬರಿ 5000 ರೂಗಳ ಲಿಮಿಟೆಡ್ ಟೈಮ್ ಆಫರ್ ಸಹ ಪಡೆಯಬಹುದು. ಅಂದರೆ ಬ್ಯಾಂಕ್ ಆಫರ್ ನಂತರ OnePlus 13s 5G ಸ್ಮಾರ್ಟ್ಫೋನ್ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 49,999 ರೂಗಳಿಗೆ ಖರೀದಿಸಬಹುದು. ಆಸಕ್ತ ಬಳಕೆದಾರರು ಈ ಸ್ಮಾರ್ಟ್ಫೋನ್ ಅನ್ನು ಇದೆ 12ನೇ ಜೂನ್ 2025 ರಿಂದ ಮೊದಲ ಮಾರಾಟದಲ್ಲಿ ಖರೀದಿಯನ್ನು ಪಡೆಯಬಹುದು.
ಇದನ್ನೂ ಓದಿ: Washing Machine Deals: ಅಮೆಜಾನ್‌ನಲ್ಲಿ ನಿಮ್ಮ ಕೈಗೆಟಕುವ ಬೆಲೆಗೆ ಈ ಟಾಪ್ 5 ಜಬರ್ದಸ್ತ್ ವಾಶಿಂಗ್ ಮಷೀನ್‌ಗಳ ಮಾರಾಟ!
OnePlus 13s ಸ್ಮಾರ್ಟ್ಫೋನ್ 6.32 ಇಂಚಿನ ಪೂರ್ಣ-HD+ (2640×1216 ಪಿಕ್ಸೆಲ್‌ಗಳು) FHD+ AMOLED ಡಿಸ್ಪ್ಲೇಯ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 5 ಗ್ಲಾಸ್ ಹೊಂದಿದೆ. OnePlus 13s ಫೋನ್ ಕಾಮೆರದಲ್ಲಿ 50MP ಪ್ರೈಮರಿ Sony LYT-700 ಸೆನ್ಸರ್ ಹೊಂದಿದ್ದು ಮತ್ತೊಂದು 50MP ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಅಲ್ಲದೆ AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
OnePlus 13s ಸ್ಮಾರ್ಟ್ಫೋನ್ Snapdragon® 8 Elite ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ OnePlus 13s ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.