ನಾಳೆ Nothing Phone 4b ಮೊಬೈಲ್‌ ಸೇಲ್‌ ಶುರು! 6,000mAh ಬ್ಯಾಟರಿ ಸೌಲಭ್ಯ

HIGHLIGHTS

ನಾಳೆ ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ ಸೇಲ್‌ ಪ್ರಾರಂಭ

ಈ ಹೊಸ ಮೊಬೈಲ್‌ ಮೂರು ಆಕರ್ಷಕ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ

ನಥಿಂಗ್ ಫೋನ್‌ 4b ಫೋನ್‌ ಸ್ನಾಪ್‌ಡ್ರಾಗನ್ 6 ಜೆನ್‌ 4 ಪ್ರೊಸೆಸರ್‌ ಹೊಂದಿದೆ

ನಾಳೆ Nothing Phone 4b ಮೊಬೈಲ್‌ ಸೇಲ್‌ ಶುರು! 6,000mAh ಬ್ಯಾಟರಿ ಸೌಲಭ್ಯ

ಜನಪ್ರಿಯ ನಥಿಂಗ್ ಸಂಸ್ಥೆಯ ಹೊಸ Nothing Phone 4b ಮೊಬೈಲ್ ಮೀಡ್‌ರೇಂಜ್‌ ಬೆಲೆಯ ಜೊತೆ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್‌ ನಾಳೆ (ಜುಲೈ 14 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಶುರು ಮಾಡಿದೆ. ಈ ನೂತನ ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 6 ಜೆನ್‌ 4 ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಬ್ಲ್ಯಾಕ್‌, ಬ್ಲೂ ಮತ್ತು ವೈಟ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹಾಗಾದರೇ ನಥಿಂಗ್ ಫೋನ್‌ 4b ಮೊಬೈಲ್‌ನ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Motorola Edge 70 Max ಮೊಬೈಲ್‌ ಲಾಂಚ್‌ಗೆ ಡೇಟ್‌ ಫಿಕ್ಸ್‌! ಪ್ರೀಮಿಯಂ ಲುಕ್‌ನಲ್ಲಿ ಬರಲಿದೆ

ನಾಳೆ Nothing Phone 4b ಮೊಬೈಲ್‌ ಸೇಲ್ ಶುರು

ದೇಶೀಯ ಮಾರುಕಟ್ಟೆಯಲ್ಲಿ ನಥಿಂಗ್ ಕಂಪನಿಯ ನಥಿಂಗ್ ಫೋನ್‌ 4b ಮೊಬೈಲ್‌ ನಾಳೆ (ಜುಲೈ 14 ರಿಂದ) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಿವೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ 34,999 ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 256GB ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ 38,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಮೊಬೈಲ್‌ ಮೂರು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಬ್ಲ್ಯಾಕ್‌, ಬ್ಲೂ ಮತ್ತು ವೈಟ್‌ ಆಗಿವೆ. ಈ ಫೋನ್‌ ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್ ಸೇರಿದಂತೆ ರಿಟೇಲ್‌ ಸ್ಟೋರ್‌ ಮೂಲಕ ಸೇಲ್‌ಗೆ ಬರಲಿದೆ.

Nothing Phone 4b battery

ನಥಿಂಗ್ ಫೋನ್‌ 4b ಮೊಬೈಲ್‌ ಫೀಚರ್ಸ್‌

ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ 6.77 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 2,000 ವರೆಗಿನ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 6 ಜೆನ್‌ 4 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB + 128GB ಹಾಗೂ 8GB + 256GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ ಆಂಡ್ರಾಯ್ಡ್‌ 16 ಆಧಾರಿತ ನಥಿಂಗ್ ಓಎಸ್ 4.1 ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ದ್ವಿತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದಿವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 7.5W ವೈರ್ಡ್ ರಿವರ್ಸ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile