Nothing Phone 4b RCB Edition
Nothing ಕಂಪನಿಯ ಹೊಸದಾಗಿ ನಥಿಂಗ್ ಫೋನ್ 4b ಮೊಬೈಲ್ ಅನ್ನು ಮುಂದಿನ ವಾರವೇ (ಜುಲೈ 7 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಹೊಸ ಸ್ಮಾರ್ಟ್‌ಫೋನ್ ಜೊತೆಗೆ ವಿಶೇಷ Nothing Phone 4b RCB Edition ಕೂಡ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಅಂದಹಾಗೆ ಈ ಮೊಬೈಲ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ದೃಢಪಡಿಸಲಾಗಿದೆ. ಇನ್ನು ಮುಂಬರುವ ಈ ಹೊಸ ಫೋನ್ ಆರ್‌ಸಿಬಿ ತಂಡದ ಲೋಗೋದೊಂದಿಗೆ ವಿಶಿಷ್ಟವಾದ ರೆಡ್-ಸಿಲ್ವರ್ ಕಲರ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದರೆ ನಥಿಂಗ್ ಫೋನ್ 4b ಆರ್‌ಸಿಬಿ ಎಡಿಷನ್ ಮೊಬೈಲ್‌ನ ಲಾಂಚ್ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭಾರತದಲ್ಲಿ ಬಿಡುಗಡೆ ಆಯ್ತು Oppo Reno 16 ಸ್ಮಾರ್ಟ್‌ಫೋನ್! ಟ್ರಿಪಲ್ 50MP ಕ್ಯಾಮೆರಾ ಸೌಲಭ್ಯ
ನಥಿಂಗ್ ಮೊಬೈಲ್ ಸಂಸ್ಥೆಯ ನೂತನ ನಥಿಂಗ್ ಫೋನ್ 4b ಸ್ಮಾರ್ಟ್‌ಫೋನ್ ಇದೇ ಜುಲೈ 7, 2027 ರಂದು ಮಧ್ಯಾಹ್ನ 3:30 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದಲ್ಲಿಯೇ ನಥಿಂಗ್ ಕಂಪನಿಯು ಭಾರತೀಯ ಮಾರುಕಟ್ಟೆಗಳಲ್ಲಿ ಆರ್‌ಸಿಬಿ ಆವೃತ್ತಿಯ ನಥಿಂಗ್ ಫೋನ್ 4b ಅನ್ನು ಸಹ ಅನಾವರಣಗೊಳಿಸಲಿದೆ. ಲಾಂಚ್ ಬಳಿಕ ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ನಥಿಂಗ್ ಫೋನ್ 4b ಸ್ಮಾರ್ಟ್‌ಫೋನ್ ಬ್ಲೂ ಕಲರ್‌ನಲ್ಲಿ ಲಭ್ಯವಾಗಲಿದೆ. ಇನ್ನು ಆರ್‌ಸಿಬಿ ಎಡಿಷನ್ ರೆಡ್ ಶೆಡ್ ಕಲರ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಫೋನಿನ ಬೆಲೆಯ ಬಗ್ಗೆ ಸಂಸ್ಥೆಯು ಇನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಸದ್ಯಕ್ಕೆ ನಥಿಂಗ್ ಫೋನ್ 4b ಹಾಗೂ ನಥಿಂಗ್ ಫೋನ್ 4b ಆರ್‌ಸಿಬಿ ಎಡಿಷನ್ ಫೋನಿನ ಸಂಪೂರ್ಣ ಫೀಚರ್ಸ್‌ಗಳ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಅದಾಗ್ಯೂ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಇದರ ಜೊತೆಗೆ ಈ ಫೋನ್‌ನಲ್ಲಿ ಸುಧಾರಿತ AI (ಕೃತಕ ಬುದ್ಧಿಮತ್ತೆ) ಆಧಾರಿತ ಆಯ್ಕೆಗಳ ಬೆಂಬಲ ಪಡೆದಿರಲಿದೆ ಎಂದು ಹೇಳಲಾಗಿದೆ. ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿರುವ ನಿರೀಕ್ಷೆಗಳು ಇವೆ.