RCB Edition ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿರುವ Nothing ಮೊಬೈಲ್ ಬ್ರಾಂಡ್‌!

HIGHLIGHTS

ಜುಲೈ 7 ರಂದು ನಥಿಂಗ್ ಫೋನ್‌ 4b ಆರ್‌ಸಿಬಿ ಎಡಿಷನ್‌ ಲಾಂಚ್

ಹೊಸ ಆರ್‌ಸಿಬಿ ಎಡಿಷನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರುವ ನಿರೀಕ್ಷೆ ಇದೆ

ನಥಿಂಗ್ ಫೋನ್‌ 4b ಆರ್‌ಸಿಬಿ ಎಡಿಷನ್‌ ರೆಡ್‌ ಶೆಡ್‌ ಕಲರ್‌ ಆಯ್ಕೆಯಲ್ಲಿ ಬರಲಿದೆ

RCB Edition ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿರುವ Nothing ಮೊಬೈಲ್ ಬ್ರಾಂಡ್‌!

Nothing ಕಂಪನಿಯ ಹೊಸದಾಗಿ ನಥಿಂಗ್ ಫೋನ್‌ 4b ಮೊಬೈಲ್‌ ಅನ್ನು ಮುಂದಿನ ವಾರವೇ (ಜುಲೈ 7 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಹೊಸ ಸ್ಮಾರ್ಟ್‌ಫೋನ್ ಜೊತೆಗೆ ವಿಶೇಷ Nothing Phone 4b RCB Edition ಕೂಡ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಅಂದಹಾಗೆ ಈ ಮೊಬೈಲ್‌ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ದೃಢಪಡಿಸಲಾಗಿದೆ. ಇನ್ನು ಮುಂಬರುವ ಈ ಹೊಸ ಫೋನ್‌ ಆರ್‌ಸಿಬಿ ತಂಡದ ಲೋಗೋದೊಂದಿಗೆ ವಿಶಿಷ್ಟವಾದ ರೆಡ್‌-ಸಿಲ್ವರ್ ಕಲರ್‌ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದರೆ ನಥಿಂಗ್ ಫೋನ್‌ 4b ಆರ್‌ಸಿಬಿ ಎಡಿಷನ್‌ ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ ಬಿಡುಗಡೆ ಆಯ್ತು Oppo Reno 16 ಸ್ಮಾರ್ಟ್‌ಫೋನ್! ಟ್ರಿಪಲ್‌ 50MP ಕ್ಯಾಮೆರಾ ಸೌಲಭ್ಯ

Nothing Phone 4b RCB Edition ಲಾಂಚ್‌ ಮಾಹಿತಿ

ನಥಿಂಗ್ ಮೊಬೈಲ್‌ ಸಂಸ್ಥೆಯ ನೂತನ ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ ಇದೇ ಜುಲೈ 7, 2027 ರಂದು ಮಧ್ಯಾಹ್ನ 3:30 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದಲ್ಲಿಯೇ ನಥಿಂಗ್ ಕಂಪನಿಯು ಭಾರತೀಯ ಮಾರುಕಟ್ಟೆಗಳಲ್ಲಿ ಆರ್‌ಸಿಬಿ ಆವೃತ್ತಿಯ ನಥಿಂಗ್‌ ಫೋನ್ 4b ಅನ್ನು ಸಹ ಅನಾವರಣಗೊಳಿಸಲಿದೆ. ಲಾಂಚ್‌ ಬಳಿಕ ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ ಬ್ಲೂ ಕಲರ್‌ನಲ್ಲಿ ಲಭ್ಯವಾಗಲಿದೆ. ಇನ್ನು ಆರ್‌ಸಿಬಿ ಎಡಿಷನ್‌ ರೆಡ್‌ ಶೆಡ್‌ ಕಲರ್‌ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಫೋನಿನ ಬೆಲೆಯ ಬಗ್ಗೆ ಸಂಸ್ಥೆಯು ಇನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲ.

Nothing Phone 4b RCB Edition

ನಥಿಂಗ್ ಫೋನ್‌ 4b ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಸದ್ಯಕ್ಕೆ ನಥಿಂಗ್ ಫೋನ್‌ 4b ಹಾಗೂ ನಥಿಂಗ್ ಫೋನ್‌ 4b ಆರ್‌ಸಿಬಿ ಎಡಿಷನ್‌ ಫೋನಿನ ಸಂಪೂರ್ಣ ಫೀಚರ್ಸ್‌ಗಳ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಅದಾಗ್ಯೂ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಇದರ ಜೊತೆಗೆ ಈ ಫೋನ್‌ನಲ್ಲಿ ಸುಧಾರಿತ AI (ಕೃತಕ ಬುದ್ಧಿಮತ್ತೆ) ಆಧಾರಿತ ಆಯ್ಕೆಗಳ ಬೆಂಬಲ ಪಡೆದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile