Nothing Phone 3a Community Edition
ಭಾರತದಲ್ಲಿ ನಥಿಂಗ್ ಕಂಪನಿಯ ಹೊಸ ಮತ್ತು ಲೇಟೆಸ್ಟ್ Nothing Phone 3a Community Edition ಇಂದು 9ನೇ ಡಿಸೆಂಬರ್ 2025 ರಂದು ಸದ್ದಿಲ್ಲದೆ ಬಿಡುಗಡೆಯಾಗಿದೆ. ಇದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಮೊದಲು ಪರಿಚಯಿಸಲಾದ Nothing Phone 3a ಒಂದು ವಿಶೇಷ ರೂಪಾಂತರವಾಗಿದೆ. ಸುಮಾರು 700 ಕ್ಕೂ ಹೆಚ್ಚು ನಥಿಂಗ್ ಕಮ್ಯುನಿಟಿ ಸದಸ್ಯರು ಸಲ್ಲಿಸಿದ ವಿನ್ಯಾಸಗಳು ಮತ್ತು ಫೋನ್‌ನ ಸ್ಕ್ರೀನ್ (UI) ಅಂಶಗಳನ್ನು ಈ ಹೊಸ ಫೋನಿನಲ್ಲಿ ಬಳಸಲಾಗಿದೆ. ಈ ಫೋನ್ ಅನ್ನು ಕಮ್ಯುನಿಟಿದವರ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ. ಕಂಪನಿಯ ಹೇಳಿಕೆಯ ಪ್ರಕಾರ ಈ ಕಮ್ಯುನಿಟಿ ಆವೃತ್ತಿಯು ಹೊಸ ವಿನ್ಯಾಸದೊಂದಿಗೆ ಒಂದು ವಿಶಿಷ್ಟವಾದ ಲಾಕ್ ಸ್ಕ್ರೀನ್ ಗಡಿಯಾರ ಮತ್ತು ಅದಕ್ಕೆ ಹೊಂದುವಂತಹ ಹೊಸ ವಾಲ್‌ಪೇಪರ್‌ಗಳೊಂದಿಗೆ ಬರುತ್ತದೆ.
Also Read: ಅಮೆಜಾನ್‌ನಲ್ಲಿ ಇಂದು ಸೋನಿಯ ಈ Dolby Digital Soundbar ಮೇಲೆ ಭರ್ಜರಿ ಡಿಸ್ಕೌಂಟ್‌ಗಳು ಲಭ್ಯ!
ಭಾರತದಲ್ಲಿ ನಥಿಂಗ್ ಫೋನ್ (3a) ಕಮ್ಯುನಿಟಿ ಆವೃತ್ತಿಯ ಬೆಲೆಯನ್ನು 12GB RAM ಮತ್ತು 256GB ಸ್ಟೋರೇಜ್ ಇರುವ ಒಂದೇ ಮಾದರಿಗೆ ರೂ. 28,999 ಎಂದು ನಿಗದಿಪಡಿಸಲಾಗಿದೆ. ಈ ವಿಶೇಷ ಆವೃತ್ತಿಯ ಕೇವಲ 1,000 ಯೂನಿಟ್‌ಗಳನ್ನು (ಸಂಖ್ಯೆ) ಮಾತ್ರ ಉತ್ಪಾದಿಸಲಾಗುತ್ತದೆ. ಇವುಗಳನ್ನು ಸೀಮಿತ ಬಿಡುಗಡೆಯ (Limited Release) ಭಾಗವಾಗಿ ಎಲ್ಲಾ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಡಿಸೆಂಬರ್ 13 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಮಾರಾಟ ಕಾರ್ಯಕ್ರಮದಲ್ಲಿ (Drop Event) ಈ ಫೋನ್ ಖರೀದಿಗೆ ಲಭ್ಯವಿರುತ್ತದೆ.
ಮ್ಯುನಿಟಿ ಸದಸ್ಯರಾದ ಎಮ್ರೆ ಕಾಯ್ಗಂಕಲ್ ಅವರು ವಿನ್ಯಾಸ ಮಾಡಿದ ಹಾರ್ಡ್‌ವೇರ್ ಪ್ಯಾಕೇಜ್ ಗೆಲುವು ಸಾಧಿಸಿತು. ಈ ವಿನ್ಯಾಸವು 1990 ದಶಕದ ಕೊನೆಯ ಮತ್ತು 2000 ದಶಕದ ಆರಂಭದ ತಂತ್ರಜ್ಞಾನದ ನೋಟದಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ನಥಿಂಗ್‌ನ ಈ ಹೊಸ ಕಮ್ಯುನಿಟಿ ಆವೃತ್ತಿ ಯೋಜನೆಯಲ್ಲಿ ಆಕ್ಸೆಸರಿ ವಿನ್ಯಾಸ (Accessory Design) ಎಂಬ ಹೊಸ ವರ್ಗವನ್ನು ಸಹ ಸೇರಿಸಲಾಗಿತ್ತು. ಇದರಲ್ಲಿ ಆಂಬ್ರೋಗಿಯೊ ಟಕೋನಿ ಮತ್ತು ಲೂಯಿಸ್ ಐಮಂಡ್ ಅವರ ವಿನ್ಯಾಸಗಳನ್ನು ಆರಿಸಲಾಗಿದೆ.
Also Read: Lava Play Max ಭಾರತದಲ್ಲಿ ಗೇಮರ್‌ಗಳಿಗಾಗಿ ಬಿಡುಗಡೆಯಾಗಿದೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
ಇದರಲ್ಲಿ ಡೈಸ್‌ನ ಪ್ರತಿಯೊಂದು ಮುಖದ ಮೇಲೆ ಕಂಪನಿಯ ಸಹಿ Ndot 55 ಫಾಂಟ್‌ನಲ್ಲಿ ಸಂಖ್ಯೆಗಳನ್ನು ಮುದ್ರಿಸಲಾಗಿದೆ. ಕಮ್ಯುನಿಟಿಯ ಮತ್ತೊಬ್ಬ ಸದಸ್ಯ ಜೇಡ್ ಜಾಕ್, ನಥಿಂಗ್‌ನ ಲಂಡನ್‌ನಲ್ಲಿರುವ ಸಾಫ್ಟ್‌ವೇರ್ ತಂಡದೊಂದಿಗೆ ಸೇರಿ ಹೊಸ ಲಾಕ್ ಸ್ಕ್ರೀನ್ ಗಡಿಯಾರದ ಮುಖ ಮತ್ತು ವಾಲ್‌ಪೇಪರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಇದು ಸ್ಕ್ರೀನ್ ಮೇಲೆ ಅನಗತ್ಯ ಗೊಂದಲವನ್ನು ಕಡಿಮೆ ಮಾಡಿ ಮುಖ್ಯ ಮಾಹಿತಿಯ ಕಡೆಗೆ ಗಮನ ಸೆಳೆಯುತ್ತದೆ. ಇದು ನಥಿಂಗ್‌ಓಎಸ್‌ನ ವಿಶಿಷ್ಟ ನೋಟಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಹೇಳಲಾಗಿದೆ.
Nothing Phone 3a Lite ಸ್ಮಾರ್ಟ್ಫೋನ್ 6.77 ಇಂಚಿನ flexible AMOLED (1080 x 2392 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Nothing Phone 3a Lite ಫೋನ್ ಕಾಮೆರದಲ್ಲಿ 50MP 1/1.57-inch Samsung ಸೆನ್ಸರ್ ಮತ್ತೊಂದು 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Nothing Phone 3a Lite ಫೋನ್ MediaTek Dimensity 7300 Pro 5G ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Nothing Phone 3a Lite ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 33W ಫಾಸ್ಟ್ ಚಾರ್ಜಿಂಗ್ ಅನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 3 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.