Samsung Galaxy F06 5G launched in India
Samsung Galaxy F06 5G launched in India: ಭಾರತದಲ್ಲಿ ಸ್ಯಾಮ್‌ಸಂಗ್ ಬಜೆಟ್ ವಿಭಾಗದಲ್ಲಿ ತನ್ನ ಹೊಸ Samsung Galaxy F06 5G ಸ್ಮಾರ್ಟ್‌ಫೋನ್ ಕೇವಲ 10,000 ರೂಗಳೊಳಗೆ ಬಿಡುಗಡೆಗೊಳಿಸಿದೆ. ಪ್ರಸ್ತುತ 5000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಅನೇಕ ಲೇಟೆಸ್ಟ್ ಫೀಚರ್ಗಳನ್ನು ಈ Samsung Galaxy F06 5G ಸ್ಮಾರ್ಟ್ಫೋನ್ ಹೊಂದಿದೆ. ಸ್ಯಾಮ್‌ಸಂಗ್ ಇದರೊಂದಿಗೆ ದೇಶದಲ್ಲಿ ಕೈಗೆಟುಕುವ ಬೆಲೆಗೆ 5G ಫೋನ್‌ಗಳ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಭಾರತದಲ್ಲಿ ಪ್ರಸ್ತುತ Samsung Galaxy F06 5G ಸ್ಮಾರ್ಟ್ಫೋನ್ ಆರಂಭಿಕ 4GB + 128GB ರೂಪಾಂತರದ ಬೆಲೆ 10,999 ರೂಗಳಿಗೆ ಬಿಡುಗಡೆಯಾಗಿದ್ದು ಇದರ ಮತ್ತೊಂದು 6GB + 128GB ಮಾದರಿಯನ್ನು ರೂಪಾಂತರಕ್ಕೆ 11,999 ರೂ.ಗಳಿಗೆ ಖರೀದಿಸಬಹುದು.
ಸ್ಯಾಮ್‌ಸಂಗ್ ಬಿಡುಗಡೆಯ ಕೆಲವು ಕೊಡುಗೆಗಳನ್ನು ಸಹ ಹೊಂದಿದ್ದು ಅದು ಬೆಲೆಯನ್ನು 10,000 ರೂ.ಗಿಂತ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಈ ಎರಡು ರೂಪಾಂತರಗಳ ಮೇಲೆ ಬರೋಬ್ಬರಿ 500 ರೂಗಳ ಬಿಡುಗಡೆಯ ಆಫರ್ ಅಡಿಯಲ್ಲಿ ಆರಂಭಿಕ ಕೇವಲ 9499 ರೂಗಳಿಗೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಇದೆ 17ನೇ ಫೆಬ್ರವರಿಯಿಂದ ಖರೀದಿಸಬಹುದು.
Also Read: iQOO Z9 Lite 5G ಸ್ಮಾರ್ಟ್ಫೋನ್ 50MP Sony AI ಕ್ಯಾಮೆರಾದೊಂದಿಗೆ ಕೇವಲ ₹9,499 ರೂಗಳಿಗೆ ಮಾರಾಟ!
ಈ ಹೊಸ Samsung Galaxy F06 5G ಸ್ಮಾರ್ಟ್ಫೋನ್ 6.7 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು, HD+ ರೆಸಲ್ಯೂಶನ್ ಮತ್ತು ಸ್ಟ್ಯಾಂಡರ್ಡ್ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮಗೆ 50MP ಪ್ರೈಮರಿ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
Samsung Galaxy F06 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ One UI 7.0 ಆವೃತ್ತಿಯೊಂದಿಗೆ 4 ವರ್ಷಗಳ ಭದ್ರತಾ ಮತ್ತು 4 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್‌ಗಳನ್ನು ನೀಡುವ ಭರವಸೆ ನೀಡುತ್ತದೆ. ಫೋನ್ MediaTek Dimensity 6300 5G ಚಿಪ್‌ಸೆಟ್‌ನಿಂದ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಚಾಲಿತವಾಗಿದೆ. ಫೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಬದಿಯಲ್ಲಿರುವ ಪವರ್ ಬಟನ್‌ನಲ್ಲಿ ನಿರ್ಮಿಸಲಾಗಿದೆ.