ಜಬರ್ದಸ್ತ್‌ ಫೀಚರ್ಸ್‌ ಇರುವ Motorola Signature ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲಾ ಸಿಗ್ನಿಚರ್ ಫೋನಿಗೆ ಆಕರ್ಷಕ ಆಫರ್‌

ಮೊಟೊರೊಲಾ ಸಿಗ್ನಿಚರ್ ಮೊಬೈಲ್‌ 5,200mAh ಬ್ಯಾಟರಿ ಸೌಲಭ್ಯ ಹೊಂದಿದೆ

ಮೊಟೊರೊಲಾ ಸಿಗ್ನಿಚರ್ ಸ್ಮಾರ್ಟ್‌ಫೋನ್‌ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯ

Flipkart Big Bang Diwali Sale: ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಹಬ್ಬದ ಮಾರಾಟದಲ್ಲಿ ಆಯ್ದ ಮೊಬೈಲ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ ಮೊಟೊ ಕಂಪನಿಯ Motorola Signature ಸ್ಮಾರ್ಟ್‌ಫೋನ್‌ ಸಹ ಸ್ಪೆಷಲ್ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್‌ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ 5,200mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಸಿಗ್ನಿಚರ್ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಕಡಿಮೆ ಬೆಲೆಯಲ್ಲಿ 6000mAh ಬ್ಯಾಟರಿ ಇರುವ Lava ಮೊಬೈಲ್‌ ಖರೀದಿಸಲು ಇಲ್ಲಿದೆ ಬೆಸ್ಟ್‌ ಆಫರ್‌!

Motorola Signature ಈಗ ಆಫರ್‌ನಲ್ಲಿ ಲಭ್ಯ

ಪ್ರಿಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರ ಗಮನ ಸೆಳೆದಿರುವ ಮೊಟೊರೊಲಾ ಸಿಗ್ನಿಚರ್ ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ 12GB + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 74,999 ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಪ್ರಸ್ತುತ ಈ ಮೊಬೈಲ್‌ ಬ್ಯಾಂಕ್‌ ಆಫರ್‌ಗಳ ಮೂಲಕ 59,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಅನ್ನು ಗ್ರಾಹಕರು ಪ್ಯಾಂಟೋನ್ ಕಾರ್ಬನ್ ಹಾಗೂ ಪ್ಯಾಂಟೋನ್ ಮಾರ್ಟಿನಿ ಆಲಿವ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದು.

Motorola Signature 27

ಮೊಟೊರೊಲಾ ಸಿಗ್ನಿಚರ್ ಫೀಚರ್ ಮತ್ತು ಇತರೆ ಆಯ್ಕೆಗಳು

ಮೊಟೊ ಸಂಸ್ಥೆಯ ಈ ನೂತನ ಫೋನ್‌ 6.8 ಇಂಚಿನ Super HD AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1,264×2,780 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 165Hz ವರೆಗೆ refresh rate ಹೊಂದಿದ್ದು 6,200 nits ಸೌಲಭ್ಯ ನೀಡಲಾಗಿದೆ. ಈ ಫೋನ್ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಜೊತೆಗೆ Android 16 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಮೊಟೊ ಸಿಗ್ನಿಚರ್ ಮೊಬೈಲ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಸಹ 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇವೆ. ಇನ್ನು ಸೆಲ್ಫಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇದು 8K/30 fps ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಪಡೆದಿದೆ.

ಮೊಟೊರೊಲಾ ಸಿಗ್ನಿಚರ್ ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು ಇದಕ್ಕೆ ಸಪೋರ್ಟಿವ ಆಗಿ 90W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್‌ ಹೊಂದಿದೆ. ಅಂದಹಾಗೆ ಈ ಫೋನ್ 41 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ ಇದು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ಮಾಡುವ ವ್ಯವಸ್ಥೆಯ ಆಯ್ಕೆ ಹೊಂದಿದೆ. ಉಳಿದಂತೆ ಇದು ಇದು 5G, 4G LTE, Wi-Fi 7, ಬ್ಲೂಟೂತ್ 6.0, USB ಟೈಪ್-C ಪೋರ್ಟ್, GPS ಸಪೋರ್ಟ್ ಸಹ ಪಡೆದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :