Oppo Find X10 Pro Max with ultra premium camera and features
ಒಪ್ಪೋ ಕಂಪನಿಯ ನೂತನ Oppo Find X10 Pro Max ಫೋನ್ ಫ್ಲ್ಯಾಗ್ಶಿಪ್ ಬೆಲೆ ಹಾಗೂ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಇಂದು (ಅಕ್ಟೋಬರ್ 29 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭ ಮಾಡಿದೆ. ಈ ನೂತನ ಮೊಬೈಲ್ MediaTek Dimensity 9600 Pro ಚಿಪ್ಸೆಟ್ ಪ್ರೊಸೆಸರ್ ಜೊತೆಗೆ 8,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಬ್ಯಾಕ್ಅಪ್ ಅನ್ನು ಪಡೆದುಕೊಂಡಿದೆ. ಇನ್ನು ಹಾಗೆಯೇ ಈ ಮೊಬೈಲ್ 200MP ಯ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿವೆ. ಅಲ್ಲದೇ ಈ ಫೋನ್ ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ ಸೇಲ್, ಬೆಲೆ, ಫೀಚರ್ಸ್ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭಾರತದಲ್ಲಿ LG 115 ಇಂಚಿನ 4K Mini LED ಟಿವಿ ಬಿಡುಗಡೆ: ಆಕರ್ಷಕ ಫೀಚರ್ಸ್, ಅಚ್ಚರಿಯ ಬೆಲೆ
ಒಪ್ಪೋ ಕಂಪನಿಯ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ ಇಂದು (ಅಕ್ಟೋಬರ್ 29 ರಂದು) ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭ ಮಾಡಿದೆ. ಈ ಮೊಬೈಲ್ನ 12GB + 512GB ಸ್ಟೋರೇಜ್ ವೇರಿಯಂಟ್ ಬೆಲೆ 1,99,999 ರೂ.ಗಳು ಆಗಿದೆ. ಇನ್ನು ಈ ಫೋನ್ ಲೂನಾ ವೈಟ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಒಪ್ಪೋ ಆನ್ಲೈನ್ ಸ್ಟೋರ್, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು.
ಹೊಸ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ 6.78 ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 144Hz ವರೆಗಿನ ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಡಿಸ್ಪ್ಲೇ 3,600 ನಿಟ್ಸ್ ಸೌಲಭ್ಯ ಪಡೆದುಕೊಂಡಿದೆ. ಇನ್ನು ಡಿಸ್ಪ್ಲೇಯನ್ನು ಗೀರುಗಳಿಂದ ರಕ್ಷಿಸಲು ಕ್ರಿಸ್ಟಲ್ ಗಾರ್ಡ್ ಗ್ಲಾಸ್ ಒದಗಿಸಲಾಗಿದೆ. ಈ ಫೋನ್ MediaTek Dimensity 9600 Pro ಚಿಪ್ಸೆಟ್ ಪ್ರೊಸೆಸರ್ ಒಳಗೊಂಡಿದ್ದು, Android 17 ಆಧಾರಿತ ColorOS 17 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಪಡೆದಿದೆ.
ಹಾಗೆಯೇ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿವೆ. ಅವುಗಳು ಕ್ರಮವಾಗಿ 200MP ಪ್ರೈಮರಿ ಸೆನ್ಸರ್, 200MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 200MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 50MP ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.