ಭಾರತದಲ್ಲಿ LG 115 ಇಂಚಿನ 4K Mini LED ಟಿವಿ ಬಿಡುಗಡೆ: ಆಕರ್ಷಕ ಫೀಚರ್ಸ್‌, ಅಚ್ಚರಿಯ ಬೆಲೆ

LG ಕಂಪನಿಯು ಭಾರತದಲ್ಲಿ ತನ್ನ ಹೊಸ 115 ಇಂಚಿನ QNED Evo AI Mini LED ಟಿವಿಯನ್ನು ಬಿಡುಗಡೆ ಮಾಡಿದೆ. ಈ ಟಿವಿಯು ಬುಗ್ ಸ್ಕ್ರೀನ್‌, ಉತ್ತಮ ಗುಣಮಟ್ಟ ಮತ್ತು ಅತ್ಯಾಧುನಿಕ ಗೇಮಿಂಗ್ ಫೀಚರ್‌ಗಳನ್ನು ಹೊಂದಿದೆ. ಇದರ ಜೊತೆಗೆ Dolby Vision, Dolby Atmos ಮತ್ತು AI ಆಧಾರಿತ ಆಯ್ಕೆಗಳಿಗೂ ಸಪೋರ್ಟ್‌ ಹೊಂದಿದೆ. ಈ ಟಿವಿಯಲ್ಲಿ Alpha 8 AI Processor 4K Gen 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, AI Super Upscaling 4K, Precision Dimming Ultra ಮತ್ತು Dynamic Tone Mapping Pro ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ. ಹಾಗಾದರೆ, ಎಲ್‌ಜಿ ಕಂಪನಿಯ ಈ ಹೊಸ ಟಿವಿಯ ಬೆಲೆ ಎಷ್ಟು? ಇದರ ಪ್ರಮುಖ ಫೀಚರ್‌ಗಳು ಯಾವುವು? ಮುಂದೆ ನೋಡೋಣ.

Also Read : ಟ್ರಿಪಲ್‌ ಕ್ಯಾಮೆರಾ ರಚನೆ ಇರುವ Vivo V70 ಖರೀದಿಸಲು ಇದುವೇ ಅತ್ಯುತ್ತಮ ಸಮಯ!

ಹೊಸ LG ಟಿವಿಯ ಬೆಲೆ ಮತ್ತು ಲಭ್ಯತೆ

ಎಲ್‌ಜಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತದಲ್ಲಿ 115 ಇಂಚಿನ QNED Evo AI Mini LED ಟಿವಿಯ ಬೆಲೆ 14,99,990 ರೂ.ಗಳು ಆಗಿದೆ. ಆದರೆ, ಈ ಟಿವಿ ಮಾರುಕಟ್ಟೆಯಲ್ಲಿ ಯಾವಾಗ ಮಾರಾಟಕ್ಕೆ ಲಭ್ಯವಾಗಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಹೊಸ ಎಲ್‌ಜಿ ಟಿವಿಯ ಫೀಚರ್‌ಗಳು

ಈ ಟಿವಿಯು 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 115 ಇಂಚಿನ 4K Ultra HD ಡಿಸ್‌ಪ್ಲೇಯನ್ನು ಹೊಂದಿದೆ. Mini LED ಬ್ಯಾಕ್‌ಲೈಟಿಂಗ್ ತಂತ್ರಜ್ಞಾನ ಮತ್ತು 120Hz ನೇಟಿವ್ ರಿಫ್ರೆಶ್ ರೇಟ್ ಇದರ ಪ್ರಮುಖ ವಿಶೇಷತೆಗಳಾಗಿವೆ. ಹಾಗೆಯೇ Dolby Vision, HDR10 ಮತ್ತು HLG HDR ಫಾರ್ಮ್ಯಾಟ್‌ಗಳಿಗೆ ಬೆಂಬಲವಿದೆ. Dynamic QNED Color Pro ತಂತ್ರಜ್ಞಾನ ಪಡೆದಿದೆ. ಈ ಟಿವಿಯಲ್ಲಿ Alpha 8 AI Processor 4K Gen 3 ಪ್ರೊಸೆಸರ್ ನೀಡಲಾಗಿದೆ.

ಹಾಗೆಯೇ ಈ ಟಿವಿಯು AMD FreeSync, Auto Low Latency Mode (ALLM) ಮತ್ತು 4K ರೆಸಲ್ಯೂಶನ್‌ನಲ್ಲಿ 120Hz ರಿಫ್ರೆಶ್ ರೇಟ್‌ನೊಂದಿಗೆ Dolby Vision Gaming ಬೆಂಬಲವಿದೆ. ಈ ಟಿವಿಯು webOS 26 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ Voice ID, AI Concierge ಮತ್ತು Google Gemini ಹಾಗೂ Microsoft Copilot ಆಧಾರಿತ ಚಾಟ್‌ಬಾಟ್‌ಗಳಂತಹ ಸೌಲಭ್ಯ ಪಡೆದಿದೆ.

ಅಲ್ಲದೇ ಈ ಟಿವಿಯು 40W ಸಾಮರ್ಥ್ಯದ 2.2 ಚಾನೆಲ್ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. Dolby Atmos ಬೆಂಬಲದ ಜೊತೆಗೆ Alpha 8 AI Sound Pro ತಂತ್ರಜ್ಞಾನವು ವರ್ಚುವಲ್ ಸರೌಂಡ್ ಸೌಂಡ್ ಅನುಭವವನ್ನು ನೀಡುತ್ತದೆ. ಈ ಟಿವಿಯಲ್ಲಿ ನಾಲ್ಕು HDMI ಪೋರ್ಟ್‌ಗಳು ಮತ್ತು ಎರಡು USB 2.0 ಪೋರ್ಟ್‌ಗಳನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 5, Bluetooth 5.3, Ethernet ಮತ್ತು Optical Digital Audio Output ಸೇರಿವೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :