ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ Motorola Edge 70 Pro+ ಸ್ಮಾರ್ಟ್‌ಫೋನ್‌!

HIGHLIGHTS

ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 70 ಪ್ರೊ+

ಮೊಟೊದ ಈ ಮೊಬೈಲ್‌ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಹೊಂದಿರಲಿದೆ

ಮೊಟೊರೊಲಾ ಎಡ್ಜ್‌ 70 ಪ್ರೊ+ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್‌ ಪಡೆದಿರಲಿದೆ

ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ Motorola Edge 70 Pro+ ಸ್ಮಾರ್ಟ್‌ಫೋನ್‌!

ಲೀಡಿಂಗ್ ಮೊಬೈಲ್‌ ಬ್ರಾಂಡ್‌ಗಳಲ್ಲಿ ಒಂದಾದ ಮೊಟೊರೊಲಾ ಕಂಪನಿಯು ಇದೀಗ ಹೊಸದಾಗಿ Motorola Edge 70 Pro+ ಮೊಬೈಲ್‌ ಅನ್ನು ಲಾಂಚ್ ಮಾಡಲು ತಯಾರಾಗಿದೆ. ಈ ನೂತನ ಸ್ಮಾರ್ಟ್‌ಫೋನ್‌ ಇಂದು (ಜೂನ್ 4 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕುರಿತಾಗಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಪ್ರತ್ಯೇಕ ಮೈಕ್ರೋಸೈಟ್ ಅನ್ನು ಸಹ ತೆರೆಯಲಾಗಿದೆ. ಇನ್ನು ಮುಂಬರುವ ಈ ಮೊಬೈಲ್‌ ವೇಗದ ಫೀಚರ್ಸ್ ಜೊತೆಗೆ ಸ್ಟೈಲಿಶ್‌ ಲುಕ್‌ನೊಂದಿಗೆ ಲಗ್ಗೆ ಇಡಲಿದೆ. ಹಾಗೆಯೇ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇದರೊಂದಿಗೆ ಈ ಮೊಬೈಲ್‌ 50MP ಸೋನಿ LYTIA ಕ್ಯಾಮೆರಾ ಸೆನ್ಸಾರ್‌ ಪಡೆದಿರಲಿದೆ. ಹಾಗಾದರೆ ಮೊಟೊರೊಲಾ ಎಡ್ಜ್‌ 70 ಪ್ರೊ+ ಮೊಬೈಲ್‌ನ ಹೊಸ ಅಪ್‌ಡೇಟ್ಸ್‌ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Lava Bold N2 5G ಸ್ಮಾರ್ಟ್‌ಫೋನ್‌! ಕಡಿಮೆ ಬೆಲೆಗೆ ಲಭ್ಯ

Motorola Edge 70 Pro+ ಮೊಬೈಲ್‌ ಇಂದು ಲಾಂಚ್

ಮೊಟೊರೊಲಾ ಕಂಪನಿಯ ಮುಂಬರುವ ನೂತನ ಮೊಟೊರೊಲಾ ಎಡ್ಜ್‌ 70 ಪ್ರೊ+ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಈ ಫೋನ್‌ ಇಂದು (ಜೂನ್ 4 ರಂದು) ಮಧ್ಯಾಹ್ನ 12 ಗಂಟೆಗೆ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ನಿರೀಕ್ಷೆಗಳು ಇವೆ ಎನ್ನಲಾಗಿದೆ. ಇನ್ನು ಲಾಂಚ್ ಬಳಿಕ ಫ್ಲಿಪ್‌ಕಾರ್ಟ್, ಮೊಟೊರೊಲಾ ವೆಬ್‌ಸೈಟ್‌ ಮತ್ತು ಪ್ರಮುಖ ಇ ಕಾಮರ್ಸ್‌ ತಾಣದಲ್ಲಿ ಈ ಮೊಬೈಲ್‌ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಮೊಬೈಲ್‌ ಸ್ಯಾಟಿನ್-ಲಕ್ಸ್ ಫಿನಿಶ್ ಟ್ವಿಲ್-ಇನ್‌ಸ್ಪೈಯರ್ಡ್ ಫಿನಿಶ್ ಹಾಗೂ Sculpted ವುಡ್‌ ಡಿಸೈನ್‌ ಲುಕ್‌ನ ಆಯ್ಕೆಗಳಲ್ಲಿ ಲಗ್ಗೆ ಇಡಲಿದೆ.

Motorola Edge 70 Pro

ಮೊಟೊರೊಲಾ ಎಡ್ಜ್‌ 70 ಪ್ರೊ+ ನಿರೀಕ್ಷಿತ ಫೀಚರ್ಸ್‌

ಲೀಕ್ ಮಾಹಿತಿ ಪ್ರಕಾರ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಮೊಟೊರೊಲಾ ಎಡ್ಜ್‌ 70 ಪ್ರೊ+ ಫೋನ್ 6.8 ಇಂಚಿನ 1.5K ಕ್ವಾಡ್ ಕರ್ವ್ಡ್ 144Hz AMOLED ಸ್ಕ್ರೀನ್ ಒಳಗೊಂಡಿರಲಿದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಸಾಧ್ಯತೆಗಳು ಇವೆ. ಇದರೊಂದಿಗೆ ಮೊಟೊರೊಲಾ ಎಡ್ಜ್ 70 ಪ್ರೊ+ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿರಲಿದ್ದು, ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-710 ಸೆನ್ಸರ್ ಪಡೆದಿರಲಿದೆ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿರಲಿದೆ.

ಹಾಗೆಯೇ ಮೊಟೊರೊಲಾ ಎಡ್ಜ್‌ 70 ಪ್ರೊ+ ಫೋನ್‌ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಪಡೆದಿದ್ದು, ಫ್ಲಾಟ್ ಹಿಂಭಾಗದ ಪ್ಯಾನೆಲ್‌ನ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿದೆ. ಈ ಫೋನ್‌ ಕರ್ವ್ಡ್‌ ಸ್ಕ್ರೀನ್‌ ಅನ್ನು ಹೊಂದಿರಲಿದ್ದು, ಕೇಂದ್ರಿತ ಹೋಲ್ ಪಂಚ್ ಡಿಸ್‌ಪ್ಲೇ ಕಟೌಟ್‌ನೊಂದಿಗೆ ಕಾಣಿಸಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಅತ್ಯುತ್ತಮ ಕ್ಯಾಮೆರಾವನ್ನು ಪಡೆದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile