ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Lava Bold N2 5G ಸ್ಮಾರ್ಟ್‌ಫೋನ್‌! ಕಡಿಮೆ ಬೆಲೆಗೆ ಲಭ್ಯ

HIGHLIGHTS

ಲಾವಾ ಬೋಲ್ಡ್ N2 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಈ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ T8200 ಪ್ರೊಸೆಸರ್‌ ಪಡೆದಿದೆ

ಲಾವಾದ ಈ ಮೊಬೈಲ್‌ ರೀಗಲ್ ಗೋಲ್ಡ್ ಮತ್ತು ಬಿಲಿಯನೇರ್ ಬ್ಲೂ ಬಣ್ಣಗಳ ಆಯ್ಕೆ ಹೊಂದಿದೆ

ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Lava Bold N2 5G ಸ್ಮಾರ್ಟ್‌ಫೋನ್‌! ಕಡಿಮೆ ಬೆಲೆಗೆ ಲಭ್ಯ

ಲಾವಾ ಕಂಪನಿಯ ಬಹುನಿರೀಕ್ಷಿತ Lava Bold N2 5G ಮೊಬೈಲ್‌ ಇಂದು (ಮೇ 26 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಅಗ್ಗದ ಬೆಲೆಯಲ್ಲಿ ನೂತನವಾಗಿ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಯುನಿಸಾಕ್ T8200 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಮೊಬೈಲ್‌ ರೀಗಲ್ ಗೋಲ್ಡ್ ಮತ್ತು ಬಿಲಿಯನೇರ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗಾದರೇ ಲಾವಾ ಬೋಲ್ಡ್ N2 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 10,001mAh ಬ್ಯಾಟರಿ ಮೂಲಕ ಗಮನ ಸೆಳೆದಿರುವ realme P4 Power 5G ಬೆಲೆಯಲ್ಲಿ ಈಗ ಇಳಿಕೆ!

Lava Bold N2 5G ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಲಾವಾ ಕಂಪನಿಯ ಲಾವಾ ಬೋಲ್ಡ್ N2 5G ಮೊಬೈಲ್‌ ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಮೊಬೈಲ್‌ನ 4GB RAM + 64GB ಸ್ಟೋರೇಜ್‌ ವೇರಿಯಂಟ್‌ 12,999 ರೂ.ಗಳ ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್‌ ರೀಗಲ್ ಗೋಲ್ಡ್ ಮತ್ತು ಬಿಲಿಯನೇರ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಇದೇ ಜೂನ್ 9 ರಂದು ಮಾರಾಟ ಪ್ರಾರಂಭ ಮಾಡಲಿದೆ. ಸೇಲ್‌ ದಿನದಂದು ಅಮೆಜಾನ್‌ನಲ್ಲಿ ಆರಂಭಿಕ ಕೊಡುಗೆಯಾಗಿ 11,999 ರೂ.ಗಳಿಗೆ ಲಭ್ಯ.

Lava Bold N2 5G

ಲಾವಾ ಬೋಲ್ಡ್ N2 5G ಮೊಬೈಲ್‌ ಫೀಚರ್ಸ್‌ ಹೀಗಿವೆ

ಲಾವಾ ಬೋಲ್ಡ್ N2 5G ಮೊಬೈಲ್‌ 6.75 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು ಇದರ ಜೊತೆಗೆ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಯುನಿಸಾಕ್ T8200 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 4GB RAM + 64GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಅಲ್ಲದೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಫೋನ್ IP64 ರೇಟಿಂಗ್‌ ಸೌಲಭ್ಯ ಪಡೆದುಕೊಂಡಿದೆ.

ಲಾವಾ ಬೋಲ್ಡ್ N2 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 10W ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 815 ನಿಮಿಷಗಳ YouTube ಪ್ಲೇಬ್ಯಾಕ್ ಮತ್ತು 743 ನಿಮಿಷಗಳ ಸ್ಕ್ರೀನ್-ಆನ್ ಟೈಮ್‌ ನೀಡುತ್ತದೆ ಎಂದು ಹೇಳಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile