ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ Motorola Edge 70 Pro+ ಸ್ಮಾರ್ಟ್‌ಫೋನ್ ನಾಳೆ (ಜೂನ್ 11 ರಂದು) ದೇಶೀಯ ಮಾರುಕಟ್ಟೆಗೆ ಸೇಲ್ ಶುರು ಮಾಡಲಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 6,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಮೊಬೈಲ್ ಪ್ಯಾಂಟೋನ್ ಚಿಕೋರಿ ಕಾಫಿ, ಪ್ಯಾಂಟೋನ್ ಸ್ಟಾರ್ಮಿ ಸೀ ಮತ್ತು ಪ್ಯಾಂಟೋನ್ ಜಿನ್‌ಫ್ಯಾಂಡೆಲ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ. ಹಾಗಾದರೇ ಮೊಟೊರೊಲಾ ಎಡ್ಜ್ 70 ಪ್ರೊ+ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 120W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಒಳಗೊಂಡ realme GT 7T ಬೆಲೆಯಲ್ಲಿ ಭಾರೀ ಇಳಿಕೆ!
ಮೊಟೊರೊಲಾ ಸಂಸ್ಥೆಯ ನೂತನ ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ನಾಳೆ (ಜೂನ್ 11 ರಂದು) ಮಧ್ಯಾಹ್ನ 12 ಗಂಟೆಗೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಲಿದೆ. ಈ ಮೊಬೈಲ್‌ನ 12GB RAM + 256GB ಸ್ಟೋರೇಜ್ ವೇರಿಯಂಟ್ 47,999 ರೂ.ಗಳ ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಪ್ಯಾಂಟೋನ್ ಚಿಕೋರಿ ಕಾಫಿ, ಪ್ಯಾಂಟೋನ್ ಸ್ಟಾರ್ಮಿ ಸೀ ಮತ್ತು ಪ್ಯಾಂಟೋನ್ ಜಿನ್‌ಫ್ಯಾಂಡೆಲ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಆಸಕ್ತರು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಹಾಗೂ ಮೊಟೊರೊಲಾ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದು.
ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ 6.8 ಇಂಚಿನ 1.5K ಎಕ್ಸ್‌ಟ್ರೀಮ್ AMOLED ಡಿಸ್‌ಪ್ಲೇ ಹೊಂದಿದ್ದು ಇದರ ಜೊತೆಗೆ ಇದರ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP68 + IP69 ರೇಟಿಂಗ್ ಸೌಲಭ್ಯ ಪಡೆದುಕೊಂಡಿದೆ.
ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 90W (ವೈರ್ಡ್) ಮತ್ತು 15W (ವೈರ್‌ಲೆಸ್) ವೇಗದ ಚಾರ್ಜಿಂಗ್ ಜೊತೆಗೆ 5W ವೈರ್ಡ್ ಮತ್ತು ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.