ಭಾರತದಲ್ಲಿ Motorola Edge 70 Neo ಮೊಬೈಲ್ ಬಿಡುಗಡೆ; 7,000mAh ಬ್ಯಾಟರಿ ಹೈಲೈಟ್!
ಭಾರತದಲ್ಲಿ ಮೊಟೊರೊಲಾ ಎಡ್ಜ್ 70 ನಿಯೋ ಸ್ಮಾರ್ಟ್ಫೋನ್ ಲಾಂಚ್
ಮೊಟೊರೊಲಾ ಎಡ್ಜ್ 70 ನಿಯೋ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದಿದೆ
ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ
ಮೊಟೊರೊಲಾ ಮೊಬೈಲ್ ಸಂಸ್ಥೆಯು ಹೊಸದಾಗಿ Motorola Edge 70 Neo ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದ್ದು, ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್ಅಪ್ ಒಳಗೊಂಡಿರುವುದು ಪ್ರಮುಖ ಹೈಲೈಟ್ ಎನಿಸಿದೆ. ಇನ್ನು ಈ ಫೋನ್ ಪ್ಯಾಂಟೋನ್ ಗ್ರೇ ಲೈಲಾಕ್, ಪ್ಯಾಂಟೋನ್ ಮಿಲ್ಕಿ ಬ್ಲೂ, ಪ್ಯಾಂಟೋನ್ ಮೌಂಟೇನ್ ವ್ಯೂ ಮತ್ತು ಪ್ಯಾಂಟೋನ್ ಸೇಜ್ ಕಲರ್ ಆಯ್ಕೆಯನ್ನು ಹೊಂದಿದೆ. ಹಾಗಾದರೆ ಮೊಟೊರೊಲಾ ಎಡ್ಜ್ 70 ನಿಯೋ ಫೋನ್ ಬೆಲೆ, ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
Motorola Edge 70 Neo ಮೊಬೈಲ್ ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಮೊಟೊರೊಲಾ ಎಡ್ಜ್ 70 ನಿಯೋ ಫೋನ್ ಬಜೆಟ್ ದರದ ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ 8GB RAM + 128GB ವೇರಿಯಂಟ್ನ ಆಯ್ಕೆ ಹೊಂದಿದ್ದು ಇದರ ಬೆಲೆಯು 40,999 ರೂ.ಗಳು ಆಗಿದೆ. ಈ ಫೋನ್ ನಾಲ್ಕು ಕಲರ್ ಆಯ್ಕೆಯನ್ನು ಒಳಗೊಂಡಿದೆ. ಈ ಫೋನ್ ಡಿಸೆಂಬರ್ 1, 2026 ರಿಂದ Flipkart, Motorola ನ ಭಾರತೀಯ ವೆಬ್ಸೈಟ್ ಮತ್ತು ಪ್ರಮುಖ ರೀಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್ ಫೀಚರ್ಸ್
ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್ 6.8 ಇಂಚಿನ AMOLED ಡಿಸ್ಪ್ಲೇ ಅನ್ನು ಹೊಂದಿದ್ದು, ಇದು 144Hz ವರೆಗಿನ ರಿಫ್ರೆಶ್ ರೇಟ್ ಮತ್ತು 5,200 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ. 8GB RAM ಮತ್ತು 128GB ಸ್ಟೋರೇಜ್ ಪಡೆದಿದೆ. ಅಲ್ಲದೇ ಮೈಕ್ರೋ ಎಸ್ಡಿ ಕಾರ್ಡ್ ಬಳಸುವ ಮೂಲಕ ಸ್ಟೋರೇಜ್ ಅನ್ನು 1TB ವರೆಗೆ ವಿಸ್ತರಿಸಬಹುದು.
ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಪಡೆದಿದೆ. ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಅನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 7,000mAh ಬ್ಯಾಟರಿಯನ್ನು ಹೊಂದಿದೆ. ಇದು 45W ವೈರ್ಡ್ ಚಾರ್ಜಿಂಗ್, 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.