Moto Edge 60 Fusion 5G first Sale
ಭಾರತದಲ್ಲಿ ಇಂದು ಮೊದಲ ಬಾರಿಗೆ ಮೋಟೊರೋಲದ ಜಬರ್ದಸ್ತ್ ಬಜೆಟ್ Moto Edge 60 Fusion 5G ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕಮಾರಾಟಕ್ಕೆ ಕಾಲಿಡಲಿದೆ. ಈ ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಅನೇಕ ವಿಶೇಷ ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಮೊದಲ ಮಾರಾಟದಲ್ಲಿ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು 2500 ರೂಗಳವವರೆಗಿನ ಡಿಸ್ಕೌಂಟ್ ಸಹ ಪಡೆಯಬಹುದು. ಹಾಗಾದ್ರೆ ಈ ಹೊಸ Moto Edge 60 Fusion 5G ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಒಂದಿಷ್ಟು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯೋಣ.
Motorola Edge 60 Fusion ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹22,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹24,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು IDFC ಮತ್ತು Axis ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಬಳಸಿಕೊಂಡು EMI ಸೌಲಭ್ಯದೊಂದಿಗೆ ಹೆಚ್ಚುವರಿಯಾಗಿ 2500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು. ಅಂದ್ರೆ ಒಟ್ಟಾರೆಯಾಗಿ ಆಸಕ್ತ ಗ್ರಾಹಕರು ಈ ಹೊಚ್ಚ ಹೊಸ Motorola Edge 60 Fusion ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ ಜೊತೆಗೆ ಆರಂಭಿಕ ಕೇವಲ 20,499 ರೂಗಳಿಗೆ ಖರೀದಿಸಬಹುದು.
Motorola Edge 60 Fusion ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು ಇಂದು ಅಂದ್ರೆ 9ನೇ ಏಪ್ರಿಲ್ 2025 ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಇಂಡಿಯಾ ಮತ್ತು ಮೊಟೊರೊಲಾ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ.
Motorola Edge 60 Fusion ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ pOLED (2712×1220 ಪಿಕ್ಸೆಲ್‌ಗಳು) ಕ್ವಾಡ್ Curved AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದರಲ್ಲಿ ಫೋಟೋಗಳು ಮತ್ತು ವೀಡಿಯೊಗಳಿಗಾಗಿ Motorola Edge 60 Fusion ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಮತ್ತೊಂದು 13MP ಅಲ್ಟ್ರಾ ವೈಡ್ ಮತ್ತು ಕೊನೆಯದಾಗಿ ಮ್ಯಾಕ್ರೋ ಲೆನ್ಸ್ ಹೊಂದಿದೆ. ಕ್ರಮವಾಗಿ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
Motorola Edge 60 Fusion ಸ್ಮಾರ್ಟ್ಫೋನ್ MediaTek Dimensity 7400 ಪ್ರೊಸೆಸರ್‌ನೊಂದಿಗೆ ಬರುತ್ತದೆ. Motorola Edge 60 Fusion ಸ್ಮಾರ್ಟ್ಫೋನ್ ಆನ್‌ಬೋರ್ಡ್ ಸ್ಟೋರೇಜ್ ಮೆಮೊರಿಯನ್ನು 1024GB ವರೆಗೆ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ.