Samsung Galaxy S25 5G Price Cut
Samsung Galaxy S25 5G Price Cut: ಪ್ರಸ್ತುತ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್‌ನಲ್ಲಿ ಪ್ರಮುಖ ಹೆಸರಾಗಿರುವ ಸ್ಯಾಮ್‌ಸಂಗ್ (Samsung) ಈ ವರ್ಷ ಬಿಡುಗಡೆಯಾದ ತನ್ನ ಪ್ರಮುಖ Galaxy S25 5G ಸ್ಮಾರ್ಟ್‌ಫೋನ್ ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಗಮನಾರ್ಹ ಬೆಲೆ ಕಡಿತವನ್ನು ಘೋಷಿಸಿದೆ. ಬರೋಬ್ಬರಿ 12GB RAM ಮತ್ತು ಅತ್ಯುತ್ತಮ ಕ್ಯಾಮೆರಾ ಸೆನ್ಸರ್ಗಳೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಇತ್ತೀಚೆಗೆ ಬಿಡುಗಡೆಯಾದ ಈ Galaxy S25 Edge ನಂತರ ಈ ಅದ್ದೂರಿಯ ಬೆಲೆ ಇಳಿಕೆಯನ್ನು ಕಂಡಿದೆ. ಈ ಜಬರ್ದಸ್ತ್ ಡೀಲ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ 5G ಸ್ಮಾರ್ಟ್‌ಫೋನ್ ಖರೀದಿದಾರರಿಗೆ Galaxy S25 5G ಕೊಂಚ ಕಡಿಮೆ ಬೆಲೆಗೆ ನೀಡುತ್ತಿದೆ.
ಈ ಜಬರ್ದಸ್ತ್ Samsung Galaxy S25 5G ಸ್ಮಾರ್ಟ್ಫೋನ್ ಆರಂಭದಲ್ಲಿ 12GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ ಸಾಮಾನ್ಯವಾಗಿ 74,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಕಂಪನಿ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೇರವಾಗಿ ರೂ. 10,000 ರಿಯಾಯಿತಿಯೊಂದಿಗೆ ಲಭ್ಯವಿದೆ.
ಅಲ್ಲದೆ Samsung Galaxy S25 5G ಸ್ಮಾರ್ಟ್ಫೋನ್ ಇದರ ಜೊತೆಗೆ ಬಳಕೆದಾರರು ತಮ್ಮ ಅರ್ಹ ಹಳೆಯ ಸ್ಮಾರ್ಟ್ಫೋನ್ ಟ್ರೇಡ್ ಇನ್‌ಗಳಲ್ಲಿ ರೂ. 11,000 ಬೋನಸ್ ಸೇರಿದಂತೆ ವಿನಿಮಯ ಕೊಡುಗೆಯ ಮೂಲಕ ರೂ. 45,000 ವರೆಗೆ ರಿಯಾಯಿತಿ ಸಹ ಪಡೆಯಬಹುದು. ಈ ಎಲ್ಲಾ ರಿಯಾಯಿತಿಗಳನ್ನು ಒಟ್ಟುಗೂಡಿಸಿ ಪರಿಣಾಮಕಾರಿ ಆರಂಭಿಕ ಬೆಲೆ ರೂ. 53,999 ಕ್ಕೆ ಇಳಿಯುತ್ತದೆ.
ಇದನ್ನೂ ಓದಿ: Best Air Cooler: ಈ ಬೇಸಿಗೆಯಲ್ಲಿ ತಂಪಾದ ಗಾಳಿ ನೀಡುವ ಜಬರ್ದಸ್ತ್ ಏರ್ ಕೂಲರ್‌ಗಳ ಪಟ್ಟಿ ಇಲ್ಲಿದೆ!
Samsung Galaxy S25 ಸ್ಮಾರ್ಟ್ಫೋನ್ 6.15 ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಜೊತೆಗೆ 2600 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಫಾಸ್ಟ್ ಅನ್‌ಲಾಕಿಂಗ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ.
ಹುಡ್ ಅಡಿಯಲ್ಲಿ ಹ್ಯಾಂಡ್‌ಸೆಟ್ ಇತ್ತೀಚಿನ Qualcomm Snapdragon 8 Elite ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 512GB ವರೆಗಿನ ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ. ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು ಇದು 45W ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್ಫೋನ್ ಫೋಟೋಗ್ರಾಫಿಯಲ್ಲಿ ಅತ್ಯತ್ತಮ ಸೆನ್ಸರ್‌ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 10MP ಟೆಲಿಫೋಟೋ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಇದು 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Samsung Galaxy S25 ಸ್ಮಾರ್ಟ್ಫೋನ್ ವರ್ಧಿತ ಬಳಕೆದಾರ ಅನುಭವಕ್ಕಾಗಿ ಗ್ಯಾಲಕ್ಸಿ AI ಸಾಮರ್ಥ್ಯಗಳನ್ನು ಸಹ ಒಳಗೊಂಡಿದೆ.