ಹೊಸ Lava Virat V1 5G ಮೊಬೈಲ್‌ ಬಿಡುಗಡೆಗೆ ಡೇಟ್ ಫಿಕ್ಸ್‌! 6,000mAh ಬ್ಯಾಟರಿ ಖಚಿತ

HIGHLIGHTS

ಜುಲೈ 24 ರಂದು ಮಾರುಕಟ್ಟೆಗೆ ಬರಲಿದೆ ಲಾವಾ ವಿರಾಟ್‌ V1 5G ಫೋನ್‌

ಲಾವಾ ವಿರಾಟ್‌ V1 5G ಫೋನ್‌ UNISOC T8200 ಚಿಪ್‌ಸೆಟ್‌ ಪಡೆದಿರಲಿದೆ

ಲಾವಾದ ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರಲಿದೆ

ಹೊಸ Lava Virat V1 5G ಮೊಬೈಲ್‌ ಬಿಡುಗಡೆಗೆ ಡೇಟ್ ಫಿಕ್ಸ್‌! 6,000mAh ಬ್ಯಾಟರಿ ಖಚಿತ

ಅಗ್ಗದ ದರದ ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಲಾವಾ ಬ್ರಾಂಡ್‌ ಇದೀಗ ಭಾರತದಲ್ಲಿ ಹೊಸದಾಗಿ Lava Virat V1 5G ಹಾಗೂ ಲಾವಾ ವಿರಾಟ್‌ V1 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಕೆಲಸದಲ್ಲಿ ತೊಡಗಿದೆ. ಆ ಪೈಕಿ 5G ವೇರಿಯಂಟ್‌ ಫೋನ್‌ ಆಕ್ಟಾ ಕೋರ್ UNISOC T8200 ಚಿಪ್‌ಸೆಟ್‌ ಪ್ರೊಸೆಸರ್ ಅನ್ನು ಒಳಗೊಂಡಿರುವ ಜೊತೆಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಇನ್ನು ಈ ಎರಡೂ ಮಾಡೆಲ್‌ಗಳು 13MP AI ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ. ಹಾಗಾದರೆ ಮಾರುಕಟ್ಟೆಗೆ ಬರಲಿರುವ ಲಾವಾ ವಿರಾಟ್‌ V1 ಸರಣಿಯ ಫೋನ್‌ಗಳ ಲಾಂಚ್‌ ಡೇಟ್ ಹಾಗೂ ಇತರೆ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಪ್ರೀಮಿಯಂ ಫೀಚರ್ಸ್‌ ಇರುವ Xiaomi 17T ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

ಸದ್ಯದಲ್ಲೇ ಬರಲಿದೆ Lava Virat V1 5G

ಲಾವಾ ಮೊಬೈಲ್‌ ಕಂಪನಿಯು ಹೊಸ ಲಾವಾ ವಿರಾಟ್‌ V1 5G ಹಾಗೂ ಲಾವಾ ವಿರಾಟ್‌ V1 ಫೋನ್‌ಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಕಂಪನಿಯ ಈ ಎರಡು ಫೋನ್‌ಗಳು ಇದೇ ಜುಲೈ 24 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಲಾಂಚ್ ಕುರಿತು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆಯಾಗಿದೆ. ಅಲ್ಲದೇ ಲಾಂಚ್‌ ಬಳಿಕ ಈ ಎರಡು ಫೋನ್‌ಗಳು ಫ್ಲಿಪ್‌ಕಾರ್ಟ್‌ ಮೂಲಕ ಪ್ರತ್ಯೇಕ ಮಾರಾಟ ಕಾಣಲಿವೆ.

Lava Virat V1 5G Set to Launch on July 24

ಲಾವಾ ವಿರಾಟ್‌ V1 5G ಫೋನ್‌ ನಿರೀಕ್ಷಿತ ಫೀಚರ್ಸ್‌

ಮುಂಬರುವ ಹೊಸ ಲಾವಾ ವಿರಾಟ್‌ V1 5G ಫೋನ್‌ 6.75 ಇಂಚಿನ HD+ ಡಿಸ್ಪ್ಲೇ ಪಡೆದಿರಲಿದ್ದು, ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸಪೋರ್ಟ್‌ನಲ್ಲಿ ಇರಲಿದೆ. ಇನ್ನು ಈ ಫೋನ್‌ ಆಕ್ಟಾ ಕೋರ್ UNISOC T8200 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 4GB RAM + 64GB ಸ್ಟೋರೇಜ್‌ ಆಯ್ಕೆ ಹೊಂದಿರಲಿದೆ. ಹಾಗೆಯೇ 4GB virtual RAM ಸಪೋರ್ಟ್‌ ಇರಲಿದೆ ಎನ್ನಲಾಗಿದೆ.

ಲಾವಾ ವಿರಾಟ್‌ V1 5G ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 13MP AI ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರಲಿದೆ. ಅಲ್ಲದೇ ಧೂಳು ಮತ್ತು ನೀರು-ನಿರೋಧಕ್ಕಾಗಿ ಇದು IP64 ರೇಟಿಂಗ್ ಸೌಲಭ್ಯ ಹೊಂದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile