ಇಂದಿನಿಂದ Lava Virat V1 5G ಮತ್ತು Virat V1 ಮೊಬೈಲ್‌ಗಳ ಮಾರಾಟ ಶುರು!
ಇಂದು ಹೊಸ ಲಾವಾ ವಿರಾಟ್ V1 5G ಸರಣಿಯ ಫೋನ್‌ಗಳ ಸೇಲ್ ಶುರು
ಲಾವಾ ವಿರಾಟ್ V1 5G ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ
ಲಾವಾ ವಿರಾಟ್ V1 ಮೊಬೈಲ್ 5,000mAh ಬ್ಯಾಟರಿ ಸಪೋರ್ಟ್ ಒಳಗೊಂಡಿದೆ
ಲಾವಾ ಮೊಬೈಲ್ ಕಂಪನಿಯ ಇತ್ತೀಚಿನ ಹೊಸ Lava Virat V1 5G ಮತ್ತು Virat V1 ಮೊಬೈಲ್‌ಗಳು ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್‌ಗಳು ಇಂದು (ಜುಲೈ 31 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಲಿವೆ. ಈ ನೂತನ ಸ್ಮಾರ್ಟ್‌ಫೋನ್‌ಗಳು ಈ ಎರಡು ಮೊಬೈಲ್‌ಗಳು 6.75 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ರಮವಾಗಿ 6,000mAh ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಹಾಗೆಯೇ ಈ ಮೊಬೈಲ್‌ಗಳು 13MP ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇನ್ನು ಈ ಫೋನ್‌ಗಳು ಭಿನ್ನ ಕಲರ್ ಶೇಡ್‌ಗಳನ್ನು ಒಳಗೊಂಡಿವೆ. ಹಾಗಾದರೇ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಟೆಲಿಕಾಂನ 3 ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ
Lava Virat V1 5G ಮತ್ತು Virat V1 ಸೇಲ್ ಮಾಹಿತಿ
ದೇಶೀಯ ಮಾರುಕಟ್ಟೆಯಲ್ಲಿ ಲಾವಾ ಕಂಪನಿಯ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳು ನಾಳೆ (ಜುಲೈ 31 ರಿಂದ) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಖರೀದಿಗೆ ಲಭ್ಯವಾಗಿದೆ. ಆ ಪೈಕಿ ಲಾವಾ ವಿರಾಟ್ V1 ಫೋನಿನ 4GB + 64GB ವೇರಿಯಂಟ್ ಬೆಲೆಯು 8,999 ರೂ.ಗಳು ಆಗಿದೆ. ಲಾವಾ ವಿರಾಟ್ V1 5G ಫೋನಿನ 4GB + 64GB ವೇರಿಯಂಟ್ ಬೆಲೆಯು 11,999 ರೂ.ಗಳು ಆಗಿದೆ. ಲಾವಾ ವಿರಾಟ್ V1 5G ಮೊಬೈಲ್ ಆರ್ಯ ಬ್ಲೂ ಮತ್ತು ಸೋನಾರ್ ಗೋಲ್ಡ್ ಕಲರ್ ಆಯ್ಕೆ ಪಡೆದುಕೊಂಡಿದೆ. ಇನ್ನು ಲಾವಾ ವಿರಾಟ್ V1 ಮೊಬೈಲ್ ನೀಲಗಿರಿ ಬ್ಲೂ ಮತ್ತು ಹಿಮಾಲಯನ್ ಸಿಲ್ವರ್ ಶೆಡ್ ಬಣ್ಣಗಳ ಆಯ್ಕೆ ಒಳಗೊಂಡಿದೆ.

ಈ ಲಾವಾ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಹೀಗಿವೆ
ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಫೋನ್‌ಗಳು 6.75 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿವೆ. ಇನ್ನು ವಿರಾಟ್ V1 5G ಫೋನ್ ಯುನಿಸಾಕ್ T8200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ, ವಿರಾಟ್ V1 ಮೊಬೈಲ್ ಯುನಿಸಾಕ್ SC9863A ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಇವು 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಪಡೆದಿದ್ದು, ವರ್ಚುವಲ್ ಆಗಿ ಹೆಚ್ಚುವರಿ 4GB RAM ಮೂಲಕ ವಿಸ್ತರಿಸಬಹುದು.
ಹಾಗೆಯೇ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 13MP ಸೆನ್ಸಾರ್ ಅನ್ನು ಹೊಂದಿದ್ದು, AI ಸೌಲಭ್ಯ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ವಿರಾಟ್ V1 5G ಫೋನ್ 6,000mAh ಬ್ಯಾಟರಿ ಸಪೋರ್ಟ್ ಹೊಂದಿದ್ದು, ಲಾವಾ ವಿರಾಟ್ V1 ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
