Lava Storm Play 5G And Lava Storm Lite 5G
ಭಾರತೀಯ ಸ್ಮಾರ್ಟ್ಫೋನ್ ಕಂಪನಿ ಲಾವಾ (Lava) ತನ್ನ ಮುಂಬರಲಿರುವ ಹೊಸ Lava Storm Play 5G ಮತ್ತು Lava Storm Lite 5G ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಪ್ರಸ್ತುತ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ ಮತ್ತು ವಿನ್ಯಾಸ ಮತ್ತು ಕ್ಯಾಮೆರಾ ಫೀಚರ್ಗಳನ್ನು ಟೀಸರ್ ಮಾಡಿದೆ. ಕಂಪನಿ ಈಗಾಗಲೇ ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿರುವುದನ್ನು ಕಂಫಾರ್ಮ್ ಮಾಡಿದೆ. ಸ್ಮಾರ್ಟ್ಫೋನ್ಗಳು 50MP ಪ್ರೈಮರಿ ಕ್ಯಾಮೆರಾ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಗಳೊಂದಿಗೆ ಬರಲಿವೆ.
ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಲಾವಾ ಕಂಪನಿಯ ಲೇಟೆಸ್ಟ್ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿವೆ. ಕಂಪನಿ ಈ ಸರಣಿಯಲ್ಲಿ ಈಗಾಗಲೇ ಮೇಲೆ ತಿಳಿಸಿರುವಂತೆ Lava Storm Play 5G ಮತ್ತು Lava Storm Lite 5G ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲು ಸಿದ್ಧವಾಗಿದೆ.
ಲಾವಾ ಈ ಸ್ಮಾರ್ಟ್ಫೋನ್ ಇದೆ 13ನೇ ಜೂನ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಬಿಡುಗಡೆಯಾಗಲಿದೆ. ಕಂಪನಿ ಇದರ ಒಂದಿಷ್ಟು ಇಂಟ್ರೆಸ್ಟಿಂಗ್ ಫೀಚರ್ ಸಹ ಬಹಿರಂಗಪಡಿಸಿದ್ದು ಅವುಗಳ ಆಧಾರದ ಮೇರೆಗೆ ಈ ಸ್ಮಾರ್ಟ್ಫೋನ್ಗಳು ಸುಮಾರು 15,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Vivo Y300c ಸ್ಮಾರ್ಟ್ಫೋನ್ 6500mAh ಬ್ಯಾಟರಿಯೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಈ ಮುಂಬರಲಿರುವ Lava Storm Play 5G ಮತ್ತು Lava Storm Lite 5G ಸ್ಮಾರ್ಟ್ಫೋನ್ಗಳು ಬಿಡುಗಡೆಗೂ ಮುಂಚೆ ಒಂದಿಷ್ಟು ಫೀಚರ್ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಬರುವುದನ್ನು ಖಚಿತಪಡಿಸಲಾಗಿದೆ. ಅಲ್ಲದೆ ಮೊದಲಿಗೆ Lava Storm Play 5G ಸ್ಮಾರ್ಟ್ಫೋನ್ MediaTek Dimensity 7060 ಪ್ರೊಸೆಸರ್ನೊಂದಿಗೆ ಬಂದರೆ ಇದರ ಮತ್ತೊಂದು Lava Storm Lite 5G ಸ್ಮಾರ್ಟ್ಫೋನ್ MediaTek Dimensity 6400 ಪ್ರೊಸೆಸರ್ನೊಂದಿಗೆ ಬರುವುದಾಗಿ ಕಂಪನಿ ಪೋಸ್ಟ್ ಮಾಡಿದೆ.
ಇದನ್ನು ಹೊರೆತು ಪಡಿಸಿ ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವ ಈ ಎರಡು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸೈನಿಂಗ್ ಮತ್ತು ಹೊಸ ಲುಕ್ ಮಾದರಿಯಲ್ಲಿ ಬಿಡುಗಡೆಯಗಳಿವೆ. ಅಲ್ಲದೆ ಸ್ಮಾರ್ಟ್ಫೋನ್ಗಳು ಸುಮಂರು 5000mAh ಬ್ಯಾಟರಿ ಮತ್ತು 25w ಫಾಸ್ಟ್ ಚಾರ್ಜ್ ಜೊತೆಗೆ ಬರುವುದಾಗಿ ನಿರೀಕ್ಷಿಸಬಹುದು. ಅಲ್ಲದೆ ಆಂಡ್ರಾಯ್ಡ್ 15 ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದುವ ನಿರೀಕ್ಷೆಗಳಿವೆ.