Realme Narzo 70 Pro 5G ಖರೀದಿಸುವವರಿಗೆ Jio ಅದ್ದೂರಿಯ 10,000 ರೂಗಳ ಕಾಂಬೋ ಆಫರ್ ನೀಡುತ್ತಿದೆ!

Realme Narzo 70 Pro 5G ಖರೀದಿಸುವವರಿಗೆ Jio ಅದ್ದೂರಿಯ 10,000 ರೂಗಳ ಕಾಂಬೋ ಆಫರ್ ನೀಡುತ್ತಿದೆ!
HIGHLIGHTS

Realme Narzo 70 Pro 5G ಫೋನ್ ಖರೀದಿಸುವವರಿಗೆ Jio ಅದ್ದೂರಿಯ 10,000 ರೂಗಳ ಕಾಂಬೋ ಆಫರ್!

Narzo 70 Pro 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಮೆಗಾಪಿಕ್ಸೆಲ್ Sony IMX890 ಕ್ಯಾಮೆರಾ!

Realme Narzo 70 Pro 5G ಫೋನ್ ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್‌ಗೆ 19,999 ರೂಗಳಾಗಿದೆ.

ಭಾರತದಲ್ಲಿ ರಿಯಲ್‌ಮಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ Realme Narzo 70 Pro 5G ಅನ್ನು ಬಿಡುಗಡೆಗೊಳಿಸಿದ್ದು ಇಂದು ಇದರ ಮಾರಾಟವನ್ನು ಹಮ್ಮಿಕೊಂಡಿದೆ. ಈ ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಮೆಗಾಪಿಕ್ಸೆಲ್ Sony IMX890 ಕ್ಯಾಮೆರಾ ಮತ್ತು 120Hz ರಿಫ್ರೆಶ್ ದರವನ್ನು ಒಳಗೊಂಡಿರುವ ಅಮೋಲ್ಡ್ ಡಿಸ್ಪ್ಲೇ ಹೊಂದಿರುವ ಈ Realme Narzo 70 Pro 5G ಫೋನ್ ಇಂದು ಮಾರಾಟಕ್ಕೆ ಸಿದ್ಧವಾಗಿದೆ. ಅಲ್ಲದೆ ಈ ಫೋನ್ ಕೆಲವು ಬ್ಯಾಂಕ್ ಮತ್ತು ಟೆಲಿಕಾಂ ಕೊಡುಗೆಗಳೊಂದಿಗೆ ಅದರಲ್ಲೂ ಈ ಫೋನ್ ಖರೀದಿಸುವವರಿಗೆ Jio ಅದ್ದೂರಿಯ 10,000 ರೂಗಳ ಕಾಂಬೋ ಆಫರ್ ಅನ್ನು ಪಡೆದುಕೊಳ್ಳಬಹುದು.

Realme Narzo 70 Pro 5G ಬೆಲೆ ಮತ್ತು ಆಫರ್ಗಳು

ಭಾರತದಲ್ಲಿ ನಿಮಗೆ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಲಭ್ಯವಿದ್ದು Realme Narzo 70 Pro 5G ಇಂದು ಮಧ್ಯಾಹ್ನ 12:00 ಗಂಟೆಗೆ ಮಾರಾಟವಾಗಲಿದೆ. ಈ ಸ್ಮಾರ್ಟ್ಫೋನ್ ಅನ್ನು ಆಸಕ್ತರು ಅಮೆಜಾನ್ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಸ್ಮಾರ್ಟ್ಫೋನ್ ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಗೋಲ್ಡ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

Jio offers benefits worth rs 10,000 on Realme Narzo 70 Pro 5G
Jio offers benefits worth rs 10,000 on Realme Narzo 70 Pro 5G

ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್‌ಗೆ 19,999 ರೂಗಳಾಗಿದ್ದು ಮತ್ತೊಂದು 8GB RAM ಮತ್ತು 256GB ಸ್ಟೋರೇಜ್‌ಗೆ 21,999 ರೂಗಳಿಗೆ ಲಭ್ಯವಿದೆ. ಕಂಪನಿ ಇದರ 128GB ಸ್ಟೋರೇಜ್ ರೂಪಾಂತರಕ್ಕೆ 1000 ರೂಗಳು ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 2000 ರೂಗಳ ಬಿಡುಗಡೆಯ ಆಫರ್ ನೀಡುತ್ತಿದೆ.

What is the Jio Narzo 70 Pro Series Offer 2024?

ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಮತ್ತೊಂದು ಅದ್ದೂರಿಯ ಆಫರ್ ನೀಡುವುದರೊಂದಿಗೆ “Jio Narzo 70 Pro Series Offer 2024” ಎಂಬ ಹೊಸ ಯೋಜನೆಯನ್ನು ನೀಡಿದೆ. ಈ ಹೊಸ Realme Narzo 70 Pro 5G ಸ್ಮಾರ್ಟ್ಫೋನ್ ಖರೀದಿಸಿ 2000 ರೂಗಳವರೆಗೆ ಕೂಪನ್ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿದ್ದಾರೆ ಪಡೆಯಬಹುದು. ಈ ಆಫರ್ ಅನ್ನು ಬಳಕೆದಾರರು 19ನೇ ಮಾರ್ಚ್ ನಂತರ ರೂ.399 ರೀಚಾರ್ಜ್ ಮಾಡುವ ಮೂಲಕ ಮೊದಲ ಬಾರಿಗೆ ಜಿಯೋ ನೆಟ್‌ವರ್ಕ್‌ನಲ್ಲಿ ಅರ್ಹ ಡಿವೈಸ್ಗಳಿಗೆ ಈ 2000 ರೂಗಳನ್ನು ನೀಡಲಾಗುತ್ತಿದೆ.

Jio offers benefits worth rs 10,000 on Realme Narzo 70 Pro 5G
Jio offers benefits worth rs 10,000 on Realme Narzo 70 Pro 5G

Also Read: Voter ID Card ಕಳೆದೋಯ್ತಾ? Download ಮಾಡುವುದು ಹೇಗೆ? ನಿಮಿಷದಲ್ಲೇ ಫೋಟೋವನ್ನು ಚೇಂಜ್ ಮಾಡಿ!

ಬಳಕೆದಾರರು ಮೈಜಿಯೋ ಅಪ್ಲಿಕೇಶನ್‌ನಲ್ಲಿ ಗ್ರಾಹಕರು ಸ್ವಿಗ್ಗಿ, ಅಜಿಯೊ, ಈಸೆಮಿಟ್ರಿಪ್, ಅಭಿಬಸ್‌ನಿಂದ ಕೂಪನ್ ಕ್ಯಾಶ್‌ಬ್ಯಾಕ್‌ ನಿಮಗೆ 40 ಡಿಸ್ಕೌಂಟ್ ಕೂಪನ್‌ಗಳು ಪ್ರತಿ ಕೂಪನ್ 50 ರೂಗಳ ಪ್ರತಿಯಾಗಿದ್ದು ಇದು ನಿಮ್ಮ MyJio ಅಪ್ಲಿಕೇಶನ್‌ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಇದನ್ನು ನೀವು ಮಾಡುವ ಪ್ರತಿ ರೀಚಾರ್ಜ್‌ಗೆ ಒಂದೊಂದಾಗಿ ಬಳಸಬಹುದು. ಇದರೊಂದಿಗೆ ಹೆಚ್ಚುವರಿಯಾಗಿ ಖರೀದಿದಾರರು 2,299 ರೂಪಾಯಿ ಮೌಲ್ಯದ ಎಲ್ಲಾ ಹೊಸ Realme Buds T300 ಉಚಿತ ಉಡುಗೊರೆಯಾಗಿ ಪಡೆಯುತ್ತಾರೆ.

Realme Narzo 70 Pro 5G ಫೀಚರ್ ಮತ್ತು ವಿಶೇಷಣಗಳು

ಸ್ಲಿಮ್ ಬೆಜೆಲ್‌ಗಳು ಮತ್ತು ಹೋಲ್-ಪಂಚ್ ಡಿಸ್ಪ್ಲೇಯೊಂದಿಗೆ 6.7 ಇಂಚಿನ ಅಮೋಲ್ಡ್ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು FHD+ ರೆಸಲ್ಯೂಶನ್ ಅನ್ನು ಹೊಂದಿದೆ. MediaTek Dimensity 7050 5G ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಫೋನ್ ತನ್ನ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು Mali-G68 GPU ನೊಂದಿಗೆ ತಲ್ಲೀನಗೊಳಿಸುವ ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಅನುಭವಗಳನ್ನು ನೀಡುತ್ತದೆ. Realme Narzo 70 Pro 5G ಟಚ್‌ಲೆಸ್ ಆಪರೇಷನ್‌ಗಾಗಿ ಏರ್ ಗೆಸ್ಚರ್ ಕಂಟ್ರೋಲ್‌ಗಳನ್ನು ಮತ್ತು 3D VC ಕೂಲಿಂಗ್ ಸಿಸ್ಟಮ್ ಅನ್ನು ಪರಿಚಯಿಸುತ್ತದೆ.

Jio offers benefits worth rs 10,000 on Realme Narzo 70 Pro 5G
Jio offers benefits worth rs 10,000 on Realme Narzo 70 Pro 5G

Realme Narzo 70 Pro 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 2X ಇನ್-ಸೆನ್ಸರ್ ಜೂಮ್ ಜೊತೆಗೆ 50MP ಮೆಗಾಪಿಕ್ಸೆಲ್ ಸೋನಿ IMX890 ಪ್ರೈಮರಿ ಸೆನ್ಸರ್ ಅನ್ನು ನೀಡುತ್ತದೆ. ಜೊತೆಗೆ ಸೆಲ್ಫಿಗಳು ಮತ್ತು ವೀಡಿಯೊಗಳಿಗಾಗಿ 16MPಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ. ವರ್ಧಿತ ಇಮೇಜ್ ಪ್ರೊಸೆಸಿಂಗ್‌ಗಾಗಿ ಫೋನ್ ಮಾಸ್ಟರ್‌ಶಾಟ್ ಅಲ್ಗಾರಿದಮ್ ಅನ್ನು ಸಹ ಹೊಂದಿದೆ. 5000mAh ಬ್ಯಾಟರಿ ಮತ್ತು 67W Supervooc ಚಾರ್ಜ್‌ನೊಂದಿಗೆ Realme Narzo 70 Pro ದೀರ್ಘಾವಧಿಯ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. Realme Narzo 70 Pro ಅನುಕೂಲಕರವಾದ ಏರ್ ಗೆಸ್ಚರ್ ನಿಯಂತ್ರಣಗಳನ್ನು ಬಳಕೆದಾರರು ಫೋನ್ ಟಚ್ ಮಾಡದೇ ಫೋನ್‌ ಬಳಸಲು ಅನುವು ಮಾಡಿಕೊಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo