iQOO Neo 10
ಐಕ್ಯೂ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ ಪವರ್ಫುಲ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಮತ್ತು 120W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ iQOO Neo 10 ಸ್ಮಾರ್ಟ್ಫೋನ್ ನಾಳೆ ಅಂದರೆ 03ನೇ ಜೂನ್ 2025 ರಿಂದ ಮಧ್ಯಾಹ್ನ 12:00 ಗಂಟೆಯಿಂದ ಮಾರಾಟಕ್ಕೆ ಬರಲಿದೆ. ಈ iQOO Neo 10 ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್‌ನಲ್ಲಿ ಆರಂಭಿಕ 27,999 ರೂಗಳಿಗೆ ಮಾರಾಟವಾಗಲಿದೆ. ಅಲ್ಲದೆ iQOO Neo 10 ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಸೇರಿ ಆಕರ್ಷಕ ಬೆಲೆಯೊಂದಿದೆ ಮಾರಾಟಕ್ಕೆ ಸಿದ್ಧವಾಗಿದೆ.
iQOO Neo 10 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಾಲ್ಕು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹29,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹31,999 ರೂಗಳಿಗೆ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹33,999 ರೂಗಳಿಗೆ ಕೊನೆಯದಾಗಿ ಇದರ 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹38,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: EPFO 3.0 Update: ಪಿಎಫ್ ಗ್ರಾಹಕರಿಗೆ ಗುಡ್ ನ್ಯೂಸ್! ಮುಂದಿನ ದಿನಗಳಲ್ಲಿ ATM ಮೂಲಕ ಹಣ ವಿತ್ ಡ್ರಾ ಮಾಡಬಹುದು!
ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ iQOO Neo 10 ಸ್ಮಾರ್ಟ್ಫೋನ್ ಆರಂಭಿಕ ಮಾದರಿ ಕೇವಲ 27,999 ರೂಗಳಿಗೆ ಖರೀದಿಸಬಹುದು. iQOO Neo 10 ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಮಧ್ಯಾಹ್ನ 12:00 ಗಂಟೆಯಿಂದ ಅಮೆಜಾನ್ ಇಂಡಿಯಾ ಮತ್ತು ಐಕ್ಯೂ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ.
iQOO Neo 10 ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.78 ಇಂಚಿನ AMOLED (2800×1260 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ iQOO Neo 10 ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೋನಿ IMX882 ಸೆನ್ಸರ್ ಜೊತೆಗೆ OIS ಸಪೋರ್ಟ್ ಮಾಡುತ್ತದೆ. ಮತ್ತೊಂದು 8MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ.
ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP65 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ. iQOO Neo 10 ಸ್ಮಾರ್ಟ್ಫೋನ್ Snapdragon 8s Gen 4 ಪ್ರೊಸೆಸರ್‌ನೊಂದಿಗೆ ಬರುತ್ತದೆ.
iQOO Z10 ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 7000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 120W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.