ಇಂದು ಹೊಸ ಕಲರ್‌ ಆಯ್ಕೆಯಲ್ಲಿ iQOO Neo 10 ಲಾಂಚ್‌! ಫೀಚರ್ಸ್‌ ನೋಡಿ

HIGHLIGHTS

ಇಂದು ಐಕ್ಯೂ ನಿಯೋ 10 ಹೊಸ ಬಣ್ಣಗಳಲ್ಲಿ ಲಗ್ಗೆ ಇಡಲಿದೆ

ಐಕ್ಯೂನ ಈ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿರಲಿದೆ

ಈ ಮೊಬೈಲ್‌ Alpine White ಹಾಗೂ Asphalt Black ಕಲರ್ ಆಯ್ಕೆಯಲ್ಲಿ ಬರಲಿದೆ

ಇಂದು ಹೊಸ ಕಲರ್‌ ಆಯ್ಕೆಯಲ್ಲಿ iQOO Neo 10 ಲಾಂಚ್‌! ಫೀಚರ್ಸ್‌ ನೋಡಿ

ಐಕ್ಯೂ ಮೊಬೈಲ್‌ ಕಂಪನಿಯ iQOO Neo 10 ಮೊಬೈಲ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡಿದೆ. ಇದೀಗ iQOO ಕಂಪನಿಯು ಈ ಮೊಬೈಲ್ ಅನ್ನು ಹೊಸ ಎರಡು ಕಲರ್‌ ವೇರಿಯಂಟ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅವುಗಳು ಕ್ರಮವಾಗಿ Alpine White ಹಾಗೂ Asphalt Black ಕಲರ್‌ ಆಯ್ಕೆಗಳಾಗಿವೆ. ಅಂದಹಾಗೆ ಈ ಫೋನ್‌ ಇನ್ಫರ್ನೊ ರೆಡ್ ಮತ್ತು ಟೈಟಾನಿಯಂ ಕ್ರೋಮ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಫೋನ್‌ Snapdragon 8 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಲ್ಲದೇ ಈ ಮೊಬೈಲ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಹಾಗಾದರೆ ಐಕ್ಯೂ ನಿಯೋ 10 ಮೊಬೈಲ್‌ ಹೊಸ ಕಲರ್ ಲಾಂಚ್ ಮಾಹಿತಿ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 32MP ಸೆಲ್ಫಿ ಕ್ಯಾಮೆರಾ ಇರುವ Realme GT 7T ಸ್ಮಾರ್ಟ್‌ಫೋನ್‌ ಈಗ ಆಫರ್‌ನಲ್ಲಿ ಲಭ್ಯ!

iQOO Neo 10 ಹೊಸ ಲುಕ್‌ನಲ್ಲಿ ಪ್ರವೇಶ

iQOO ಕಂಪನಿಯ ಐಕ್ಯೂ ನಿಯೋ 10 ಮೊಬೈಲ್‌ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಇಂದು (ಏಪ್ರಿಲ್‌ 30 ರಂದು) ಮಧ್ಯಾಹ್ನ 12 ಗಂಟೆಗೆ ಹೊಸ Alpine White ಹಾಗೂ Asphalt Black ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಇನ್ನು ಈ ಮೊಬೈಲ್‌ನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆ 34,999 ರೂ.ಗಳು ಆಗಿದೆ. ಹಾಗೆಯೇ 16GB + 512GB ವೇರಿಯಂಟ್‌ ದರವು 43,999 ರೂ.ಗಳು ಆಗಿದೆ. ಸದ್ಯ ಇನ್ಫರ್ನೊ ರೆಡ್ ಮತ್ತು ಟೈಟಾನಿಯಂ ಕ್ರೋಮ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಲಾಂಚ್ ಬಳಿಕ ಅಮೆಜಾನ್‌ನಲ್ಲಿ ಹೊಸ ಕಲರ್ ವೇರಿಯಂಟ್‌ಗಳು ಖರೀದಿಗೆ ಲಭ್ಯವಾಗಲಿವೆ.

iQOO Neo 10

ಐಕ್ಯೂ ನಿಯೋ 10 ಫೋನಿನ ಫೀಚರ್ಸ್‌

ಐಕ್ಯೂ ನಿಯೋ 10 ಮೊಬೈಲ್‌ 6.78 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 144Hz ರಿಫ್ರೆಶ್ ರೇಟ್‌ ಸಪೋರ್ಟ್ ಹೊಂದಿದೆ. ಅಲ್ಲದೇ ಈ ಡಿಸ್‌ಪ್ಲೇಯು 1,260×2,800 ಪಿಕ್ಸಲ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ Snapdragon 8 Gen 3 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM + 128GB ಹಾಗೂ 16GB + 512GB ವೇರಿಯಂಟ್‌ ಆಯ್ಕೆ ಪಡೆದಿದೆ.

ಹಾಗೆಯೇ ಐಕ್ಯೂ ನಿಯೋ 10 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 MP ಸೆನ್ಸಾರ್‌ನ ಕ್ಯಾಮೆರಾ ಪಡೆದಿದೆ. ಈ ಮೊಬೈಲ್‌ 7,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಹೊಂದಿದೆ. ಇದಕ್ಕೆ ಪೂರಕವಾಗಿ ಈ ಮೊಬೈಲ್‌ 120W ವೈರ್ಡ್ ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಸಹ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile