ಇಂದಿನಿಂದ iQOO 15R ಮೊಬೈಲ್‌ ಖರೀದಿಗೆ ಲಭ್ಯ! ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

HIGHLIGHTS

ಇಂದಿನಿಂದ (ಮಾರ್ಚ್‌ 3 ರಂದು) ಐಕ್ಯೂ 15R ಮೊಬೈಲ್‌ ಮಾರಾಟ ಪ್ರಾರಂಭ

ಈ ಫೋನ್‌ ಡಾರ್ಕ್ ನೈಟ್ ಮತ್ತು ಟ್ರಯಂಫ್ ಸಿಲ್ವರ್ ಕಲರ್‌ ಆಯ್ಕೆ ಹೊಂದಿದೆ

ಹೊಸ ಐಕ್ಯೂ 15R ಮೊಬೈಲ್‌ Snapdragon 8 Gen 5 ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ

ಇಂದಿನಿಂದ iQOO 15R ಮೊಬೈಲ್‌ ಖರೀದಿಗೆ ಲಭ್ಯ! ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

ಲೀಡಿಂಗ್‌ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾಗಿರುವ ಐಕ್ಯೂ ಸಂಸ್ಥೆಯ ಹೊಸ iQOO 15R ಮೊಬೈಲ್‌ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಐಕ್ಯೂ 15R ಮೊಬೈಲ್‌ನ ಸೇಲ್‌ ಇಂದಿನಿಂದ ( ಮಾರ್ಚ್ 3 ರಂದು ) ಪ್ರಾರಂಭವಾಗಲಿದೆ. ಈ ಮೊಬೈಲ್‌ ಕ್ವಾಲ್ಕಾಮ್ Snapdragon 8 Gen 5 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು ಜೊತೆಗೆ 7600mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇಂದು ಮಾರಾಟ ಶುರು ಮಾಡಲಿರುವ ಐಕ್ಯೂ 15R ಮೊಬೈಲ್‌ ಡಾರ್ಕ್ ನೈಟ್ ಮತ್ತು ಟ್ರಯಂಫ್ ಸಿಲ್ವರ್ ಕಲರ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಐಕ್ಯೂ 15R ಮೊಬೈಲ್‌ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Holi Wishes 2026 in Kannada: ಹೋಳಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಬೆಸ್ಟ್‌ ಮೆಸೆಜ್‌ಗಳು

iQOO 15R ಸೇಲ್‌: ಬೆಲೆ ಹಾಗೂ ಲಭ್ಯತೆ ಮಾಹಿತಿ

ಐಕ್ಯೂ 15R ಮೊಬೈಲ್‌ ಇಂದಿನಿಂದ (ಮಾರ್ಚ್ 3 ರಂದು) ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭ ಮಾಡಲಿದೆ. ಇದರ 8 GB + 256 GB ವೇರಿಯಂಟ್‌ ಬೆಲೆ 44,999 ರೂಗಳು ಆಗಿದೆ. ಅದೇ ರೀತಿ 12 GB + 256 GB ವೇರಿಯಂಟ್‌ ದರವು 47,999 ರೂಗಳು ಆಗಿದ್ದು ಇದರ 12 GB + 512 GB ವೇರಿಯಂಟ್‌ 52,999 ರೂಗಳ ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡಾರ್ಕ್ ನೈಟ್ ಮತ್ತು ಟ್ರಯಂಫ್ ಸಿಲ್ವರ್ ಕಲರ್‌ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್ ಮತ್ತು ಐಕ್ಯೂ ಇ-ಸ್ಟೋರ್, ವಿವೋ ಎಕ್ಸ್‌ಕ್ಲೂಸಿವ್ ಸ್ಟೋರ್ ಮತ್ತು ರಿಲಯನ್ಸ್ ಸ್ಟೋರ್‌ಗಳ ಮೂಲಕ ಪ್ರಿ-ಬುಕಿಂಗ್ ಮಾಡಬಹುದಾಗಿದೆ.

iQOO 15R

iQOO 15R ಮೊಬೈಲ್‌ ಫೀಚರ್ಸ್‌ ಹೀಗಿವೆ

ಹೊಸ iQOO 15R ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.59 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಮೊಬೈಲ್‌ ಸ್ಕ್ರೀನ್‌ 5,000 ನಿಟ್ಸ್ ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ 2750 x 1260 ಪಿಕ್ಸಲ್‌ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ ಈ ನೂತನ ಫೋನ್‌ ಕ್ವಾಲ್ಕಾಮ್ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿದ್ದು ಇದಕ್ಕೆ ಪೂರಕವಾಗಿ Origin OS 6.0 ಸಾಫ್ಟ್‌ವೇರ್ ಒಳಗೊಂಡಿದೆ. ಹಾಗೆಯೇ 256 GB ಹಾಗೂ 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಇನ್ನು iQOO 15R ಮೊಬೈಲ್‌ 45W ವೈರ್ಡ್ ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ ಜೊತೆಗೆ 7600mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ ಹಾಗೂ ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಜೊತೆಗೆ ಈ ಮೊಬೈಲ್‌ IP68 + IP69 ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo