64MP Sony ಸೆನ್ಸರ್ ಮತ್ತು 144Hz ಡಿಸ್ಪ್ಲೇಯ Infinix Note 50s 5G+ ಬಿಡುಗಡೆ! ಫೀಚರ್ ಮತ್ತು ಬೆಲೆ ನೋಡಿ ಫಿಧಾ ಆಗೋದು ಕಂಫಾರ್ಮ್!

64MP Sony ಸೆನ್ಸರ್ ಮತ್ತು 144Hz ಡಿಸ್ಪ್ಲೇಯ Infinix Note 50s 5G+ ಬಿಡುಗಡೆ! ಫೀಚರ್ ಮತ್ತು ಬೆಲೆ ನೋಡಿ ಫಿಧಾ ಆಗೋದು ಕಂಫಾರ್ಮ್!
HIGHLIGHTS

Infinix Note 50s 5G+ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.

Infinix Note 50s 5G+ ಸ್ಮಾರ್ಟ್ಫೋನ್ ಆರಂಭಿಕ ಮಾದರಿ ಬ್ಯಾಂಕ್ ಆಫರ್ ಜೊತೆಗೆ ಕೇವಲ 14,999 ರೂಗಳಿಗೆ ಲಭ್ಯ.

Infinix Note 50s 5G+ ಸ್ಮಾರ್ಟ್ಫೋನ್ Dimensity 7300 Ultimate ಚಿಪ್‌ಸೆಟ್ ಮತ್ತು 64MP Sony ಸೆನ್ಸರ್ ಹೊಂದಿದೆ.

Infinix Note 50s 5G+ launched: ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ Infinix Note 50s 5G+ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ MediaTek Dimensity 7300 Ultimate ಚಿಪ್‌ಸೆಟ್ ಮತ್ತು 64MP Sony ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯೊಂದಿಗೆ ಬರುತ್ತದೆ. ಹಾಗಾದ್ರೆ ಇದರ ಬೆಲೆ ಎಷ್ಟು ಮತ್ತು ಮಾರಾಟ ಯಾವಾಗ ಎಲ್ಲವನ್ನು ಈ ಕೆಳಗೆ ತಿಳಿಯಿರಿ.

ಭಾರತದಲ್ಲಿ Infinix Note 50s 5G+ ಬೆಲೆ ಮತ್ತು ಲಭ್ಯತೆಯ ವಿವರಗಳೇನು?

ಭಾರತದಲ್ಲಿ ಇಂದು ಬಿಡುಗಡೆಯಾದ ಈ Infinix Note 50s 5G+ ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದದಾದರೆ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 15,999 ರಿಂದ ಪ್ರಾರಂಭವಾದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 17,999 ರೂಗಳಾಗಿವೆ. ಸ್ಮಾರ್ಟ್ಫೋನ್ 24ನೇ ಏಪ್ರಿಲ್ 2025 ರಿಂದ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮೊದಲ ಮಾರಾಟಕ್ಕೆ ಬರಲಿದೆ.

Also Read: ಸದ್ದಿಲ್ಲದೇ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಉಚಿತವಾಗಿ ಜೆಮಿನಿ ಲೈವ್ (Gemini Live) ಫೀಚರ್ ನೀಡಿದ ಗೂಗಲ್!

Infinix Note 50s 5G+ launched in India
Infinix Note 50s 5G+ launched in India

ಇದರೊಂದಿಗೆ ಆಸಕ್ತ ಬಳಕೆದಾರರು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು. ಈ ಮೂಲಕ ಆರಂಭಿಕ ಕೇವಲ 14,999 ರೂಗಳಿಗೆ ಖರೀದಿಸಬಹುದು. Infinix Note 50s 5G+ ಸ್ಮಾರ್ಟ್ಫೋನ್ Marine Blue, Ruby Red ಮತ್ತು Titanium Grey ಎಂಬ 3 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Infinix Note 50s 5G+ ಫೀಚರ್ಗಳೇನು ತಿಳಿಯಿರಿ!

Infinix Note 50s 5G+ ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ-HD+ 3D ಬಾಗಿದ AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ ಹೊಂದಿದೆ. ಹ್ಯಾಂಡ್‌ಸೆಟ್ ಸ್ಮಾರ್ಟ್‌ಫೋನ್ MediaTek Dimensity 7300 Ultimate ಚಿಪ್‌ಸೆಟ್ ಆರಂಭಿಕ 8GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 15 ಆಧಾರಿತ ತಮ್ಮದೇಯಾದ XOS 15 ನೊಂದಿಗೆ ಬರುತ್ತದೆ. ಇದು ಗೇಮಿಂಗ್ ಮಾಡುವಾಗ 90fps ಫ್ರೇಮ್ ದರವನ್ನು ಬೆಂಬಲಿಸುತ್ತದೆ.

Infinix Note 50s 5G+ ಕ್ಯಾಮೆರಾ ಮಾಹಿತಿಗಳೇನು?

Infinix Note 50s 5G+ಸ್ಮಾರ್ಟ್ಫೋನ್ 64MP ಮೆಗಾಪಿಕ್ಸೆಲ್ ಸೋನಿ IMX682 ಪ್ರೈಮರಿ ಬ್ಯಾಕ್ ಕ್ಯಾಮೆರಾ ಹೊಂದಿದ್ದು 30fps ಅಲ್ಲಿ 4K ವೀಡಿಯೊಗಳನ್ನು ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ ಕ್ಯಾಮೆರಾ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 13MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು ಡ್ಯುಯಲ್ ವೀಡಿಯೊ ಕ್ಯಾಪ್ಚರ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ವಿಶೇಷವಾಗಿ AI ಪರಿಕರಗಳು ಮತ್ತು ಫೋಲಾಕ್ಸ್ AI ಅಸಿಸ್ಟಂಟ್, AI ವಾಲ್‌ಪೇಪರ್ ಜನರೇಟರ್, AIGC ಮೋಡ್ ಮತ್ತು AI ಎರೇಸರ್‌ನಂತಹ ಫೀಚರ್ಗಳನ್ನು ಹೊಂದಿದೆ.

Infinix Note 50s 5G+ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡಿದ್ದು ಇದು 45W ವೈರ್ಡ್ ಆಲ್-ರೌಂಡ್ ಫಾಸ್ಟ್‌ಚಾರ್ಜ್ 3.0 ಗೆ ಬೆಂಬಲವನ್ನು ಹೊಂದಿದೆ. ಇದು 60 ನಿಮಿಷಗಳಲ್ಲಿ ಫೋನ್ ಅನ್ನು ಒಂದರಿಂದ 100% ಪ್ರತಿಶತದವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಫೋನ್ IP64 ನೀರು ಮತ್ತು ಧೂಳು-ನಿರೋಧಕ ರೇಟಿಂಗ್ ಅನ್ನು ಹೊಂದಿದೆ ಮತ್ತು MIL-STD-810H ಮಿಲಿಟರಿ-ದರ್ಜೆಯ ಬಾಳಿಕೆ ಪ್ರಮಾಣೀಕರಣವನ್ನು ಹೊಂದಿದೆ. ಸುರಕ್ಷತೆಗಾಗಿ ಹ್ಯಾಂಡ್‌ಸೆಟ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo