ಭಾರತದಲ್ಲಿ ಇನ್ಫಿನಿಕ್ಸ್ ಕಂಪನಿ ತನ್ನ ಇತ್ತೀಚಿಗೆ ಬಿಡುಗಡೆಯಾದ Infinix Note 50s 5G+ ಬೆಲೆಯನ್ನು ಕಡಿಮೆ ಮಾಡಿ ಲಿಮಿಟೆಡ್ ಸಮಯಕ್ಕೆ ಮಾರಾಟ ಮಾಡುತ್ತಿದೆ. ಈ 5G ಸ್ಮಾರ್ಟ್ಫೋನ್ ಒಟ್ಟು ಎರಡು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಅಲ್ಲದೆ Infinix Note 50s 5G+ ಸ್ಮಾರ್ಟ್ಫೋನ್ 144Hz AMOLED ಡಿಸ್ಪ್ಲೇ ಮತ್ತು MediaTek Dimensity 7300 ಅಲ್ಟಿಮೇಟ್ ಚಿಪ್‌ಸೆಟ್‌ನೊಂದಿಗೆ ಫ್ಲಿಪ್ಕಾರ್ಟ್ ಮೂಲಕ ಜಬರ್ದಸ್ತ್ ಡೀಲ್ ಜೊತೆಗೆ ಬರುತ್ತದೆ. ಸ್ಮಾರ್ಟ್ಫೋನ್ 64MP ಮೆಗಾಪಿಕ್ಸೆಲ್ ಸೆನ್ಸರ್ ಪ್ರೈಮರಿ ಕ್ಯಾಮೆರಾ ಮತ್ತು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ.
ಭಾರತದಲ್ಲಿ Infinix Note 50s 5G+ ಸ್ಮಾರ್ಟ್ಫೋನ್ ಆರಂಭಿಕ ಹೊಸ 8GB RAM + 128GB ಸ್ಟೋರೇಜ್ ರೂಪಾಂತರವನ್ನು ಪ್ರಸ್ತುತ 15,999 ರೂಗಳಿಗೆ ಕ್ರಮವಾಗಿ 8GB RAM + 256GB ಸ್ಟೋರೇಜ್ ರೂಪಾಂತರವನ್ನು ಪ್ರಸ್ತುತ ₹17,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದು ಬರ್ಗಂಡಿ ರೆಡ್, ಮೆರೈನ್ ಡ್ರಿಫ್ಟ್ ಬ್ಲೂ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಆದರೆ ಈ Infinix Note 50s 5G+ ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹13,550 ರೂಗಳ ವರೆಗೆ ಡಿಸ್ಕೌಂಟ್ ಸಹ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Samsung Galaxy M36 5G: ಸ್ಯಾಮ್‌ಸಂಗ್‌ನ ಮುಂಬರಲಿರುವ ಬಜೆಟ್ 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್!
Infinix Note 50s 5G+ ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಪೂರ್ಣ-HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು 8GB ವರೆಗೆ RAM ಮತ್ತು 256GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ.
Infinix Note 50s 5G+ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಯೂನಿಟ್ ಹೊಂದಿದ್ದು ಇದರಲ್ಲಿ 64MP ಮೆಗಾಪಿಕ್ಸೆಲ್ ಸೋನಿ IMX682 ಪ್ರೈಮರಿ ಕ್ಯಾಮೆರಾ ಸೇರಿದೆ. ಇದು ಮುಂಭಾಗದಲ್ಲಿ 13MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಸಹ ಪಡೆಯುತ್ತದೆ. ಫೋನ್ ಮಿಲಿಟರಿ-ಗ್ರೇಡ್ (MIL-STD-810H) ಬಾಳಿಕೆ ಪ್ರಮಾಣೀಕರಣವನ್ನು ಹೊಂದಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹೊಂದಿದೆ.
ಇದು ಒನ್-ಟ್ಯಾಪ್ ಇನ್ಫಿನಿಕ್ಸ್ AI ಕಾರ್ಯವನ್ನು ಮತ್ತು ಹಲವಾರು AI-ಆಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ. ಸ್ಮಾರ್ಟ್ಫೋನ್ 5,500mAh ಬ್ಯಾಟರಿಯನ್ನು ಹೊಂದಿದ್ದು ಅದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್‌ನ ಮೆರೈನ್ ಡ್ರಿಫ್ಟ್ ಬಣ್ಣದ ರೂಪಾಂತರವು ಸೆಂಟ್ ಟೆಕ್ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಮೈಕ್ರೋಎನ್‌ಕ್ಯಾಪ್ಸುಲೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಕ್ ಪ್ಯಾನಲ್ ಆಕರ್ಷಕವಾಗಿ ಮಾಡುತ್ತದೆ.