HMD Vibe 2 5G ಸ್ಮಾರ್ಟ್‌ಫೋನ್‌ ಇಂದು ಮತ್ತೆ ಖರೀದಿಗೆ ಲಭ್ಯ! ಫೀಚರ್ಸ್‌ ಗಮನಿಸಿ

HIGHLIGHTS

ಇಂದು (ಜೂನ್‌ 16 ರಂದು) ಮತ್ತೆ ಹೆಚ್‌ಎಮ್‌ಡಿ ವೈಬ್‌ 2 5G ಸೇಲ್‌

ಹೆಚ್‌ಎಮ್‌ಡಿ ವೈಬ್‌ 2 5G ಫೋನ್‌ 6,000mAh ಬ್ಯಾಟರಿ ಸೌಲಭ್ಯ ಪಡೆದಿದೆ

ಈ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿದೆ

HMD Vibe 2 5G ಸ್ಮಾರ್ಟ್‌ಫೋನ್‌ ಇಂದು ಮತ್ತೆ ಖರೀದಿಗೆ ಲಭ್ಯ! ಫೀಚರ್ಸ್‌ ಗಮನಿಸಿ

HMD ಮೊಬೈಲ್‌ ಸಂಸ್ಥೆಯು ಇತ್ತೀಚಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ HMD Vibe 2 5G ಸ್ಮಾರ್ಟ್‌ಫೋನ್‌ ಈಗಾಗಲೇ ಮಾರಾಟ ಕಂಡಿದೆ. ಇಂದು (ಜೂನ್‌ 16 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ನಲ್ಲಿ ಮತ್ತೊಮ್ಮೆ ಸೇಲ್ ಶುರುವಾಗಲಿದೆ. ಈ ಬಜೆಟ್‌ ಬೆಲೆಯ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಈ ಮೊಬೈಲ್‌ ಕಾಸ್ಮಿಕ್ ಲ್ಯಾವೆಂಡರ್, ನಾರ್ಡಿಕ್ ಬ್ಲೂ ಮತ್ತು ಪೀಚ್ ಪಿಂಕ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಹೆಚ್‌ಎಮ್‌ಡಿ ವೈಬ್‌ 2 5G ಸ್ಮಾರ್ಟ್‌ಫೋನ್‌ ಮಾರಾಟದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 50MP ಸೆಲ್ಫಿ ಕ್ಯಾಮೆರಾ ಇರುವ Vivo V50 5G ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ! ಫೀಚರ್ಸ್‌ ನೋಡಿ

ಇಂದು ಮತ್ತೆ HMD Vibe 2 5G ಖರೀದಿಗೆ ಲಭ್ಯ

ನೂತನ ಹೆಚ್‌ಎಮ್‌ಡಿ ವೈಬ್‌ 2 5G ಫೋನ್‌ ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆದಿದೆ. ಈ ಮೊಬೈಲ್‌ ಇಂದು (ಜೂನ್‌ 16 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಮೊದಲ ಸೇಲ್‌ ಪ್ರಾರಂಭ ಮಾಡಲಿದೆ. ಈ ಮೊಬೈಲ್‌ನ ಆರಂಭಿಕ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 14,999 ರೂ.ಗಳು ಆಗಿದೆ. ಹಾಗೆಯೇ 4GB + 128GB ವೇರಿಯಂಟ್‌ ಬೆಲೆ 16,999 ರೂ.ಗಳು ಆಗಿದೆ. ಇನ್ನು ಈ ಮೊಬೈಲ್‌ ಕಾಸ್ಮಿಕ್ ಲ್ಯಾವೆಂಡರ್, ನಾರ್ಡಿಕ್ ಬ್ಲೂ ಮತ್ತು ಪೀಚ್ ಪಿಂಕ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

HMD Vibe 2 5G

ಹೆಚ್‌ಎಮ್‌ಡಿ ವೈಬ್‌ 2 5G ಫೀಚರ್ಸ್‌ ಹೀಗಿವೆ

ಹೆಚ್‌ಎಮ್‌ಡಿ ವೈಬ್‌ 2 5G ಮೊಬೈಲ್ 6.7 ಇಂಚಿನ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್‌ 720×1,600 ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಈ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಹೆಚ್‌ಎಮ್‌ಡಿ ವೈಬ್‌ 2 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಆಗಿದ್ದು, ಹಾಗೆಯೇ ಇದರ ಸೆಕೆಂಡರಿ ಬೇಸಿಕ್ ಸೆನ್ಸಾರ್‌ ಸೌಲಭ್ಯದಲ್ಲಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 18W ಚಾರ್ಜಿಂಗ್‌ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile